ಚಿಕ್ಕಬಳ್ಳಾಪುರ,ಮಾ.22- ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಇದೇ 24 ರಿಂದ ಏಪ್ರಿಲ್ 25ರವರೆಗೂ ವಾರಾಂತ್ಯ ಹೊರತುಪಡಿಸಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತದ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ತಾಲ್ಲೂಕಿನ ನಂದಿಗಿರಿಧಾಮದ ಮೋಟಾರು ರಸ್ತೆಯ ಸರಪಳಿರಿಂದ 7.70 ಕಿಮೀವರೆಗಿನ ರಸ್ತೆ ನವೀಕರಣ ಕಾಮಗಾರಿ ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ರಸ್ತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಇದೇ 24 ರಿಂದ ಏ. 25ರವರೆಗೆ ವಾರಂತ್ಯ ದಿನಗಳಾದ ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆ.8 ಗಂಟೆಯವರೆಗಿನ ಅವಧಿಯನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ ಆದೇಶಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.