ಬೆಂಗಳೂರು,ಜ.31-ನಗರದ ಪಶ್ಚಿಮ ವಿಭಾಗದ ಎಲ್ಲಾ ಸಂಚಾರಿ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ನಿನ್ನೆ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಒಟ್ಟು 1250 ಪ್ರಕರಣ ದಾಖಲಿಸಿ 6,54,800ರೂ ದಂಡ ಸಂಗ್ರಹಿಸಲಾಗಿದೆ.
ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದ ಮಾಲೀಕರ ಮೇಲೆ 126 ಪ್ರಕರಣ ದಾಖಲಿಸಿ 72,300 ದಂಡ ಸಂಗ್ರಹಿಸಿದ್ದಾರೆ. ಏಕ ಮಖ ಸಂಚಾರ ಉಲ್ಲಂಘನೆಯಲ್ಲಿ 310 ಪ್ರಕರಣ ದಾಖಲಿಸಿ,1,54,800ರೂ ದಂಡ ಕಟ್ಟಿಸಿಕೊಳ್ಳಲಾಗಿದೆ.
ಪಾದಚಾರಿ ಮಾರ್ಗ ದಲ್ಲಿ ವಾಹನ ನಿಲುಗಡೆ-23 ಪ್ರಕರಣ,14,500ರೂ ದಂಡ, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ -17 ಪ್ರಕರಣ 8500 ದಂಡ ,ಟ್ರಿಬಲ್ ರೈಡಿಂಗ್(ಒಂದೇ ಬೈಕ್ನಲ್ಲಿ ಮೂವರ ಸಂಚಾರ-23ಪ್ರಕರಣ-10,300ರೂ ದಂಡ,ವಾಹನ ಚಾಲನೆ ವೇಳೆ ಮೊಬಲ್ ಬಳಕೆ-26 ಪ್ರಕರಣ,37,200ರೂ ಡಂಡ ಸಂಗ್ರಹಿಸಲಾಗಿದೆ.
ಇದಲ್ಲದೆ ಇತರೆ ಸಂಚಾರಿ ನಿಯಮ ಉಲ್ಲಂಘನೆಯ 715 ಪ್ರಕರಣದಲ್ಲಿ 3,52,100ರೂ. ದಂಡ ವಿಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ಅನಿತಾ.ಬಿ.ಹದ್ದಣ್ಣವರ್ ತಿಳಿಸಿದ್ದಾರೆ.
ಎಲ್ಲಾ ವಾಹನ ಚಾಲಕರು , ಸವಾರರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಮುಂದಿನ ದಿನಗಳಲ್ಲಿ ಸಹ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಅವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.