Saturday, March 29, 2025
Homeರಾಷ್ಟ್ರೀಯ | Nationalಶಿಮ್ಲಾ : ಭೀಕರ ಅಪಘಾತದಲ್ಲಿ ತಾಯಿ, ಮಗಳು ಸೇರಿ ನಾಲ್ವರ ದುರ್ಮರಣ

ಶಿಮ್ಲಾ : ಭೀಕರ ಅಪಘಾತದಲ್ಲಿ ತಾಯಿ, ಮಗಳು ಸೇರಿ ನಾಲ್ವರ ದುರ್ಮರಣ

Tragic Accident Claims Four Lives in Shimla Gorge Plunge

ಶಿಮ್ಲಾ, ಮಾ. 26: ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಶಿಮ್ಲಾದಲ್ಲಿ ನಡೆದಿದೆ. ಶಿಮ್ಲಾದ ಉಪನಗರದಲ್ಲಿರುವ ಆನಂದಪುರ-ಮೆಹ್ಲಿ ರಸ್ತೆಯಲ್ಲಿ ವಾಹನವೊಂದು ಕಮರಿಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಮಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಲ್ಪಾನಿ ಸೇತುವೆ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಶವಗಳನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.

ಮೃತರನ್ನು ಜೈ ಸಿಂಗ್ ನೇಗಿ (40), ಮುಕುಲ್ (10), ರೂಪಾ (45) ಮತ್ತು ಅವರ 14 ವರ್ಷದ ಮಗಳು ಪ್ರಗತಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶಿಮ್ಲಾ ನಿವಾಸಿಗಳಾಗಿದ್ದರು.

RELATED ARTICLES

Latest News