ಫ್ರೀಮಾಂಟ್, ಮೇ 19 – ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಬಳಿಯ ಉತ್ತರ ಓಹಿಯೋದಲ್ಲಿ ಹಳಿ ದಾಟುತ್ತಿದ್ದ ಪಾದಚಾರಿಗಳಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.
ಟೊಲೆಡೊ ಮತ್ತು ಕ್ಲೀವ್ ಲ್ಯಾಂಡ್ ನಡುವಿನ ಎರಿ ಸರೋವರದ ಬಳಿಯ ಫ್ರೀಮಾಂಟ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ರೀಮಾಂಟ್ ನಗರದ ಮೇಯರ್ ಡ್ಯಾನಿ ಸ್ಯಾಂಚೆಜ್ ಇಬ್ಬರು ಸಾವುಗಳನ್ನು ದೃಢಪಡಿಸಿದ್ದಾರೆ.
ತುರ್ತು ಸಿಬ್ಬಂದಿ ಮೈಲ್ಸ್ ನ್ಯೂಟನ್ ಸೇತುವೆಯ ಬಳಿಯ ಸ್ಯಾಂಡಸ್ಥಿ ನದಿಯಲ್ಲಿ ಘಟನೆಯಲ್ಲಿ ಕಾಣೆಯಾದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಟಿವಿ ಸ್ಟೇಷನ್ ವರದಿ ಮಾಡಿದೆ.
ಫ್ರೀಮಾಂಟ್ ಪೊಲೀಸರು ಸೇತುವೆಯನ್ನು ಮುಚ್ಚಿದ್ದು.. ಜನರು ಆ ಪ್ರದೇಶದಿಂದ ದೂರವಿರಲು ತಿಳಿಸಿದ್ದಾರೆ,