ಬೆಂಗಳೂರು, ಆ.5- ಸಾರಿಗೆ ಮುಷ್ಕರದ ನಡುವೆಯೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಜನಸಾಮಾನ್ಯರಿಗ ತೊಂದರೆ ಉಂಟುಮಾಡಿದ ಸಾರಿಗೆ ಮುಷ್ಕರ ವಿಮಾನದಿಂದ ಬರುವ ಪ್ರಯಾಣಿಕರಿಗೆ ಸಮಸ್ಯೆ ಉಂಟು ಮಾಡಿರಲಿಲ್ಲ. ಎಂದಿನಂತೆ 556 ಟ್ರಿಪ್‌ಗಳು ಸಂಚರಿಸಿದ್ದವು. ಮುಂಜಾಗ್ರತ ಕ್ರಮವಾಗಿ ಪೊಲೀಸರು ಬಿಗಿಬಂದೋಬಸ್ತ್ ಆಯೋಜಿಸಿದ್ದರು.
ಎಲೆಕ್ಟ್ರಿಕ್ ಬಸ್ ಸಂಚಾರ:
ಬೆಂಗಳೂರಿನಲ್ಲಿ ಬಿಎಂಟಿಸಿಯ ಕೆಲವು ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಕಂಡು ಬಂತು. ನಿಗಮಗಳ ಖಾಯಂ ನೌಕರರು ಮುಷ್ಕರ ನಡೆಸಿದರೆ, ಎಲೆಕ್ಟ್ರಿಕ್ ಬಸ್‌ಗಳಲ್ಲಿ ಕೆಲಸ ನಿರ್ವಹಿಸುವ ಖಾಸಗಿ ಸಂಸ್ಥೆಗಳ ಹೊರ ಗುತ್ತಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗದೇ ತಮ ಕೆಲಸವನ್ನು ತಾವು ಮುಂದುವರೆಸಿದರು ಇದರಿಂದಾಗಿ ಒಂದಿಷ್ಟು ಗೊಂದಲ ಉಂಟಾಯಿತು.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಣೆ ಮಾಡುತ್ತಿದೆ. ಕಿ.ಮೀ. ಆಧಾರದಲ್ಲಿ ಹಣ ನೀಡಲಾಗುತ್ತದೆ. ಹೀಗಾಗಿ ಬಹುತೇಕ ಬಸ್‌ಗಳು ಮತ್ತು ಅದರಲ್ಲಿನ ಸಿಬ್ಬಂದಿಗಳು ಸಂಪೂರ್ಣ ಹೊರ ಗುತ್ತಿಗೆಯಾಗಿವೆ. ಸಾರಿಗೆ ಮುಷ್ಕರಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಕಂಡು ಬಂತು. ಕೆಆರ್ ಮಾರುಕಟ್ಟೆ ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದವು. ಏನೇ ಅದರೂ ಸಾರಿಗೆ ಬಸ್‌ಗಳ ಸೌಲಭ್ಯಗಳಿಲ್ಲದೆ ಜನ ತೊಂದರೆ ಅನುಭವಿಸಿದರು. ಮೆಜಿಸ್ಟಿಕ್ ಬಸ್ ನಿಲ್ದಾಣದಿಂದ ಬೆಳಗ್ಗೆ ಹೊತ್ತಿಗೆ ಸುಮಾರು 500 ಬಸ್‌ಗಳು ಸಂಚರಿಸುತ್ತವೆ. ಅದರೆ ಇಂದು 135 ಬಸ್‌ಗಳು ಮಾತ್ರ ಕಾರ್ಯನಿರ್ವಹಿಸಿವೆ.
ಮುಂಗಡ ಬುಕ್ಕಿಂಗ್ ಅಭಾದಿತ:
ಸಾರಿಗೆ ಬಸ್‌ಗಳ ಮುಷ್ಕರ ಇದ್ದರೂ ಕೂಡ ಮುಂಗಡ ಟಿಕೆಟ್ ಬುಕ್ಕಿಂಗ್ ಸ್ವೀಕರಿಸಲಾಗುತ್ತಿತ್ತು. ಮುಷ್ಕರ ಶೀಘ್ರವಾಗಿ ಮುಗಿಯುವ ನಿರೀಕ್ಷೆಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ.