ಬೆಂಗಳೂರು, ಸೆ.25- ನಾಡಿನ ನೆಲ, ಜಲ, ಭಾಷೆ ವಿಷಯ ಬಂದಾಗ ಸಂಘಸಂಸ್ಥೆಗಳು ಬಂದ್ ಮಾಡುವುದು ಸಹಜ ಪ್ರಕ್ರಿಯೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬಂದ್‍ಗೆ ಬೆಂಬಲ ನೀಡುವುದು ಅಥವಾ ನೀಡದೇ ಇರುವ ಬಗ್ಗೆ ಸಾರಿಗೆ ನಿಗಮಗಳ ಒಕ್ಕೂಟಗಳು ನಿರ್ಧಾರ ತೆಗೆದುಕೊಳ್ಳಲಿವೆ. ಈ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಸತ್ಯಾಂಶ ಗೊತ್ತಿದ್ದರೂ ಟೀಕೆ ಮಾಡುತ್ತಿದ್ದಾರೆ. ಮಳೆ ಬರದೇ ಇರುವುದು ಪ್ರಕೃತಿಯ ವಿಕೋಪ. ಅದಕ್ಕೂ, ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು. ಕಾವೇರಿ ನ್ಯಾಯಾೀಧಿಕರಣದ ತೀರ್ಪಿನ ಪ್ರಕಾರ, ತಮಿಳುನಾಡಿಗೆ 100 ಟಿಎಂಸಿ ಗೂ ಹೆಚ್ಚು ನೀರನ್ನು ಹರಿಸಬಹುದಿತ್ತು. ಆದರೆ ಮಳೆ ಕೊರತೆಯಿಂದಾಗಿ ನೀರು ಬಿಡಲಾಗಿಲ್ಲ.
ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎಂಬುದು ಕಾವೇರಿ ನೀರು ನಿಯಂತ್ರಣಾ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮಾಹಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡಿ ಎಂದು ತೀರ್ಪು ನೀಡುತ್ತಿವೆ. ಸುಪ್ರೀಂಕೋರ್ಟ್ ಕೂಡ ಇದೇ ತೀರ್ಪನ್ನು ಅನುಮೋದಿಸುತ್ತದೆ.
ಕರ್ನಾಟಕ ಬಂದ್‍ಗೆ ಜ್ಯುವೆಲರಿ ಅಸೋಸಿಯೇಶನ್ ಬೆಂಬಲ : ಶರವಣ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಧಾನ ಸಭೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.