Thursday, August 7, 2025
Homeರಾಜ್ಯBIG NEWS : ಸಾರಿಗೆ ನೌಕರರ ಮುಷ್ಕರ : ಬಸ್ ಸಂಚಾರ ಬಂದ್‌, ಪ್ರಯಾಣಿಕರ ಪರದಾಟ

BIG NEWS : ಸಾರಿಗೆ ನೌಕರರ ಮುಷ್ಕರ : ಬಸ್ ಸಂಚಾರ ಬಂದ್‌, ಪ್ರಯಾಣಿಕರ ಪರದಾಟ

Transport workers' strike: Bus services suspended

ಬೆಂಗಳೂರು, ಆ.5– ವಿವಿಧ ಬೇೕಡಿಕೆಗಳ ಈಡೇರಿಗೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಆರಂಭಿಸಿರುವ ಮುಷ್ಕರ ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದ್ದು, ಸೂಕ್ತ ಸಂಚಾರ ವ್ಯವಸ್ಥೆ ಇಲ್ಲದೇ ಸಾರ್ವಜನಿಕರೂ ಪರದಾಡುವಂತಾಯಿತು. ವೇತನ ಪರಿಷ್ಕರಣೆ, ಬಾಕಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಿಎಂಟಿಸಿ, ಕೆಎಸ್‌‍ಆರ್‌ಟಿಸಿ, ಎನ್‌ಡಬ್ಲ್ಯೂಆರ್‌ಟಿಸಿ, ಕೆಕೆಆರ್‌ಟಿಸಿ ನಿಗಮಗಳ ಚಾಲಕ, ನಿರ್ವಾಕಹರು ಹಾಗೂ ಅಧಿಕಾರಿಗಳು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಬಂದ್‌ ಆಚರಿಸಿದರು. ಇದರಿಂದಾಗಿ ನಾಲ್ಕು ಸಾರಿಗೆ 28 ಸಾವಿರ ಬಸ್‌‍ಗಳು ನಿಂತಲ್ಲೇ ನಿಂತಿದ್ದವು.

ನಿನ್ನೆ ರಾತ್ರಿಗೆ ದೂರದೂರುಗಳಿಗೆ ಪ್ರಯಾಣ ಆರಂಭಿಸಿದ್ದ ಬಸ್‌‍ಗಳು ಮಾತ್ರ ಇಂದು ಬೆಳಗ್ಗೆ ನಿಗದಿತ ಸ್ಥಳಕ್ಕೆ ಆಗಮಿಸಿದ್ದವು. ಉಳಿದಂತೆ ಎಲ್ಲಾ ಡಿಪೋಗಳಲ್ಲೂ ಬಸ್‌‍ಗಳು ಬೆಳಗ್ಗೆ 6 ಗಂಟೆಯಿಂದ ಸಾಲುಗಟ್ಟಿ ನಿಂತಿದ್ದವು. ಮುಷ್ಕರದ ನಡುವೆಯೂ ಅನಿವಾರ್ಯ ಕಾರಣಗಳಿಂದ ಬಸ್‌‍ ನಿಲ್ದಾಣಗಳಿಗೆ ಆಗಮಿಸಿದ ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರಿನಲ್ಲಿ ಮೆಟ್ರೊ ಸಂಚಾರದಿಂದಾಗಿ ಒಂದಿಷ್ಟು ಅನುಕೂಲವಾಯಿತಾದರೂ ಸಂಪರ್ಕ ಮಾರ್ಗದ ಬಸ್‌‍ಗಳಿಲ್ಲದೆ ಪ್ರಯಾಣಿಕರು ಆಟೋ, ಕ್ಯಾಬ್‌ಗಳನ್ನು ಅವಲಂಭಿಸಬೇಕಾಯಿತು.

ಆದರೆ ಇದೇ ಸಂದರ್ಭದ ದುರ್ಲಭ ಪಡೆದುಕೊಂಡ ಖಾಸಗಿ ಸಾರಿಗೆ ವ್ಯವಸ್ಥೆಗಳ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡಲಾರಂಭಿಸಿದರು.ಕೆಲವು ಕಡೆಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಖಾಸಗಿ ಬಸ್‌‍ಗಳು ಶಾಲಾ ಕಾಲೇಜು ವಾಹನಗಳು ಹಾಗೂ ಇತರ ವಾಹನಗಳನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾ ಆಡಳಿತಗಳು ಪ್ರಯತ್ನಿಸಿದವು. ಆದರೆ ಅದು ಅಷ್ಟು ಪರಿಣಾಮ ಬೀರಲಿಲ್ಲ.

ಬಸ್‌‍ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು ರಸ್ತೆಗಳು ಕೂಡ ಬಸ್‌‍ಗಳಿಲ್ಲದೆ ಕಾಲಿ ಕಾಳಿಯಾಗಿದ್ದವು. ದೂರದೂರುಗಳಿಗೆ ಹೋಗಲು ನಿಲ್ದಾಣಗಳಿಗೆ ಬಂದವರು ಮುಂದೇನು ಎಂದು ಗೊತ್ತಾಗದೇ ಅಲ್ಲಿಯೇ ನಿದ್ದೆಗೆ ಜಾರಿ ವಿಶ್ರಾಂತಿ ಪಡೆಯುತ್ತಿದ್ದುದು ಸಾಮಾನ್ಯವಾಗಿತ್ತು.

ಧರ್ಮಸ್ಥಳ, ಕುಕ್ಕೆಸುಬ್ರಮಣ್ಯದಂತಹ ಶ್ರದ್ಧಾ ಕೇಂದ್ರಗಳಿಗೆ ಬಸ್‌‍ಗಳಲ್ಲಿ ತೆರಳಿದ್ದವರು ವಾಪಾಸು ಬರಲು ಸಾರಿಗೆ ಸೌಲಭ್ಯವಿಲ್ಲದೆ ಪರದಾಡುತ್ತಿದ್ದರು. ಜಿಲ್ಲಾಡಳಿತ ಹಾಗೂ ಪೊಲೀಸ್‌‍ ಅಧಿಕಾರಿಗಳು ಬಸ್‌‍ ನಿಲ್ದಾಣಗಳಿಗೆ ಬಂದು ಕೆಲಸ ನಿರ್ವಹಿಸುವ ಚಾಲಕರು ಹಾಗೂ ನಿರ್ವಾಹರಿಗೆ ಭದ್ರತೆ ಒದಗಿಸುವ ಪ್ರಯತ್ನ ಮಾಡಿದರು. ಆದರೂ ಕೂಡ ಯಾವುದೇ ಚಾಲಕರು, ನಿರ್ವಾಹಕರು ಕೆಲಸ ನಿರ್ವಹಿಸಲು ಮುಂದಾಗಲಿಲ್ಲ. ಸಂಚರಿಸುವ ಬಸ್‌‍ಗಳಿಗೆ ಗಸ್ತುವಾಹನಗಳನ್ನು ಹಾಗೂ ಬಸ್‌‍ ಒಳಗೆ ಪೊಲೀಸ್‌‍ ಹಾಗೂ ಗೃಹರಕ್ಷಕ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ರಾಜ್ಯಾದ್ಯಂತ ಮುಷ್ಕರದ ಬಿಸಿ ತೀವ್ರವಾಗಿ ತಟ್ಟಿದ್ದು, ಬೇಡಿಕೆ ಈಡೇರುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದರು. ಇಂದು ಬೆಳಗ್ಗೆ 5 ಗಂಟೆಯಿಂದಲೂ ಆರಂಭಗೊಂಡ ಸಾರಿಗೆ ಮುಷ್ಕರ ಜನಸಾಮಾನ್ಯರನ್ನು ಹೈರಾಣಾಗಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಿನ್ನೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಹೈಕೋರ್ಟಿನ ಆದೇಶದ ಹೊರತಾಗಿಯೂ ಮುಷ್ಕರ ಮುಂದುವರೆದಿತ್ತು. ಸರ್ಕಾರ ಸಂಧಾನ ಮಾರ್ಗವನ್ನು ಬದಿಗಿಟ್ಟು ಪ್ರತೀಕಾರದ ಮಾರ್ಗವಾಗಿ ಮುಷ್ಕರವನ್ನು ನಿಭಾಯಿಸುವ ಆಲೋಚನೆ ಮಾಡಿದ್ದು ಜನಸಾಮಾನ್ಯರು ಪರದಾಡುವಂತಾಗಿದೆ. ಸರ್ಕಾರ ಎಸಾ ಜಾರಗೊಳಿಸುವ ಮೂಲಕ ಮುಷ್ಕರನಿರತರನ್ನು ಬೆದರಿಸುವ ತಂತ್ರಗಾರಿಕೆ ಅನುಸರಿಸಿದ್ದು, ಅದ್ಯಾವುದೂ ಪ್ರಯೋಜನವಾಗಿಲ್ಲ.

ಮೆಟ್ರೋಗೆ ಮೊರೆಹೋದ ಜನ :
ಸಾರಿಗೆ ನೌಕರರ ಮುಷ್ಕರದಿಂದಾಗಿ ಜನರು ನಮ ಮೆಟ್ರೋಗೆ ಮೊರೆಹೋದ ಹಿನ್ನಲೆಯಲ್ಲಿ ಭಾರಿ ಜನಜಂಗುಳಿ ಕಂಡುಬಂದಿದೆ. ಬಸ್‌‍ ಸರಿಯಾಗಿ ಸಿಗದೆ ಇದ್ದ ಕಾರಣ ಜನರು ಮೆಟ್ರೋ ನಿಲ್ದಾಣಗಳತ್ತ ಸಾಗಿದ್ದು ಇಂದು ಬೆಳಿಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡ್ತಿದ್ದಾರೆ. ಮೆಟ್ರೋ ನಿಲ್ದಾಣದ ಹೊರಗಿನಿಂದಲೂ ಪ್ರಯಾಣಿಕರು ಕ್ಯೂ ನಿಂತಿದ್ದಾರೆ. ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಕ್ಯೂ ಗಟ್ಟಲೆ ಪ್ರಯಾಣಿಕರು ಜಮಾಯಿಸಿದ್ದರಿಂದ ಮೆಟ್ರೋ ನಿಲ್ದಾಣದ ಬಳಿ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ.

ದಿನನಿತ್ಯಕ್ಕಿಂತ ಮೆಟ್ರೋ ಪ್ರಯಾಣಿಕರು ಹೆಚ್ಚಾಗಿರುವುದರಿಂದ ಮೆಟೋ ನಿಲ್ದಾಣದಲ್ಲಿ ಜನವೂ ಜನ ಆದರು ತೊಂದರೆಯಾಗದಂತೆ ಮೆಟ್ರೋ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಬಸ್‌‍ ನಿಂತಾಗ ಮೊಟ್ರೋಗೆ ಭಾರಿ ಆದಾಯ.ಪೂರ್ತಿ ದಿನ ರೈಲು ಜನರಿಂದ ತಂಬಿದೆ.ಜನರು ಜನಜಂಗುಳಿ ಲೆಕ್ಕಿಸದೆ.

ಖಾಸಗಿ ಬಸ್‌‍ಗಳದ್ದೇ ದರ್ಬಾರ್‌ :
ವೇತನ ಪರಿಷ್ಕರಣೆ ಹಿಂಬಾಕಿ ಬಿಡುಗಡೆ ಸೇರಿದಂತೆ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಬಸ್‌‍ ನೌಕರರು ಇಂದು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಂಪೂರ್ಣ ಸ್ತಬ್ಧಗೊಂಡಿದ್ದು, ಖಾಸಗಿ ಬಸ್‌‍ಗಳದ್ದೇ ದರ್ಬಾರ್‌ ಜೋರಾಗಿತ್ತು.

ಹಾಸನದಲ್ಲಿಂದು ಸಾರಿಗೆ ಬಸ್‌‍ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರು ಬಸ್‌‍ಗಳಿಲ್ಲದೆ ಪರದಾಡುವಂತಾಗಿದ್ದು, ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು. ಚನ್ನಪಟ್ಟಣ ಬಸ್‌‍ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌‍ಗಳಿಗಾಗಿ ಕಾದುಕಾದು ಹೈರಾಣಾದರು. ಇನ್ನು ಹೊರಗಡೆ ಖಾಸಗಿ ಬಸ್‌‍ಗಳು, ಟಿಟಿಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಖಾಸಗಿ ಬಸ್‌‍ಗಳತ್ತ ಮುಖ ಮಾಡಿದ್ದ ದೃಶ್ಯಗಳು ಕಂಡುಬಂದವು.

ಕೆಎಸ್‌‍ಆರ್‌ಟಿಸಿ ಘಟಕ -1 ಹಾಗೂ 2 ರಲ್ಲಿ ಸುಮಾರು 230 ಸಾರಿಗೆ ಬಸ್‌‍ಗಳು ನಿಂತಿದ್ದು, ಕರ್ತವ್ಯಕ್ಕೆ ಹಾಜರಾಗದೆ ನೌಕರರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ವಾಹನಗಳು ಕೆಎಸ್‌‍ಆರ್‌ಟಿಸಿ ನಿಲ್ದಾಣಗಳ ಸುತ್ತಮುತ್ತ ತಮ ವಾಹನಗಳನ್ನು ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಆರ್‌ಟಿಒ ಅಧಿಕಾರಿಗಳು ಭೇಟಿ ನೀಡಿ ಪ್ರಯಾಣಿಕರಿಂದ ಹೆಚ್ಚು ಹಣ ಪಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

RELATED ARTICLES

Latest News