Friday, August 22, 2025
Homeರಾಜ್ಯಹಿರಿಯ ಸಜ್ಜನ ರಾಜಕಾರಣಿ ಆರ್‌.ರಾಮಯ್ಯಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

ಹಿರಿಯ ಸಜ್ಜನ ರಾಜಕಾರಣಿ ಆರ್‌.ರಾಮಯ್ಯಗೆ ವಿಧಾನಸಭೆಯಲ್ಲಿ ಶ್ರದ್ಧಾಂಜಲಿ

Tributes paid to politician R. Ramaiah in the Assembly

ಬೆಂಗಳೂರು,ಆ.22- ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಆರ್‌.ರಾಮಯ್ಯ ನಿಧನಕ್ಕೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು.ಇಂದು ಬೆಳಿಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, ಆರ್‌.ರಾಮಯ್ಯ ನಿಧನರಾಗಿರುವುದನ್ನು ಸದನಕ್ಕೆ ವಿಷಾದದಿಂದ ತಿಳಿಸಿದರು.

ಆರ್‌.ರಾಮಯ್ಯ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಸ್ಕಲ್‌ ಗ್ರಾಮದಲ್ಲಿ 1946 ರ ಮೇ 22ರಂದು ಜನಿಸಿದ್ದರು. ವಿಶ್ವವಿದ್ಯಾಲಯದ ಮಟ್ಟದವರೆಗೆ ವಿದ್ಯಾಭ್ಯಾಸ ಮಾಡಿದ್ದ ಶ್ರೀಯುತರು ವೃತ್ತಿಯಲ್ಲಿ ಕೃಷಿಕರಾಗಿದ್ದರು.

ಅಮೆಚೂರ್‌ ಕಲಾವಿದರಾಗಿದ್ದ ಅವರು 1985ರಲ್ಲಿ ಹಿರಿಯೂರು ಕ್ಷೇತ್ರದಿಂದ ಎಂಟನೇ ವಿಧಾನಸಭೆಗೆ ಚುನಾಯಿತರಾಗಿದ್ದರು ಎಂದು ಸರಿಸಿದರು.ಹಿರಿಯ ಸಜ್ಜನ ರಾಜಕಾರಣಿ ಆರ್‌.ರಾಮಯ್ಯ ಅವರು ನಿನ್ನೆ ನಿಧನ ಹೊಂದಿರುತ್ತಾರೆ. ಅವರ ಆತಕ್ಕೆ ಚಿರ ಶಾಂತಿ ಕೋರುವುದಾಗಿ ಅವರು ತಿಳಿಸಿದರು.ಬಳಿಕ ಸದನದ ಮೌನಾಚರಣೆ ಸಲ್ಲಿಸುವ ಮೂಲಕ ರಾಮಯ್ಯ ಅವರ ನಿಧನಕ್ಕೆ ಸಂತಾಪ ಸಲ್ಲಿಸಲಾಯಿತು.

RELATED ARTICLES

Latest News