Tuesday, December 3, 2024
Homeಜಿಲ್ಲಾ ಸುದ್ದಿಗಳು | District Newsಮೊಬೈಲ್ ಟವರ್‌ ಕದ್ದ ಚಾಲಾಕಿ ಚೋರರು

ಮೊಬೈಲ್ ಟವರ್‌ ಕದ್ದ ಚಾಲಾಕಿ ಚೋರರು

thieves stole the mobile tower

ಶಿವಮೊಗ್ಗ,ಅ.24- ಸಾಮಾನ್ಯವಾಗಿ ಖಾಲಿ ಜಾಗದಲ್ಲಿ ಕಬ್ಬಿಣ,ಉಪಕರಣ ಕಳವು ಸಹಜ ಆದರೆ ಇಲ್ಲಿ ಖಾಸಗಿ ಕಂಪನಿಯ ಮೊಬೈಲ್‌ ಟವರ್‌ ಅನ್ನೇ ಚಾಲಾಕಿ ಚೋರರು ಕದ್ದ ಘಟನೆ ನಡೆದಿದೆ.

ಖಾಸಗಿ ಸಂಸ್ಥೆಯೊಂದು 2008ರಲ್ಲಿ ಶಿವಮೊಗ್ಗದ ಟಿಪ್ಪು ನಗರದಲ್ಲಿನ ಖಾಲಿ ಜಾಗದಲ್ಲಿ ಮೊಬೈಲ್‌ ಟವರ್‌ ಅಳವಡಿಸಿತ್ತು. ಸುತ್ತಮುತ್ತಲಿನ ನೆಟ್ವರ್ಕ್‌ ಅದೇ ಸಂಸ್ಥೆ ಟವರ್‌ ನಿರ್ವಹಣೆ ಮಾಡುತ್ತಿತ್ತು. ಆದರೆ ಕೊರೊನಾ ಸಂದರ್ಭ ಸಿಬ್ಬಂದಿ ಇಲ್ಲದೆ ನಿರ್ವಹಣೆ ಮಾಡಲು ಸಾಧ್ಯವಾಗಿರಲಿಲ್ಲ

ಕೊರೊನಾ ಬಳಿಕ ಸಂಸ್ಥೆ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಮೊಬೈಲ್‌ ಟವರ್‌ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೇ ನಾಪತ್ತೆಯಾಗಿದ್ದವು. ಸುಮಾರು 46.30 ಲಕ್ಷ ಮೌಲ್ಯದ ಟವರ್‌ ಮತ್ತು ಬಿಡಿ ಭಾಗಗಳು ಕಳ್ಳತನವಾಗಿದೆ ಎಂದು ಈ ಸಂಬಂಧ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.

ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟವರ್‌ ಕದ್ದ ಖದೀಮರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED ARTICLES

Latest News