ಮೈಸೂರು,ಸೆ.25- ದಸರಾ ಅಂಗವಾಗಿ ಇಂದು ಹಮಿಕೊಂಡಿದ್ದ ಪಾರಂಪರಿಕ ಸೈಕಲ್ಸವಾರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸದಾ ದ್ವಿಚಕ್ರ ವಾಹನ, ಕಾರಿನ ಸಂಚಾರ ಕಾಣುತ್ತಿದ್ದ ನಗರದ ರಸ್ತೆಗಳಲ್ಲಿ ಇಂದು ಬೆಳಿಗ್ಗೆ ಟ್ರಿನ್ ಟ್ರಿನ್ ಸೈಕಲ್ಗಳ ಕಲರವ ಜೋರಾಗಿತ್ತು. ಪುರಭವನದಿಂದ ಸೈಕಲ್ ಏರಿದ ಪುರತತ್ವ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾರಂಪರಿಕ ಕಟ್ಟಡಗಳನ್ನು ವೀಕ್ಷಣೆ ಮಾಡಿ ಇತಿಹಾಸವನ್ನು ತಿಳಿಸಿಕೊಡಲಾಯಿತು.
ಸೈಕಲ್ ಸವಾರಿ ಆರೋಗ್ಯಕ್ಕೆ ಉತ್ತಮವಾಗಿದ್ದು, ವ್ಯಾಯಾಮದ ಜೊತೆಗೆ ಪ್ರತಿದಿನ ಒಂದು ಗಂಟೆಯಾದರೂ ಸೈಕಲ್ ತುಳಿದರೆ ದೈಹಿಕ ಸಾಮರ್ಥ್ಯವೂ ಕೂಡ ಹೆಚ್ಚುತ್ತದೆ. ಸಣ್ಣಪುಟ್ಟ ಕೆಲಸಕಾರ್ಯಗಳಿಗೂ ದ್ವಿಚಕ್ರ ವಾಹನವನ್ನು ಬಳಸುವುದನ್ನು ಬಿಟ್ಟು ಸೈಕಲ್ನಲ್ಲಿ ತೆರಳಿದರೆ ಪರಿಸರ ಮಾಲಿನ್ಯವೂ ಕೂಡ ನಿಯಂತ್ರಣವಾಗಲಿದೆ ಎಂದು ಸೈಕಲ್ ಸವಾರರು ಜಾಗೃತಿ ಮೂಡಿಸಿದರು.