Tuesday, September 17, 2024
Homeರಾಷ್ಟ್ರೀಯ | Nationalಟಿಎಂಸಿ ಸಂಸದ ಸೌಗತ ರಾಯ್‌ಗೆ ಕೊಲೆ ಬೆದರಿಕೆ

ಟಿಎಂಸಿ ಸಂಸದ ಸೌಗತ ರಾಯ್‌ಗೆ ಕೊಲೆ ಬೆದರಿಕೆ

ಕೋಲ್ಕತ್ತಾ, ಜು.11 (ಪಿಟಿಐ) ಹಿರಿಯ ತಣಮೂಲ ಕಾಂಗ್ರೆಸ್‌‍ ನಾಯಕ ಮತ್ತು ಸಂಸದ ಸೌಗತ ರಾಯ್‌ ಅವರಿಗೆ ದೂರವಾಣಿ ಕರೆ ಮಾಡಿರುವ ದುಷ್ಕರ್ಮಿಗಳು ಬಂಧಿತ ಪಕ್ಷದ ನಾಯಕ ಜಯಂತ್‌ ಸಿಂಗ್‌ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅರಿದಹಾ ಪ್ರದೇಶದ ಟಿಎಂಸಿ ನಾಯಕ ಜಯಂತ್‌ ಸಿಂಗ್‌ ಅವರನ್ನು ಜೂನ್‌ 30 ರಂದು ಸಂಭವಿಸಿದ ಗುಂಪು ಹಿಂಸಾಚಾರ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.ಅರಿದಹ ರಾಯ್‌ ನಾಲ್ಕು ಅವಧಿಯ ಸಂಸದರಾಗಿ ಪ್ರತಿನಿಧಿಸುವ ದಮ್‌ ದಮ್‌ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ.

ನನಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತು, ಇನ್ನೊಂದು ತುದಿಯಲ್ಲಿರುವ ವ್ಯಕ್ತಿ ನಾನು ಜಯಂತ್‌ ಸಿಂಗ್‌ ಬಿಡುಗಡೆಯನ್ನು ಖಚಿತಪಡಿಸದಿದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಎರಡು ಬಾರಿ ಬೆದರಿಕೆ ಕರೆ ಬಂದಿತು ಮತ್ತು ಕರೆ ಮಾಡಿದವರು ನನ್ನನ್ನು ನಿಂದಿಸಿದ್ದಾರೆ. ನಂತರ ನಾನು ಬ್ಯಾರಕ್‌ಪುರ ಪೊಲೀಸ್‌‍ ಕಮಿಷನರ್‌ ಅವರನ್ನು ಸಂಪರ್ಕಿಸಿ ನಂಬರ್‌ ಟ್ರ್ಯಾಕ್‌ ಮಾಡಲು ವಿನಂತಿಸಿದೆ. ನಾನು ಪೊಲೀಸರಿಗೆ ದೂರು ದಾಖಲಿಸಿದ್ದೇನೆ ಎಂದು ರಾಯ್‌ ಪಿಟಿಐಗೆ ತಿಳಿಸಿದರು.

ಜೂನ್‌ 30 ರಂದು ಕಾಲೇಜು ವಿದ್ಯಾರ್ಥಿ ಮತ್ತು ಅವರ ತಾಯಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್‌ ಅವರನ್ನು ಬಂಧಿಸಲಾಯಿತು. ಜನರ ಗುಂಪೊಂದು ಇಬ್ಬರನ್ನು ಥಳಿಸುತ್ತಿರುವ ವೀಡಿಯೊ ಕ್ಲಿಪ್‌ ವೈರಲ್‌ ಆಗಿತ್ತು.

ಅರಿಯದಾಹದಲ್ಲಿ ಜನರ ಗುಂಪಿನಿಂದ ಬಾಲಕಿಯ ಮೇಲೆ ಹಲ್ಲೆ ನಡೆಸುತ್ತಿರುವ ಹಳೆಯ ವೀಡಿಯೊ ಕ್ಲಿಪ್‌ ಪ್ರಸಾರವಾದ ನಂತರ ಪೊಲೀಸರು ಆತನ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ತಡರಾತ್ರಿ ಸಿಂಗ್‌ ಅವರ ಆಪ್ತ ಸಹಚರನನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಇದು ಮೂರನೇ ಬಂಧನವಾಗಿದೆ.

2023 ರಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂಧಿತರಾಗಿದ್ದ ಸಿಂಗ್‌ ಇನ್ನು ಮುಂದೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದಿಲ್ಲ ಎಂದು ಭರವಸೆ ನೀಡುವ ಬಾಂಡ್‌ನೊಂದಿಗೆ ಜಾಮೀನಿನ ಮೇಲೆ ಹೊರಗಿದ್ದರು, ಈಗ ಈ ಷರತ್ತು ಉಲ್ಲಂಘಿಸಿದ್ದಕ್ಕಾಗಿ ಹೆಚ್ಚುವರಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

RELATED ARTICLES

Latest News