Friday, November 22, 2024
Homeರಾಷ್ಟ್ರೀಯ | Nationalನೇಮಕಾತಿ ಹಗರಣ ಟಿಎಂಸಿಗೆ ಮೊದಲೇ ತಿಳದಿತ್ತು: ಕುಣಾಲ್ ಘೋಷ್

ನೇಮಕಾತಿ ಹಗರಣ ಟಿಎಂಸಿಗೆ ಮೊದಲೇ ತಿಳದಿತ್ತು: ಕುಣಾಲ್ ಘೋಷ್

ಕೋಲ್ಕತ್ತಾ, ಮೇ 2- ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಪದಚ್ಯುತಗೊಳಿಸಿದ ಬಳಿಕ ಕುಣಾಲ್ ಘೋಷ್ ಅವರು 2021ರ ವಿಧಾನಸಭಾ ಚುನಾವಣೆಗೂ ಮುನ್ನವೇ ಟಿಎಂಸಿಗೆ ಶಾಲಾ ನೇಮಕಾತಿ ಹಗರಣದ ಅರಿವಿತ್ತು ಎಂದು ಪ್ರತಿಪಾದಿಸಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ನಿಕಟವರ್ತಿ ಎಂದೇ ಹೆಸರಾಗಿರುವ ಘೋಷ್ ಅವರಿಂದ ಈ ಹೇಳಿಕೆ ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೊರಬಿದ್ದಿದೆ. ಚುನಾವಣೆಯಲ್ಲಿ ಎಸ್‍ಎಸ್‍ಸಿ ಹಗರಣ ಮಹತ್ತರ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಲೋಕಸಭಾ ಅಭ್ಯರ್ಥಿ ಯೊಬ್ಬರ ಜೊತೆ ವೇದಿಕೆ ಹಂಚಿಕೊಂಡು ಅವರನ್ನು ಹೊಗಳಿದ ಘೋಷ್ ಅವರನ್ನು ಕೆಲ ಗಂಟೆಗಳ ತರುವಾಯ ರಾಜ್ಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಯಿತು.

ಎರಡನೇ ತಲೆಮಾರಿನ ಟಿಎಂಸಿ ನಾಯಕರಾಗಿ ಬೆಳೆಯುವ ಲಕ್ಷಣ ತೋರಿದ್ದ ಮತ್ತು ಪಕ್ಷದ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಘೋಷ್ ಅವರು ಶಾಲಾ ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಇದ್ದದ್ದರಿಂದಲೇ ಉದ್ಯೋಗ ನೇಮಕಾತಿಯಲ್ಲಿ 2021ರಲ್ಲಿ ಪಕ್ಷವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಸಚಿವಾಲಯದಿಂದ ಪಾರ್ಥ ಚಟರ್ಜಿ ಅವರನ್ನು ಕೈಗಾರಿಕಾ ಇಲಾಖೆಗೆ ಎತ್ತಂಗಡಿ ಮಾಡಲಾಯಿತು ಎಂದು ಬಂಗಾಳಿ ಸುದ್ದಿ ವಾಹಿನಿ ಎಬಿಪಿ ಆನಂದಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಾಜ್ಯಮಟ್ಟದ ಆಯ್ಕೆ ಪರೀಕ್ಷೆ (ಎಸ್‍ಎಲ್‍ಎಸ್‍ಟಿ)- 2016 ಅನ್ನು ಕಲ್ಕತ್ತಾ ಹೈಕೋರ್ಟ್ ರದ್ದುಪಡಿಸಿದ ಒಂದು ವಾರದ ಬಳಿಕ ಘೋಷ್ ಹೇಳಿಕೆ ಹೊರಬಿದ್ದಿದೆ. ನ್ಯಾಯಾಲಯದ ಆದೇಶದ ಬಳಿಕ ಸುಮಾರು 26000 ಜನರು ಕೆಲಸ ಕಳೆದುಕೊಂಡಿದ್ದಾರೆ.

RELATED ARTICLES

Latest News