ಬೆಂಗಳೂರು,ಜೂ.24– ಬೆಳ್ಳಂಬೆಳಗ್ಗೆ ದೊಡ್ಡ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿ, ರಸ್ತೆ ವಿಭಜಕ ಹತ್ತಿ ನಿಂತಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಜ್ಞಾನಭಾರತಿ ಕಡೆಯಿಂದ ಕೆಂಗೇರಿ ಕಡೆಗೆ ವಿದ್ಯುತ್ ಕಂಬಗಳನ್ನು ಲೋಡ್ ಮಾಡಿಕೊಂಡು ದೊಡ್ಡ ಲಾರಿಯೊಂದು ಬೆಳಗ್ಗೆ 6.30 ರ ಸುಮಾರಿನಲ್ಲಿ ಹೋಗುತ್ತಿತ್ತು.
ಈ ಲಾರಿ ಶಿರ್ಕೆ ಸರ್ಕಲ್ ಬಳಿ ಬರುತ್ತಿದ್ದಂತೆ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿ ರಸ್ತೆ ವಿಭಜಕ ಹತ್ತಿ ನಿಂತಿದ್ದು, ಕ್ಲೀನರ್ ಗಾಯಗೊಂಡಿದ್ದಾನೆ.
ಈ ರಸ್ತೆಯಲ್ಲಿ ಕೆಲ ಕಾಲ ವಾಹನಗಳ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಯಿತು.
ಸುದ್ದಿ ತಿಳಿದ ತಕ್ಷಣ ಜ್ಞಾನಭಾರತಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಗಾಯಗೊಂಡಿದ್ದ ಕ್ಲೀನರ್‌ನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.ನಂತರ ಸಂಚಾರಿ ಪೊಲೀಸರು ಕ್ರೇನ್ ಅನ್ನು ಸ್ಥಳಕ್ಕೆ ಕರೆಸಿಕೊಂಡು ಲಾರಿಯನ್ನು ತೆರವುಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಲಾರಿ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
- ರಾಜ್ಯದ ಅಧಿಕಾರಕ್ಕಾಗಿ ಕಾನೂನು ಹೋರಾಟ ಅನಿವಾರ್ಯ; ಸ್ಟಾಲಿನ್
- ಟಾರ್ಪಾಲ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
- ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ಎಸ್ಎಸ್ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮೋದಿ
- ಠಾತ್ ಹೃದಯಾಘಾತ ತಪ್ಪಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಹೃದಯ ಜ್ಯೋತಿ ಯೋಜನೆ ಅನುಷ್ಠಾನ
- ಸಂವಿಧಾನ ರಕ್ಷಿಸಲು ಪಕ್ಷದ ಕಾರ್ಯಕರ್ತರಿಗೆ 5 ಶಪಥ ಬೋಧಿಸಿದ ಡಿ.ಕೆ.ಶಿವಕುಮಾರ್