Sunday, September 8, 2024
Homeಅಂತಾರಾಷ್ಟ್ರೀಯ | Internationalಹಷ್‌ ಮನಿ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ದೋಷಿ

ಹಷ್‌ ಮನಿ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ದೋಷಿ

ನ್ಯೂಯಾರ್ಕ್‌, ಮೇ 31- ಹಷ್‌ ಮನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಅವರನ್ನು ದೋಷಿ ಎಂದು ನ್ಯೂಯಾರ್ಕ್‌ ನ್ಯಾಯಾಲಯ ಘೋಷಿಸಿದೆ. ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಮೊದಲ ಯುಎಸ್‌‍ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್‌ ಒಳಗಾಗಿದ್ದಾರೆ.

ಹಾಲಿ ಅಥವಾ ಮಾಜಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿರುವುದು ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲು. ಪ್ರಕರಣದಲ್ಲಿ ಎಲ್ಲಾ 34 ಆರೋಪಗಳಲ್ಲಿಯೂ ಟ್ರಂಪ್‌ ದೋಷಿ ಎಂದು ನ್ಯೂಯಾರ್ಕ್‌ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜಾಮೀನು ಇಲ್ಲದೇ ಬಿಡುಗಡೆಯಾಗಿದ್ದ ಟ್ರಂಪ್‌ ಈಗ ಅಪರಾಧಿಯಾಗಿದ್ದಾರೆ.

2016ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಪೋರ್ನ್‌ ಸ್ಟಾರ್‌ ಸ್ಟ್ರೋಮಿ ಡೇನಿಯಲ್ಸ್‌‍ ಜೊತೆ ಸಂಬಂಧವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ ಮತ್ತು ಅದನ್ನು ಮರೆಮಾಡಲು ಅವರು ಹಣವನ್ನು ಸ್ಟೋರ್ಮಿಗೆ ಪಾವತಿಸಿದ್ದರು ಎಂದು ಆರೋಪಿಸಲಾಗಿದೆ.

ಎಲ್ಲಾ 34 ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂಬುದು ಸಾಬೀತಾಗಿದೆ. ದಾಖಲೆಗಳನ್ನು ತಿದ್ದಿದ ಎಲ್ಲಾ ಆರೋಪಗಳನ್ನು ಟ್ರಂಪ್‌ ನಿರಾಕರಿಸಿದ್ದಾರೆ. ಅವರು ಸ್ಟಾರ್ಮಿ ಡೇನಿಯಲ್ಸ್‌‍ ಜತೆಗಿನ ಸಂಬಂಧವನ್ನು ಕೂಡ ನಿರಾಕರಿಸಿದ್ದಾರೆ. ನ್ಯಾ. ಜುವಾನ್‌ ಮಾರ್ಚೆನ್‌ ಜುಲೈ 11ರಂದು ಶಿಕ್ಷೆ ಪ್ರಕಟಿಸಲಿದ್ದಾರೆ. ಜುಲೈ 15ರಂದು ರಿಪಬ್ಲಿಕನ್‌ ಪಕ್ಷದ ರಾಷ್ಟ್ರೀಯ ಸಮಾವೇಶ ಪ್ರಾರಂಭವಾಗಲಿರುವ ಸಮಯದಲ್ಲಿ ಟ್ರಂಪ್‌ ವಿರುದ್ಧ ನಿರ್ಧಾರ ಪ್ರಕಟವಾಗುತ್ತದೆ. ಇದರಲ್ಲಿ ಟ್ರಂಪ್‌ ಹೆಸರನ್ನು ಪಕ್ಷವು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಔಪಚಾರಿಕವಾಗಿ ಘೋಷಿಸುತ್ತದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದೆ. ರಿಪಬ್ಲಿಕನ್‌ ಪಕ್ಷದ ನಾಯಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಏರಬಹುದು ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಪ್ರಕರಣವೊಂದರಲ್ಲಿ ದೋಷಿಯಾಗಿದ್ದಾರೆ. ನಾನು ತುಂಬಾ ಮುಗ್ಧ ಮನುಷ್ಯ. ನಿಜವಾದ ತೀರ್ಪು ಮತದಾರರಿಂದ ಬರಲಿದೆ ಎಂದು ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಟ್ರಂಪ್‌ ಅವರು ನಟಿ ಸ್ಟಾರ್ಮಿ ಡೇನಿಯಲ್ಸ್‌‍ಗೆ ಹಣ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ಹಷ್‌ ಮನಿ ಪ್ರಕರಣದಲ್ಲಿ ಕಾನೂನು ಸಂಕಷ್ಟ ಎದುರಿಸುತ್ತಿದ್ದರು. ಗೌಪ್ಯತೆ ಕಾಪಾಡಲು ನೀಡಿದ ಹಣಕ್ಕೆ ಹಷ್‌ ಮನಿ ಎನ್ನಲಾಗುತ್ತದೆ.

ಸ್ಟಾರ್ಮಿ ಜೊತೆಗೆ 2006 ರಲ್ಲಿ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಮೌನವಾಗಿರಲು ಸ್ಟಾರ್ಮಿ ಅವರಿಗೆ ಟ್ರಂಪ್‌ ತಮ ವಕೀಲರ ಮೂಲಕ ಹಣ ನೀಡಿದ್ದರು ಎಂಬ ಆರೋಪ ಇತ್ತು. ಈ ಸಂಬಂಧ ವಿಚಾರಣೆ ಮಾಜಿ ಅಧ್ಯಕ್ಷ ಎದುರಿಸುತ್ತಿದ್ದರು.

2016 ರ ಅಧ್ಯಕ್ಷೀಯ ಚುನಾವಣೆ ಮೇಲೆ ಈ ಪ್ರಕರಣ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ನಟಿಗೆ ಟ್ರಂಪ್‌ ಹಣ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಅವರು ನಿರಾಕರಿಸಿದ್ದರು.

ಘಟನೆ ವಿವರ:
ಡೊನಾಲ್ಡ್‌‍ ಟ್ರಂಪ್‌ 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್‌‍ ಜತೆ ಲೈಂಗಿಕ ಸಂಬಂಧ ಹೊದಿದ್ದರು. 2016ರ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಈ ವಿಷಯವು ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಈ ಘಟನೆಯನ್ನು ಬಹಿರಂಗಗೊಳಿಸುವುದಾಗಿ ಸ್ಟಾರ್ಮಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಅವರಿಗೆ ರಹಸ್ಯವಾಗಿ ಟ್ರಂಪ್‌ ಹಣ ನೀಡಿದ್ದರು. ಇದನ್ನು ಮರೆ ಮಾಚಲು ಟ್ರಂಪ್‌ ಸುಳ್ಳು ದಾಖಲೆ ಸೃಷ್ಟಿಸಿದ್ದರು.

RELATED ARTICLES

Latest News