ವಾಷಿಂಗ್ಟನ್, ಅ.11– ಚೀನಾದ ಆಮದುಗಳ ಮೇಲೆ ನವೆಂಬರ್ 1ರಿಂದ ಅಥವಾ ಅದಕ್ಕೂ ಮುಂಚಿನಿಂದಲೇ ಶೇ.100ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅವರ ಈ ನಿರ್ಧಾರವು ಹಣಕಾಸು ಮಾರುಕಟ್ಟೆಗಳಲ್ಲಿ ಆರ್ಥಿಕ ಹಿಂಜರಿತ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಭೀತಿ ಮೂಡಿಸಿದೆ.ಚೀನಾ ವಿಭಿನ್ನ ರಾಷ್ಟ್ರವಾಗಿದ್ದು, ಕೆಲವು ವಸ್ತುಗಳ ಮೇಲೆ ನಿಯಂತ್ರಣ ವಿಧಿಸಿದ್ದಕ್ಕೆ ಪ್ರತಿಯಾಗಿ ಈ ಸುಂಕ ವಿಧಿಸುತ್ತಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಮುಂಬರುವ ದಕ್ಷಿಣ ಕೊರಿಯಾ ಪ್ರವಾಸದ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಪ್ರಮೇಯವೇ ಇಲ್ಲ ಎಂದು ಟ್ರೂತ್ ಸೋಷಿಯಲ್‌ನಲ್ಲಿ ಟ್ರಂಪ್ ನುಡಿದಿದ್ದಾರೆ.ಅಮೆರಿಕದ ಕೈಗಾರಿಕೆಗೆ ಅಗತ್ಯವಿರುವ ಅಪರೂಪದ ಖನಿಜಗಳ ರಪ್ತುಗಳ ಮೇಲೆ ಚೀನಾ ನಿರ್ಬಂದ ಹೇರಿದ್ದಕ್ಕೆ ಪ್ರತಿಯಾಗಿ ಚೀನಾದ ಮೇಲೆ ಇನ್ನಷ್ಟು ಸುಂಕ ಹೇರುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಕ್ಸಿ ಅವರ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಚೀನೀ ಉತ್ಪನ್ನಗಳ ಮೇಲೆ ತೆರಿಗೆಗಳ ಭಾರೀ ಹೆಚ್ಚಳವನ್ನು ಎದುರು ನೋಡೆಎಉತ್ತಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ಅವರ ಈ ನಡೆ ಜಾಗತಿಕ ಆರ್ಥಿಕತೆಯ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಭಯ ಮೂಡಿಸಿದೆ.
ಕ್ಸಿ-ಟ್ರಂಪ್ ಅವರ ಮಾತುಕತೆ ಸನ್ನಿಹಿತವಾಗಿರುವ ಹೊತ್ತಿನಲ್ಲೇ ಚೀನಾ ಅಪರೂಪದ ಖನಿಜಗಳ ರಫ್ತಿನ ಮೇಲೆ ನಿರ್ಬಂಧ ಹೇರಿತ್ತು. ಚೀನಾದಿಂದ ಲೋಹದ ಮೂಲ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡಲು ವಿದೇಶಿ ಕಂಪೆನಿಗಳು ವಿಶೇಷ ಅನುಮೋದನೆ ಪಡೆಯಬೇಕಿದೆ. ಚೀನಾ ಅಪರೂಪದ ಖನಿಜಗಳ ಗಣಿಗಾರಿಕೆ ಸಂಸ್ಕರಣೆ ಮತ್ತು ಮರು ಬಳಕೆಯಲ್ಲಿನ ತಂತ್ರಜ್ಞಾನಗಳ ಮೇಲೂ ನಿರ್ಬಂಧ ವಿಧಿಸಿದೆ. ಮಿಲಿಟರಿ ಸರಕುಗಳಲ್ಲಿ ಬಳಸಲಾಗುವ ಉತ್ಪನ್ನಗಳ ರಫ್ತಿನ ಯಾವುದೇ ಮನವಿಯನ್ನು ತಿರಸ್ಕರಿಸುವುದಾಗಿ ಹೇಳಿತ್ತು.
ಚೀನಾ ತೀವ್ರ ತ್ವೇಷಮಯವಾಗುತ್ತಿದೆ, ಎಲೆಕ್ಟ್ರಾನಿಕ್ಸ್ , ಕಂಪ್ಯೂಟರ್ ಚಿಪ್ಸ್ , ಲೇಸರ್‌ರಸ, ಜೆಟ್ ಎಂಜಿನ್‌ಗಳು ಮತ್ತು ಇತರ ತಂತ್ರಜ್ಞಾನಗಳಲ್ಲಿ ಉಪಯೋಗಿಸುವ ಲೋಹಗಳು ಮತ್ತು ಅಯಸ್ಕಾಂತಗಳ ಲಭ್ಯತೆಯನ್ನು ಸೀಮಿತಗೊಳಿಸುವ ಮೂಲಕ ಜಗತ್ತಿನ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಲು ಚೀನಾ ಹವಣಿಸುತ್ತಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.