Thursday, November 21, 2024
Homeರಾಷ್ಟ್ರೀಯ | Nationalಅಕ್ಟೋಬರ್‌ನಲ್ಲಿ ತಿಮ್ಮಪ್ಪನ ದರ್ಶನಕ್ಕೆ ಜು.18ರಿಂದ ಬುಕ್ಕಿಂಗ್‌

ಅಕ್ಟೋಬರ್‌ನಲ್ಲಿ ತಿಮ್ಮಪ್ಪನ ದರ್ಶನಕ್ಕೆ ಜು.18ರಿಂದ ಬುಕ್ಕಿಂಗ್‌

ಹೈದರಾಬಾದ್‌,ಜು.15– ಅಕ್ಟೋಬರ್‌ ತಿಂಗಳಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವವರಿಗೆ ಜು.18ರಿಂದ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಮಾಡಲು ಟಿಟಿಡಿ ಅವಕಾಶ ಕಲ್ಪಿಸಿಕೊಟ್ಟಿದೆ.ಇದರಲ್ಲಿ ಆರ್ಜಿತ ಸೇವೆಗಳು, ದರ್ಶನ ಮತ್ತು ವಸತಿ ಕೊಠಡಿಗಳಿಗಾಗಿ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ಹೌದು…ಶ್ರೀವಾರಿ ಸೇವಾ ಟಿಕೆಟ್‌ಗಳನ್ನು ಇದೇ ತಿಂಗಳ 18 ರಂದು (ಜುಲೈ) ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

ಜುಲೈ 20 ರಂದು ಬೆಳಗ್ಗೆ 10 ಗಂಟೆಯವರೆಗೆ ಭಕ್ತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಟಿಟಿಡಿ ಅವಕಾಶ ಕಲ್ಪಿಸಲಿದೆ. ಜುಲೈ 20 ರಿಂದ 22 ರ ಮಧ್ಯಾಹ್ನ 12 ಗಂಟೆಯ ಮೊದಲು ಮೊತ್ತವನ್ನು ಪಾವತಿಸಿದವರಿಗೆ ಟಿಟಿಡಿ ಲಕ್ಕಿ ಡಿಪ್‌ ಟಿಕೆಟ್‌ಗಳನ್ನು ನೀಡುತ್ತದೆ.

ಅಲ್ಲದೆ ಟಿಟಿಡಿಯು ತಿರುಮಲ ಶ್ರೀವಾರಿ ಆರ್ಜಿತ ಸೇವೆಯ ಟಿಕೆಟ್‌ಗಳಾದ ಕಲ್ಯಾಣೋತ್ಸವ, ಆರ್ಜಿತ ಬ್ರಹೋತ್ಸವ, ಸಹಸ್ರದೀಪಾಲಂಕಾರ, ಊಂಜಾಲ್‌ ಸೇವಾ ಟಿಕೆಟ್‌ಗಳನ್ನು ಜುಲೈ 22ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಿದೆ. ಅದೇ ದಿನ (ಜುಲೈ 22) ಮಧ್ಯಾಹ್ನ 3 ಗಂಟೆಗೆ, ವರ್ಚುವಲ್‌ ಸೇವೆಗಳಿಗಾಗಿ ಅಕ್ಟೋಬರ್‌ ಕೋಟಾ ಮತ್ತು ಅವುಗಳ ವೀಕ್ಷಣಾ ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಟಿಟಿಡಿ ಬಿಡುಗಡೆ ಮಾಡುತ್ತದೆ. ಜೊತೆಗೆ ಟಿಟಿಡಿಯು ಅಕ್ಟೋಬರ್‌ ತಿಂಗಳ ಅಂಗಪ್ರದಕ್ಷಿಣಂ ಟೋಕನ್‌ಗಳ ಕೋಟಾವನ್ನು ಜುಲೈ 23 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.

ವಯೋವದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರ ತಿಮಪ್ಪನ ದರ್ಶನಕ್ಕೆ ಅನುವು ಮಾಡಿಕೊಡಲು ಅಕ್ಟೋಬರ್‌ ತಿಂಗಳ ಉಚಿತ ವಿಶೇಷ ದರ್ಶನಂ ಟೋಕನ್‌ಗಳ ಕೋಟಾವನ್ನು ಜುಲೈ 23 ರಂದು ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.

ಅಕ್ಟೋಬರ್‌ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳ ಕೋಟಾವನ್ನು ಜುಲೈ 24ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ. ಜುಲೈ 24ರಂದು ಮಧ್ಯಾಹ್ನ 3 ಗಂಟೆಗೆ ತಿರುಮಲ ಮತ್ತು ತಿರುಪತಿಯಲ್ಲಿ ಅಕ್ಟೋಬರ್‌ ತಿಂಗಳ ಕೊಠಡಿಯ ಕೋಟಾವನ್ನು ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಜುಲೈ 25 ರಂದು ಟಿಟಿಡಿ ವ್ಯಾಪ್ತಿಯ ದೇವಾಲಯಗಳಲ್ಲಿ ಆಗಸ್ಟ್‌‍ ತಿಂಗಳ ಸೇವಾ ಕೋಟಾವನ್ನು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಭಕ್ತರು ಸೇವೆಗಳು, ದರ್ಶನ ಟಿಕೆಟ್‌ಗಳು ಮತ್ತು ವಸತಿ ಕೊಠಡಿಗಳನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡಿಕೊಳ್ಳಬಹುದಾಗಿದೆ.

RELATED ARTICLES

Latest News