ಪೇಶಾವರ,ಡಿ.31- ಪಾಕಿಸ್ತಾನಿ ಚೆಕ್ ಪೋಸ್ಟ್ ವಶಪಡಿಸಿಕೊಂಡಿರುವುದಾಗಿ ತೆಹ್ರಿಕ್-ಎ-ತಾಲಿಬಾನ್ ಉಗ್ರ ಸಂಘಟನೆ ಹೇಳಿದೆ. ವಾಯುವ್ಯ ಪಾಕಿಸ್ತಾನದ ಬಜೌರ್‌ನ ಬುಡಕಟ್ಟು ಜಿಲ್ಲೆಯ ಚೆಕ್‌ಪೋಸ್ಟ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದು ಇದಕ್ಕೆ ಪುರಾವೆಯಾಗಿ ವಿಡಿಯೋವನ್ನು ಪ್ರಕಟಿಸಿದೆ.
ನಾವು ಕೆಲವು ಸಮಯದ ಹಿಂದೆ ಪೋಸ್ಟ್ ಖಾಲಿ ಮಾಡಿದ್ದೇವೆ ಎಂದು ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದು ಅಲ್ಲಿ ಹೊಸ ಕೋಟೆಯ ರಚನೆಗೆ ಸ್ಥಳಾಂತರಿಸಲಾಯಿತು.ನಮ ಸೈನ್ಯವನ್ನು ಸರಕ್ಷತೆ ಮತ್ತು ಗಡಿ ರಕ್ಷಣೆ ಬದ್ದ ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆಯು ಬಜೌರ್‌ಗೆ ಮಾತ್ರ ಸೀಮಿತವಾಗಿಲ್ಲ ಆದರೆ ಉತ್ತರ ಮತ್ತು ದಕ್ಷಿಣ ವಜಿರಿಸ್ತಾನ್ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.