Friday, November 22, 2024
Homeಅಂತಾರಾಷ್ಟ್ರೀಯ | Internationalಚೆಕ್‍ಗಣರಾಜ್ಯದಲ್ಲಿ ಹಣದ ಮಳೆ..!

ಚೆಕ್‍ಗಣರಾಜ್ಯದಲ್ಲಿ ಹಣದ ಮಳೆ..!

ಜೆಕ್‍ಗಣರಾಜ್ಯ, ಅ.26- ಇಲ್ಲಿನ ಲೈಸಾ ನಾಡ್ ಲಾಬೆಮ್ ಪಟ್ಟಣದ ಬಳಿ ಹೆಲಿಕಾಪ್ಟರ್ ಮೂಲಕ ಒಂದು ಮಿಲಿಯನ್ ಡಾಲರ್ ಹಣವನ್ನು ಹಾರಿ ಬಿಡುವ ಮೂಲಕ ಚೆಕ್‍ಗಣರಾಜ್ಯದ ಪ್ರಭಾವಿ ಟಿವಿ ನಿರೂಪಕ ಕಮಿಲ್ ಬಾರ್ತೊಶೆಕ್ ಗಮನ ಸೆಳೆದಿದ್ದಾರೆ.ಕಜ್ಮಾ ಎಂಬ ಕಾವ್ಯನಾಮದಿಂದ ಹೆಚ್ಚು ಪರಿಚಿತರಾಗಿರುವ ಅವರು ಆರಂಭದಲ್ಲಿ ಸ್ಪರ್ಧೆಯ ಅಡಿಯಲ್ಲಿ ಕೇವಲ ಒಬ್ಬ ವಿಜೇತರಿಗೆ ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ನೀಡಲು ತೀರ್ಮಾನಿಸಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸುವವರು ಹಣವನ್ನು ಪತ್ತೆಹಚ್ಚಲು ಕಜ್ಮಾ ಅವರ ಚಲನಚಿತ್ರ ಒನ್‍ಮ್ಯಾನ್‍ಶೋ ಮೂವಿಯ ಎಂಬೆಡೆಡ್ ಕೋಡ್ ಅನ್ನು ಭೇದಿಸಬೇಕಾಗಿತ್ತು ಆದರೆ, ಯಾರಿಗೂ ಒಗಟನ್ನು ಬಿಡಿಸಲು ಸಾಧ್ಯವಾಗಲಿಲ್ಲ.

ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಮನೆ ಸೇರಿದಂತೆ ಹಲವೆಡೆ ಇಡಿ ದಾಳಿ

ಪ್ರಭಾವಿಗಳು ನಂತರ ಪರ್ಯಾಯ ಯೋಜನೆಯೊಂದಿಗೆ ಬಂದರು ಮತ್ತು ಸೈನ್ ಅಪ್ ಮಾಡಿದ ಎಲ್ಲಾ ಸ್ಪರ್ಧಿಗಳಿಗೆ ಹಣವನ್ನು ಹಂಚಲು ನಿರ್ಧರಿಸಿದರು. ಅವರು ಹಣವನ್ನು ಎಲ್ಲಿ ಡ್ರಾಪ್ ಮಾಡುತ್ತಾರೆ ಎಂಬ ಎನ್‍ಕ್ರಿಪ್ಟ್ ಮಾಡಿದ ಮಾಹಿತಿಯೊಂದಿಗೆ ಇಮೇಲ್ ಕಳುಹಿಸಿ ನಂತರ ಹೆಲಿಕಾಪ್ಟರ್‍ನೊಂದಿಗೆ ನಿಗದಿತ ಸ್ಥಳಕ್ಕೆ ಆಗಮಿಸಿ ಒಂದು ಮಿಲಿಯನ್ ಡಾಲರ್ ಹಣವನ್ನು ಜನರತ್ತ ತೂರಿದ್ದಾರೆ.

ಕಜ್ಮಾ ಅವರು ತಮ್ಮ ಅ„ಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ, ವಿಶ್ವದ ಮೊದಲ ನಿಜವಾದ ಹಣದ ಮಳೆ! ಜೆಕ್ ರಿಪಬ್ಲಿಕ್‍ನಲ್ಲಿ ಹೆಲಿಕಾಪ್ಟರ್‌ನಿಂದ 1.000.000 ಕೈಬಿಡಲಾಯಿತು ಮತ್ತು ಯಾರೂ ಸಾವನ್ನಪ್ಪಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

ಆಗಸದಿಂದ ಹಣದ ಸುರಿಮಳೆಯಾಗುತ್ತಿದ್ದಂತೆ ಗದ್ದೆಯಲ್ಲಿ ನೆರೆದಿದ್ದ ಸಾವಿರಾರು ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ಒಂದು ಗಂಟೆಯೊಳಗೆ ನೋಟುಗಳನ್ನೆಲ್ಲ ಸಂಗ್ರಹಿಸಿದರು. ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಜನರು ಬ್ಯಾಗ್‍ಗಳೊಂದಿಗೆ ಮೈದಾನದ ಮೂಲಕ ಓಡುತ್ತಿರುವುದನ್ನು ಕಾಣಬಹುದು, ಸಾಧ್ಯವಾದಷ್ಟು ಒಂದು ಡಾಲರ್ ಬಿಲ್‍ಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಕೆಲವರು ಸುಲಭವಾದ ರೀತಿಯಲ್ಲಿ ಸಾಧ್ಯವಾದಷ್ಟು ಹಣವನ್ನು ದೋಚಲು ಛತ್ರಿಗಳನ್ನು ತಂದಿದ್ದರು.

RELATED ARTICLES

Latest News