ಚೆನ್ನೈ, ನ.23- ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ)ಸಂಸ್ಥಾಪಕ, ನಟ-ರಾಜಕಾರಣಿ ವಿಜಯ್ ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆ ಪೂರ್ವ ಪ್ರಚಾರ ಆರಂಭಿಸಲಿದ್ದಾರೆ.
ಕಾಂಚೀಪುರಂ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಜನರನ್ನು ಉದ್ದೇಶಿಸಿ ಮಾತನಾಡುವ ಮೂಲಕ ತಮ ರಾಜಕೀಯ ಪ್ರಚಾರವನ್ನು ಪುನರಾರಂಭಿಸಲಿದ್ದಾರೆ.
ಸುಮಾರು 2 ತಿಂಗಳ ನಂತರ ವಿಜಯ್ ಪ್ರಚಾರ ಆರಂಭಿಸುತ್ತಿದ್ದು,ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಚೀಪುರಂ ಜಿಲ್ಲೆಯ ಸುಂಗುವರ್ಚತ್ತಿರಂನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸರಿಸುಮಾರು 1,500 ಜನರಿಗೆ ಕೋಡೆಡ್ ಪಾಸ್‌ಗಳನ್ನು ನೀಡಲಾಗಿದೆ ಮತ್ತು ಅದನ್ನು ಹೊಂದಿರುವವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಸ್ಥಳದಲ್ಲಿ, ಹಳದಿ ಟಿ-ಶರ್ಟ್‌ಗಳು ಮತ್ತು ಕ್ಯಾಪ್‌ಗಳನ್ನು ಧರಿಸಿದ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದಾರೆ.ಪೊಲೀಸರು , ಖಾಸಗಿ ಸಂಸ್ಥೆಗಳು ಭದ್ರತಾ ತಂಡದ ಬೌನ್ಸರ್‌ಗಳು ಮತ್ತು ಭಧ್ರತಾ ಸಿಬ್ಬಂದಿ,ವಾಹನ ಬನಿಲುಗಡೆ ,ಆಹಾರ ಮತ್ತು ನೀರನ್ನು ಲಭ್ಯವಾಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳು, ವಿಜಯ್ ಇಲ್ಲಿಗೆ ಹತ್ತಿರದ ಮಾಮಲ್ಲಪುರಂನಲ್ಲಿರುವ ರೆಸಾರ್ಟ್‌ನಲ್ಲಿ ಕರೂರ್ ಕಾಲ್ತುಳಿತಕ್ಕೆ ಬಲಿಯಾದವರ ಕುಟುಂಬಗಳನ್ನು ಭೇಟಿ ಮಾಡಿ ಸಂತಾಪ ಸೂಚಿಸಿದರು.
