ಬೆಂಗಳೂರು,ಡಿ.21- ನಗರದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಟ್ವಿನ್ ಟನಲ್ ಸುರಂಗ ಮಾರ್ಗ ಯೋಜನೆ ಜಾರಿಗೆ ಗ್ರಹಣ ಬಡಿದಿದೆ.ನಗರದ ವಾಹನ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ಅಧಿಕಾರಿಗಳು ನಗರದ ನಾಲ್ಕು ಭಾಗಗಳನ್ನುಸಂಪರ್ಕಿಸುವಂತೆ ಟ್ವಿನ್ ಟನಲ್ ನಿರ್ಮಿಸಲು ನೀಲಿ ನಕ್ಷೆ ತಯಾರಿಸಿದ್ದರು. ಆದರೆ, ಇದೀಗ ಟ್ವಿನ್ ಟನಲ್ ಯೋಜನೆಗೆ ವಿಘ್ನ ಎದುರಾಗಿದ್ದು, ಕೇವಲ ಒಂದು ಸುರಂಗ ಮಾರ್ಗ ಮಾತ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಬ್ರಾಂಡ್ ಬೆಂಗಳೂರಿನ ಕಾರಿಡಾರ್ ರಸ್ತೆ ಯೋಜನೆಯಡಿ ನಗರದ ಉತ್ತರ ದಿಕ್ಕಿನಿಂದ ದಕ್ಷಿಣ ಭಾಗಕ್ಕೆ ಅದೇ ರೀತಿ ಪೂರ್ವ ದಿಂದ ಪಶ್ಚಿಮ ಭಾಗದಲ್ಲಿ ಕಾರಿಡರ್ ನಿರ್ಮಾಣ ಮಾಡಲು ಬಿಬಿಎಂಪಿ ಈ ಹಿಂದೆ ನಿರ್ಧರಿಸಿತ್ತು.
ಇದಕ್ಕಾಗಿ ಖಾಸಗಿ ಬ್ಯಾಂಕ್ ಮೂಲಕ 19 ಸಾವಿರ ಕೋಟಿ ಸಾಲ ಪಡೆಯಲು ಮುಂದಾಗಿದ ಸರ್ಕಾರ ಇದೀಗ ಏಕಾಏಕಿ ಯೋಜನೆಯನ್ನೇ ಬದಲಾಯಿಸಲು ತೀರ್ಮಾನಿಸಿದೆ.
ಮೊದಲು ನಗರದ ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿಗೆ ಮಾತ್ರ ಕಾರಿಡಾರ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕಾಗಿ 8 ಸಾವಿರ ಕೋಟಿ ಸಾಲ ಪಡೆಯಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಈಗಾಗಲೇ ಸಾಲಕ್ಕೆ ಖಾಸಗಿ ಬ್ಯಾಕ್ ಗಳ ಬಳಿ ಬಿಬಿಎಂಪಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸುಮಾರು 18. 5 ಕಿ.ಮೀ ಉದ್ದದ ಈ ಟನಲ್ ರಸ್ತೆಯನ್ನು ಎಂಟು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹೆಬ್ಬಾಳ ಎಸ್ಟಿಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ.. ಮೂರು ಲೈನ್ಗಳ ಟ್ವಿನ್ ಟನಲ್ ರಸ್ತೆ ನಿರ್ಮಿಸಲಾಗುತ್ತಿದೆ.
ಹೆಬ್ಬಾಳ ದಿಂದ ಮೇಖ್ರಿ ಸರ್ಕಲ್, ಅರಮನೆ ರಸ್ತೆ, ರೇಸ್ ಕೋರ್ಸ್, ಚಾಲುಕ್ಯ ಸರ್ಕಲ್.. ಕಬ್ಬನ್ ಪಾರ್ಕ್, ಲಾಲ್ ಬಾಗ್, ಕೆ.ಎಚ್ ರಸ್ತೆ ಹಾಗೂ ಜಯನಗರ ಮಾರ್ಗವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಟನಲ್ ನಿರ್ಮಿಸುವ ಗುರಿ ಹೊಂದಲಾಗಿದೆ.ಈ ಟನಲ್ ನಿರ್ಮಾಣದ ಡಿಪಿಆರ್ಅನ್ನು ಬಿಬಿಎಂಪಿ ಈಗಾಗಲೇ ಸಿದ್ದ ಪಡಿಸಿದ್ದು, ಉದ್ದೇಶಿತ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಫಿಕ್‌್ಸ ಮಾಡುವ ನಿರೀಕ್ಷೆಯಿದೆ.