ಮಂಗಳೂರು,ಮೇ.19- ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್ ಆಕಾಂಕ್ಷ ಎಸ್ ನಾಯರ್ ಸಾವಿನ ಪ್ರಕರಣ ಹೊಸ ತಿರುವು ನೀಡಿದ್ದು ಪ್ರೇಮ ವೈಫಲ್ಯ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಧರ್ಮಸ್ಥಳದ ಬೊಳಿಯೂರು ನಿವಾಸಿ ಆಕಾಂಕ್ಷ ಎಸ್ ನಾಯರ್ ಕಳೆದ 6 ತಿಂಗಳಿನಿಂದ ದೆಹಲಿಯ ಸೈಸ್ ಜೆಟ್ ಏರೋಸ್ಪೇಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಹೆಚ್ಚಿನ ತರಬೇತಿಗೆ ಜರ್ಮನಿಗೆ ತೆರಳಲು ತಯಾರಿ ನಡೆಡಿಸಿದ್ದ ಆಕಾಂಕ್ಷ ಕೆಲವು ಶೈಕ್ಷಣಿಕ ದಾಖಲೆಗಳನ್ನು ಪಡೆಯಲು ಕಳೆದ ಶುಕ್ರವಾರ ಪಂಜಾಬ್ ಲವ್‌ಲಿ ಪ್ರೊಫೆಷನಲ್ ಯೂನಿವರ್ಸಿಟಿಗೆ ತೆರಳಿದ್ದಳು.
ಬಳಿಕ ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು. ಆಕಾಂಕ್ಷ ಪೋಷಕರು ಕಾಲೇಜಿನವರೇ ನನ್ನ ಮಗಳಿಗೆ ಏನೋ ಮಾಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ ಎಂದು ಆರೋಪಿಸಿದ್ದರು. ಆದರೆ ಅಸಲಿ ವಿಚಾರ ಈಗ ಹೊರಬಿದ್ದಿದೆ. ಆಕಾಂಕ್ಷಗೆ ತಾನು ಓದುತ್ತಿದ್ದ ಕಾಲೇಜಿನ ಪ್ರೊಫೆಸರ್‌ನನ್ನು ಪ್ರೀತಿಸುತ್ತಿದ್ದರು ಕೇರಳದ ಕೊಟ್ಟಾಯಂ ನಿವಾಸಿ ಎರಡು ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯ ಜೊತೆ ಆಕಾಂಕ್ಷಗೆ ಪ್ರೇಮಾಂಕುರವಾಗಿತ್ತು.
ಅಲ್ಲದೇ ಮ್ಯಾಥ್ ಜೊತೆ ಆತನ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಆಕಾಂಕ್ಷ ಜಗಳ ಮಾಡಿದ್ದಳು ಎಂದು ಜಲಂದರ್ ಠಾನೆ ಪೊಲೀಸರು ತಿಳಿಸಿದ್ದಾರೆ. ಮದುವೆಯಾಗುವುದಿಲ್ಲ ಎಂದು ಬಿಜಿಲ್ ಮ್ಯಾಥ್ಯ ಬಳಿಕ ಆಕೆಯ ಮನಸ್ಸು ಒಡೆದಿತ್ತು.ದೆಹಲಿಗೆ ತೆರಳಿದ್ದರು.
ದಾಖಲೆ ಪಡೆಯಲು ಕಾಲೇಜಿಗೆ ಬಂದಾಗಲು ಜಗಳ ಮಾಡಿ ನಂತರ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಪ್ರಸ್ತುತ ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆ ಮ್ಯಾಥ್ ವಿರುದ್ಧ ಪಂಜಾಬ್ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂದು ಶವಪರೀಕ್ಷೆ ಬಳಿಕ ಆಕಾಂಕ್ಗಳ ಮೃತದೇಹ ಹಸ್ತಾಂತರಿಸಲಾಗಿದೆ.