ಬೆಳಗಾವಿ, ನ. 15- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಸೇರಿದಂತೆ ಮೂವರು ಐಪಿಎಸ್ ಮತ್ತು ಇಬ್ಬರ ಐಎಎಸ್ ಅಧಿಕಾರಿಗಳ ಹೆಸರು, ಭಾವಚಿತ್ರ ಬಳಸಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಜಿಲ್ಲಾ ಸಿಎಲ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಮಧ್ಯ ಪ್ರದೇಶದ ಚತರಪುರ ಜಿಲ್ಲೆ ಚಾಂದಾಲ ತಾಲೂಕಿನ ಶ್ರೀಕಿ ಶೋರಿಲಾಲ ತಿವಾರಿ (46) ಹಾಗೂ ರಾಜಸ್ಥಾನದ ರಾಮಘಟ ಜಿಲ್ಲೆಯ ಅರ್ಭಾಜ್ (19) ಬಂಧಿತ ಆರೋಪಿಗಳಾಗಿದ್ದಾರೆ. ಎಸ್ಪಿ ಭೀಮಾ ಶಂಕರ್ ಗುಳೇದ್, ಐಪಿಎಸ್ ಅಧಿಕಾರಿ ಬಿ.ಎಸ್. ನೇಮಗೌಡ, ಬಾಲದಂಡಿ, ಐಎಎಸ್ ಅಧಿಕಾರಿ ಅನುಕುಮಾರಿ ಮತ್ತು ಎಂ. ಅರುಣ ಅವರುಗಳೂ ಸೇರಿದಂತೆ ಕೆಲವು ಅಧಿಕಾರಿಗಳ ಹೆಸರಿನಲ್ಲಿ FCEBOOK ಖಾತೆಗಳನ್ನು ತೆರದು ಸಾರ್ವಜನಿಕರಿಂದ ಹಣ ನೀಡುವಂತೆ ತಿಳಿಸುವುದು ಸೇರಿದಂತೆ ಸಾರ್ವಜನಿಕರಿಗೆ ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಅವರನ್ನು ವಿವಿಧ ರೀತಿಯಲ್ಲಿ ವಂಚಿಸಿ ಆನ್ಲೈನ್ ಮೂಲಕ ಹಣ ಲಪಟಾಯಿಸುತ್ತಿದ್ದರೂ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಎಸ್ಪಿ ಭೀಮಾಶಂಕರ್ ಗುಳೇದ್ ಅವರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿ ಸೂಕ್ತ ತನಿಖೆಗೆ ಆದೇಶಿಸಿದ್ದರು.ಪೊಲೀಸ್ ನಿರೀಕ್ಷಕ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ ಕುಮಾರ ಎಸ್. ನಂದೇಶ್ವರ ಅವರ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಕುರಿತು ತನಿಖೆ ಮುಂದುವರೆದಿದ್ದು, ಇನ್ಸ್ಪೆಕ್ಟರ್ ಸುನೀಲ ಕುಮಾರ ಅವರ ಕಾರ್ಯವನ್ನು ಎಸ್ಪಿ ಡಾ. ಭೀಮಾಶಂಕರ್ ಗುಳೇದ್, ಎಎಸ್ಪಿ ಶೃತಿ ಮತ್ತು ರಾಮಾಗೊಂಡ ಬಸರಗಿ ಅವರು ಶ್ಲಾಸಿದ್ದಾರೆ.