ಮಡಿಕೇರಿ,ಮೇ.13 – ಪ್ರವಾಸಕ್ಕೆ ಬಂದು ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಮಡಿಕೇರಿ ತಾಲೂಕಿನ ನಾಪೊಕ್ಲು ಬಳಿ ನಡೆದಿದೆ. ಮ್ಮೆಮಾಡುವಿನ ಕೂರುಳಿ ಗ್ರಾಮದ ಬಳಿಯ ಕವೇರಿ ನದಿ ಬಳಿ 8 ಜನ ಯುವಕರ ತಂಡ ಪ್ರವಾಸಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ.
ಚೇರಂಬಾಣೆ ಮೂಲದ ಗಿರೀಶ್ (16) ಮತ್ತು ಅಯ್ಯಪ್ಪ (18) ಮೃತ ಬಾಲಕರಾಗಿದ್ದಾರೆ. ಸ್ಥಳಕ್ಕೆ ನಾಪೊಕ್ಲು ಠಾಣೆಯ ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಶೋಧ ಕಾರ್ಯ ನಡೆಸಿ ನೀರಿನಿಂದ ಹೊರಗೆ ತೆಗೆಯಲಾಗಿದೆ. ಘಟನೆ ಸಂಭಂದ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.