ಸಿದ್ದಾರ್ಥನಗರ,ಮಾ.27- ಭಾರತ-ನೇಪಾಳ ಗಡಿಯಲ್ಲಿರುವ ಸಿದ್ಧಾರ್ಥನಗರದ ಕಕ್ರಾವಾ ಪೊಸ್ಟ್ ಮೂಲಕ ಉತ್ತರ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದ ಇಬ್ಬರು ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ. ಬಂದಿತರನ್ನು ಚೀನಾದ ಸಿಚುವಾನ್ ಮೂಲದ ಝೌ ಪುಲಿನ್ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಚೀನಾದ ಚಾಂಗ್ಕಿಂಗ್ ಮೂಲದ ಯುವಾನ್ ಯುಹಾನ್ ಎಂದು ಗುರುತಿಸಲಾಗಿದೆ.
ಎರಡು ಚೈನೀಸ್ ಪಾಸ್ಪೋರ್ಟ್ ಗಳು , ನೇಪಾಳಕ್ಕೆ ಪ್ರವಾಸಿ ವೀಸಾ, ಮೊಬೈಲ್ -ಫೋನ್ ಗಳು , ಎರಡು ಚೀನಾದ ಸಿಮ್ ಕಾರ್ಡ್ಗಳು ಮತ್ತು ಎರಡು ಸಣ್ಣ ಚೀಲಗಳಲ್ಲಿ ಒಟ್ಟು ಒಂಬತ್ತು ವಿವಿಧ ರೀತಿಯ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿನ್ನೆ ಇಬ್ಬರು ಚೀನೀ ಪ್ರಜೆಗಳನ್ನು (ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ) ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವಾಗ ಬಂಧಿಸಲಾಯಿತು. ವಿದೇಶಿಯರ ಕಾಯಿದೆ 1946 ರ ಸೆಕ್ಷನ್ 14 (ಎ) ಅಡಿಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಆರೋಪಿಗಳನ್ನು ಗೌರವಾನ್ವಿತ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಸಂಬಂಧಪಟ್ಟ ಅಧಕಾಧಿರಿಗಳು ಮಾಹಿತಿ ನೀಡಿದ್ದಾರೆ. ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.