ಬೆಂಗಳೂರು, ನ.4- ಇನ್ಫೋಸಿಸ್ ಉದ್ಯೋಗಿಯನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಸಿಸಿಎಚ್59 ನ್ಯಾಯಾಲಯ ಅಜೀವ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.
ಕಳೆದ 2018 ಜೂನ್ 26ರಂದು ಬಿಹಾರದ ಪಾಟ್ನಾ ಮೂಲದ ಸಾಫ್್ಟವೇರ್ ಇಂಜಿನಿಯರ್ ಸಿದ್ಧಾರ್ಥ(26) ಎಂಬುವವರನ್ನು ಸೆಂಟ್ರಿಂಗ್ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದ ಮಹೇಶ್ ಹಾಗೂ ಗಿರೀಶ ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ.
ಜೆಪಿ ನಗರದಲ್ಲಿ ವಾಸವಾಗಿದ್ದ ಸಿದ್ದಾರ್ಥ ಅವರು ತಮ ಸ್ನೇಹಿತ ರೊಂದಿಗೆ ಊಟ ಮುಗಿಸಿಕೊಂಡು ಮನೆಗೆ ವಾಪಸ್ಸಾಗು ವಾಗ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಮಹೇಶ್ಮತ್ತು ಗಿರೀಶ ಅವರ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಹತ್ತಿರದಲ್ಲಿ ಮನೆ ಕಟ್ಟುತ್ತಿದ್ದ ಸ್ಥಳದಲ್ಲಿದ್ದ ಸೆಂಟ್ರಿಂಗ್ ರಾಡ್ನಿಂದ ಸಿದ್ಧಾರ್ಥನ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಮೈಕೋ ಲೇಔಟ್ ಪೊಲೀಸ್ ಠಾಣೆಯ ಅಂದಿನ ಇನ್್ಸಪೆಕ್ಟರ್ ಆರ.ಎಂ. ಅಜಯ್ ಅವರು ಪ್ರಕರಣ ದಾಖಲಿಸಿ, ಮಹೇಶ್ ಮತ್ತು ಗಿರೀಶ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟಿಸ್ಟ ಸಲ್ಲಿಸಿದ್ದರು.
ಸಿಸಿ ಎಚ್ 59 ನ್ಯಾಯಾಲಯ ದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾ ಲಯ ಇಬ್ಬರು ಆರೋಪಿಗಳನ್ನು ಅಪರಾಧಿಗಳೆಂದು ಆದೇಶಿಸಿ, ಅಜೀವ ಕಾರಾಗೃಹ ಶಿಕ್ಷೆ ಜತೆಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕರಿಗೆ ಮಹಾಲಿಂಗಪ್ಪ ಅವರು ವಾದ ಮಂಡಿಸಿದ್ದಾರೆ.
