ರುದ್ರ ಪ್ರಯಾಗ, ಜೂ. 26-ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ ವಾಹನ ಇಲ್ಲಿನ ಅಲಕನಂದಾ ನದಿಗೆ ಬಿದ್ದುಇಬ್ಬರು ಸಾವನ್ನಪ್ಪಿ, ಹತ್ತು ಜನರು ನಾಪತ್ತೆಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ರುದ್ರಪ್ರಯಾಗ ಮತ್ತು ಗೌಚರ್ ನಡುವಿನ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫೋಲ್ತಿರ್ ಗ್ರಾಮದ ಬಳಿ ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಹಾರ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ಕಾರ್ಯಚರಣೆ ಕೈಗೊಂಡಿದೆ. ಅಪಘಾತ ಸ್ಥಳದ ಬಳಿ ಮತ್ತು ರುದ್ರಪ್ರಯಾಗ ಬಳಿಯ ನದಿಯಿಂದ ಎರಡು ಶವಗಳನ್ನು ಹೊರತೆಗೆಯಲಾಗಿದೆ ಎಂದು ರೆಡ್ ಕ್ರಾಸ್ ಸೊಸೈಟಿ ರಕ್ಷಣಾ ತಂಡದ ಸದಸ್ಯ ಸತ್ಯೇಂದ್ರ ಸಿಂಗ್ ಭಂಡಾರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಗಾಯಗೊಂಡಿದ್ದಾರೆ ಮತ್ತು ಹತ್ತು ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ವಾಹನದಲ್ಲಿ ಚಾಲಕ ಸೇರಿದಂತೆ 20 ಜನರು ಇದ್ದರು ಮತ್ತು ಬದರಿನಾಥ ಧಾಮದ ಕಡೆಗೆ ಹೋಗುತ್ತಿದ್ದರು.ರಾಜಸ್ಥಾನದ ಉದಯಪುರದಿಂದ ಉತ್ತರಾಖಂಡದ ಚಾರ್ ಧಾಮ ಯಾತ್ರೆಗೆ ಯಾತ್ರಿಕರು ಬಂದಿದ್ದರು ಎಂದು ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ.
- BIG NEWS : ಹೊಸಕೆರೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಟ ದರ್ಶನ್ ಅರೆಸ್ಟ್
- ರಾಜ್ಯದಲ್ಲಿ 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರು : ಕೆ.ಹೆಚ್.ಮುನಿಯಪ್ಪ
- ಭೂಸ್ವಾಧೀನ ವೇಳೆ ಹಣ ಪಡೆದಿದ್ದರೆ ಸೂರ್ಯ ಮುಳುಗುವುದರೊಳಗೆ ಸಸ್ಪೆಂಡ್ : ಡಿಕೆಶಿ
- ಬ್ಯಾಟ್ನಿಂದ ಹೊಡೆದು ಮಗನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ
- ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ 1090 ಅಧಿಕಾರಿಗಳು