ಜಮ್‌ಶೆಡ್‌ಪುರ, ಜು.30-ಜಾರ್ಖಂಡ್‌ನ ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಯ ಬಾರಾಬಾಂಬೂ ಬಳಿ ಇಂದು ಮುಂಜಾನೆ ಹೌರಾ-ಮುಂಬೈ ಮೇಲ್ ರೈಲು ಅಪಘಾತಕ್ಕೀಡಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ,20 ಮಂದಿ ಗಾಯಗೊಂಡಿದ್ದಾರೆ.ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ಜಮ್ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಾರಾಬಾಂಬೂ ಬಳಿ ಮುಂಜಾನೆ 3.45 ರಲ್ಲಿ ಅಪಘಾತ ಸಂಭವಿಸಿದೆ ಎಂದು ರೈಲ್ವೆ ವಕ್ತಾರ ಓಂ ಪ್ರಕಾಶ್ ಚರಣ್ ತಿಳಿಸಿದ್ದಾರೆ.
ಘಟನೆಯಲ್ಲಿ ಪಕ್ಕದ ಹಳಿಯಲ್ಲಿ ನಿಂತಿದ್ದ ಮತ್ತೊಂದು ಗೂಡ್ಸ್ ರೈಲು ಕೂಡ ಹಳಿತಪ್ಪಿದೆ ಎಂದು ಹೇಳಿದರು, ಆದರೆ ಎರಡು ಅಪಘಾತಗಳು ಏಕಕಾಲದಲ್ಲಿ ಸಂಭವಿಸಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಹೌರಾ-ಮುಂಬೈ ಮೇಲ್‌ನ 18 ಬೋಗಿಗಳು ಹಳಿತಪ್ಪಿದೆ, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಎನ್‌ಡಿಆರ್‌ಎಫ್ ತಂಡವು ಕೂಡ ಸ್ಥಳಕ್ಕೆ ಧಾವಿಸುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಗ್‌ಭೂಮ್ ಕುಲದೀಪ್ ಚೌಧರಿ ತಿಳಿಸಿದ್ದಾರೆ.
ಅಪಘಾತದ ಸ್ಥಳವು ಪಶ್ಚಿಮ ಸಿಂಗ್ಭೂಮ್ ಮತ್ತು ಸೆರೈಕೆಲಾ-ಖರ್ಸಾವಾನ್ ಜಿಲ್ಲೆಗಳ ನಡುವಿನ ಗಡಿಯ ಸಮೀಪದಲ್ಲಿದೆ.ಈ ರೈಲಿನಲ್ಲಿ ಇವುಗಳಲ್ಲಿ 16 ಪ್ಯಾಸೆಂಜರ್ ಬೋಗಿಗಳಿದ್ದವು. ಗಾಯಗೊಂಡ ಪ್ರಯಾಣಿಕರಿಗೆ ಬಾರಾಬಂಬೂನಲ್ಲಿ ವೈದ್ಯಕೀಯ ನೆರವು ನೀಡಲಾಯಿತು. ಕೆಲವರನ್ನು ಚಿಕಿತ್ಸೆಗಾಗಿ ಚಕ್ರಧರಪುರಕ್ಕೆ ಕರೆದೊಯ್ಯಲಾಯಿತು ಎಂದು ಇನ್ನೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಸೋಮವಾರ ರಾತ್ರಿ ಹೌರಾದಿಂದ ಹೊರಟ ರೈಲು ಇಂದು ಮುಂಜಾನೆ ಅಪಘಾತಕ್ಕೀಡಾಗಿದ್ದು ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಘಟನೆಯಿಂದ 22861 ಹೌರಾ-ಟಿಟ್ಲಗಢ್-ಕಾಂತಬಾಂಜಿ ಇಸ್ಪತ್ ಎಕ್‌್ಸಪ್ರೆಸ್ ಮತ್ತು 12021 ಹೌರಾ-ಬರ್ಬಿಲ್ ಜನಶತಾಬ್ದಿ ಎಕ್‌್ಸಪ್ರೆಸ್ ಸೇರಿದಂತೆ ಕೆಲವು ಎಕ್‌್ಸಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳಿಸಿದೆ.
ಆಗ್ನೇಯ ರೈಲ್ವೆ ಮಂಗಳವಾರ ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ.ಅದರಂತೆ ಮುಂಬೈಗೆ 022-22694040, ಭೂಸಾವಲ್‌ಗೆ 08799982712, ನಾಗ್‌ಪುರಕ್ಕೆ 7757912790, ಟಾಟಾಗೆ 0657-2290324, ಚಕ್ರಧರಪುರಕ್ಕೆ 06587-238072 ಮತ್ತು 40612060 ಕ್ಕೆ 40612 ಮತ್ತು ಜಾರ್ಸುಗುಡಕ್ಕೆ 06645-272530 ಗೆ ಹೌರಾದ ಸಹಾಯವಾಣಿ ಸಂಖ್ಯೆಗಳು 9433357920 ಮತ್ತು 033-26382217, ಮತ್ತು ಶಾಲಿಮಾರ್‌ಗೆ 7595074427 ಮತ್ತು 6295531471 ಮತ್ತು ಖರಗ್‌ಪುರಕ್ಕೆ 03222-293764ಗೆ ಕರೆ ಮಾಡಬಹುದು