Friday, September 19, 2025
Homeರಾಜ್ಯಕಂಬಳ ನೋಡಿ ಹಿಂತಿರುಗುತ್ತಿದ್ದಾಗ ಕಾರು ಅಪಘಾತ, ಇಬ್ಬರ ಸಾವು

ಕಂಬಳ ನೋಡಿ ಹಿಂತಿರುಗುತ್ತಿದ್ದಾಗ ಕಾರು ಅಪಘಾತ, ಇಬ್ಬರ ಸಾವು

ಕುಣಿಗಲ್, ನ.26- ಬೆಂಗಳೂರಿನ ಅರಮನೆಯ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ನೋಡಿಕೊಂಡು ವಾಪಸ್ ಊರಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೋರ್‍ವೆಲ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತಗೆರೆಯಲ್ಲಿಂದು ಮುಂಜಾನೆ ನಡೆದಿದೆ.

ಮಂಗಳೂರಿನ ಬಜ್ಪೆ ಮೂಲದ ಕಿಶಾನ್ ಶೆಟ್ಟಿ(20) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟರ ತೊಟದ ನಿವಾಸಿ ಫಿಲೀಪ್ ನೇರಿ ಲೋಬೋ(32) ಮೃತಪಟ್ಟ ದುರ್ದೈವಿಗಳು. ಹರೀಶ್‍ಶೆಟ್ಟಿ, ನಿತೇಶ್ ಭಂಡಾರಿ, ಪ್ರೀತಿ ಲೋಭೋ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ವಿಕ್ಷೀಸಿ ಸ್ವಿಫ್ಟ್ ಕಾರಿನಲ್ಲಿ ಮಂಗಳೂರಿಗೆ ಹಿಂದಿರುಗುತ್ತಿದ್ದಾಗ ರಾತ್ರಿ 1.30 ಸುಮಾರಿನಲ್ಲಿ ಕೊತ್ತಗೆರೆ ಸಮೀಪ ಎದುರಿನಿಂದ ಬಂದ ಬೋರ್‍ವೆಲ್ ಲಾರಿಗೆ ಕಾರು ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ.

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಇಸ್ರೇಲ್ ಕೈ ಜೋಡಿಸುತ್ತದೆ

ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಠಾಣೆಯ ಸಿಪಿಐ ನವೀನ್‍ಗೌಡ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ನೆರವಿನಿಂದ ನಜ್ಜುಗುಜ್ಜಾದ ಕಾರಿನ ಬಾಗಿಲನ್ನು ಆರೆಯಿಂದ ಮೀಟಿ ಶವಗಳನ್ನು ಹೊರತೆಗಿದಿದ್ದಾರೆ. ಕುಣಿಗಲ್ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.

RELATED ARTICLES

Latest News