Thursday, August 14, 2025
Homeರಾಷ್ಟ್ರೀಯ | Nationalಪಂಜಾಬ್‌ನಲ್ಲಿ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಇಬ್ಬರು ಸದಸ್ಯರ ಬಂಧನ

ಪಂಜಾಬ್‌ನಲ್ಲಿ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಇಬ್ಬರು ಸದಸ್ಯರ ಬಂಧನ

Two Lawrence Bishnoi gang members held near Shambhu on Patiala-Ambala highway

ಚಂಡೀಗಢ, ಆ. 14 (ಪಿಟಿಐ) ಅಂತಾರಾಷ್ಟ್ರೀಯ ಪಾತಕಿ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿದೆ. ಹಲವಾರು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನ ಇಬ್ಬರು ಕಾರ್ಯಕರ್ತರನ್ನು ಶಂಭು ಗ್ರಾಮದ ಬಳಿಯ ಪಟಿಯಾಲ-ಅಂಬಾಲ ಹೆದ್ದಾರಿಯಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಅವರ ಬಳಿಯಿಂದ 9 ಎಂಎಂ ಗ್ಲಾಕ್‌ ಪಿಸ್ತೂಲ್‌ ಮತ್ತು ಆರು ಜೀವಂತ ಕಾರ್ಟ್ರಿಡ್‌್ಜಗಳನ್ನು ವಶಪಡಿಸಿಕೊಂಡಿದ್ದಾರೆ.ಒಂದು ಪ್ರಮುಖ ಪ್ರಗತಿಯಲ್ಲಿ, ಪಂಜಾಬ್‌ನ ಆಂಟಿ ಗ್ಯಾಂಗ್‌ಸ್ಟರ್‌ ಟಾಸ್ಕ್‌ ಫೋರ್ಸ್‌ ಶಂಭು ಗ್ರಾಮದ ಬಳಿಯ ಪಟಿಯಾಲ-ಅಂಬಾಲ ಹೆದ್ದಾರಿಯಿಂದ ಇಬ್ಬರು ಮೋಸ್ಟ್‌ ವಾಂಟೆಡ್‌ ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ ಕಾರ್ಯಕರ್ತರನ್ನು ಬಂಧಿಸಿದೆ, ಎಂದು ಪೊಲೀಸ್‌‍ ಮಹಾನಿರ್ದೇಶಕ ಗೌರವ್‌ ಯಾದವ್‌ ಎಕ್‌್ಸನಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅವರು ಕೊಲೆ ಮಾಡಿದ ನಂತರ ನೇಪಾಳಕ್ಕೆ ಪರಾರಿಯಾಗಿದ್ದಾರೆ ಮತ್ತು ವಿದೇಶಿ ಮೂಲದ ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ಪಂಜಾಬ್‌ನಲ್ಲಿ ಸಂವೇದನಾಶೀಲ ಅಪರಾಧ ಮಾಡಲು ಮರಳಿದ್ದಾರೆ ಎಂದು ಅವರು ಹೇಳಿದರು.

ಆರೋಪಿಗಳಿಬ್ಬರೂ ವ್ಯಾಪಕ ಕ್ರಿಮಿನಲ್‌ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅವರ ವಿರುದ್ಧ ಪಂಜಾಬ್‌‍, ದೆಹಲಿ, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವಿವಿಧ ಕ್ರಿಮಿನಲ್‌ ಕಾಯ್ದೆಗಳ ಅಡಿಯಲ್ಲಿ 15 ಕ್ಕೂ ಹೆಚ್ಚು ಘೋರ ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.ಇತ್ತೀಚೆಗೆ ಫಜಿಲ್ಕಾದಲ್ಲಿ ನಡೆದ ಭಾರತ್‌ ರತನ್‌ ಅಲಿಯಾಸ್‌‍ ವಿಕ್ಕಿ ಹತ್ಯೆಯಲ್ಲೂ ಅವರು ಬೇಕಾಗಿದ್ದರು ಎಂದು ಡಿಜಿಪಿ ಹೇಳಿದರು.

RELATED ARTICLES

Latest News