ಜಮ್ಮು, ಡಿ.8-ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಇಂದು ಮುಂಜಾನೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಪೊಲೀಸರು ಉತ್ತರ ಕಾಶೀರದ ಸೋಪೋರ್‌ನಿಂದ ಜಮು ಪ್ರದೇಶದ ರಿಯಾಸಿ ಜಿಲ್ಲೆಯ ತಲ್ವಾರದ ಸಬ್ಸಿಡರಿ ತರಬೇತಿ ಕೇಂದ್ರಕ್ಕೆ (ಎಸ್‌ಟಿಸಿ) ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 6.30 ರ ಸುಮಾರಿಗೆ ಉಧಮ್‌ಪುರದ ರೆಹೆಂಬಲ್ ಪ್ರದೇಶದ ಕಾಳಿ ಮಾತಾ ದೇವಸ್ಥಾನದ ಬಳಿ ಗುಂಡೇಟಿನಿಂದ ಗಾಯರೊಂಡಿರುವ ದೇಹಗಳು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಇದರ ನಡೆವೆ ಪ್ರಾಥಮಿಕ ತನಿಖೆಯಲ್ಲಿ ಇದು ಸೋದರ ಹತ್ಯೆ ಮತ್ತು ಆತಹತ್ಯೆ ಪ್ರಕರಣ ಎಂದು ಶಂಕೆಯಿದೆ ಎಂದು ಹೇಳಿದ್ದಾರೆ.
ಮೃತರಲ್ಲಿ ಬಬ್ಬ ಚಾಲಕ ಕಾನ್‌ಸ್ಟೆಬಲ್ ಮತ್ತೊಬ್ಬರು ಹೆಡ್ ಕಾನ್‌ಸ್ಟೆಬಲ್ ಎಂದು ತಿಳಿದುಬಂದಿದೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕಾನ್‌್ಸಟೇಬಲ್ ಪ್ರಾಣಾಪಾಯದಿಂದ ಪಾರಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.