Wednesday, January 8, 2025
Homeರಾಷ್ಟ್ರೀಯ | Nationalಮಣಿಪುರದಲ್ಲಿ ಇಬ್ಬರು ಪ್ರೆಪಕ್‌ ಉಗ್ರರ ಬಂಧನ

ಮಣಿಪುರದಲ್ಲಿ ಇಬ್ಬರು ಪ್ರೆಪಕ್‌ ಉಗ್ರರ ಬಂಧನ

Two PREPAK militants nabbed in Manipur

ಇಂಫಾಲ, ಡಿ 30 (ಪಿಟಿಐ) ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಸುಲಿಗೆಯಲ್ಲಿ ತೊಡಗಿದ್ದ ಆರೋಪದ ಮೇಲೆ ನಿಷೇಧಿತ ಸಂಘಟನೆ ಪ್ರೆಪಕ್‌ಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಉಗ್ರಗಾಮಿಗಳನ್ನು ಲೀಶಾಂಗ್ಥೆಮ್‌ ನೆಪೋಲಿಯನ್‌ ಮೈತೆ (35) ಮತ್ತು ಥೋಕ್ಚೋಮ್‌ ಅಮುಜಾವೊ ಸಿಂಗ್‌ (33) ಎಂದು ಗುರುತಿಸಲಾಗಿದ್ದು, ಅವರನ್ನು ಸಂಗೈಪ್ರೌ ಮಮಾಂಗ್‌ ಲೈಕೈಯಿಂದ ಬಂಧಿಸಲಾಗಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ಬಳಿಯಿದ್ದ ಮೂರು ಮೊಬೈಲ್‌ ಫೋನ್‌ಗಳು ಮತ್ತು 12 ಬೇಡಿಕೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಏತನಧ್ಯೆ, ಭದ್ರತಾ ಪಡೆಗಳು ಚುರಾಚಂದ್‌ಪುರ ಮತ್ತು ತೆಂಗನೌಪಾಲ್‌ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಶಸಾ್ತ್ರಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್‌‍ ಹೇಳಿಕೆ ತಿಳಿಸಿದೆ.

ಚುರಾಚಂದ್‌ಪುರ ಜಿಲ್ಲೆಯ ಮುಲ್ಲಮ್‌ ಗ್ರಾಮದಲ್ಲಿ ಇನ್ಸಾಸ್‌‍ ರೈಫಲ್‌‍, 9 ಎಂಎಂ ಪಿಸ್ತೂಲ್‌ ಮತ್ತು ಸಿಂಗಲ್‌ ಬ್ಯಾರೆಲ್‌ ರೈಫಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ. ಈ ಹಿಂದೆ ತೆಂಗ್ನೌಪಾಲ್‌ ಜಿಲ್ಲೆಯ ಸೈವೊಮ್‌ ಗ್ರಾಮದಿಂದ .303 ರೈಫಲ್‌‍, 12-ಬೋರ್‌ ಸಿಂಗಲ್‌ ಬ್ಯಾರೆಲ್‌ ಗನ್‌‍, ಏಳು ಸುಧಾರಿತ ಸ್ಫೋಟಕ ಸಾಧನಗಳು, ಐದು ಹ್ಯಾಂಡ್‌ ಗ್ರೆನೇಡ್‌ಗಳು ಮತ್ತು ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

RELATED ARTICLES

Latest News