Wednesday, June 18, 2025
Homeಅಂತಾರಾಷ್ಟ್ರೀಯ | Internationalಪಾಕ್ ಸೇನಾ ಮುಖ್ಯಸ್ಥನಿಗೆ ಭೋಜನ ಕೂಟ ಏರ್ಪಡಿಸಿದ ಟ್ರಂಪ್

ಪಾಕ್ ಸೇನಾ ಮುಖ್ಯಸ್ಥನಿಗೆ ಭೋಜನ ಕೂಟ ಏರ್ಪಡಿಸಿದ ಟ್ರಂಪ್

U.S. President Donald Trump to host Pakistan Army chief Asim Munir for lunch

ವಾಷಿಂಗ್ಟನ್, ಜೂನ್ 18- ಮತ್ತೆ ಅಮೆರಿಕದ ನರಿ ಬುದ್ದಿ ಬಯಲಾಗಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸಿದ್ದಾರೆ.

ಅಧ್ಯಕ್ಷರು ಪಾಕಿಸ್ತಾನ ಇಸ್ಲಾಮಿಕ್ ಗಣರಾಜ್ಯದ ಸೇನಾ ಮುಖ್ಯಸ್ಥರೊಂದಿಗೆ ಊಟ ಮಾಡುತ್ತಾರೆ ಎಂದು ಶ್ವೇತಭವನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೂಟವು ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಶ್ವೇತಭವನದ ಕ್ಯಾಬಿನೆಟ್ ಕೊಠಡಿಯಲ್ಲಿ ನಡೆಯಲಿದೆ.

ಜಿ7 ನಾಯಕರ ಶೃಂಗಸಭೆಗಾಗಿ ಕೆನಡಾದ ಕನನಾಸ್ತಿಸ್‌ಗೆ ತಮ್ಮ ಪ್ರವಾಸವನ್ನು ಟ್ರಂಪ್ ಮೊಟಕುಗೊಳಿಸಿದ್ದರು ಮತ್ತು ಇತ್ತೀಚಿನ ಇಸ್ರೇಲ್-ಇರಾನ್ ಸಂಘರ್ಷದೊಂದಿಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಿನ್ನೆ ಬೆಳಿಗ್ಗೆ ವಾಷಿಂಗ್ಟನ್‌ಗೆ ಮರಳಿದರು.

RELATED ARTICLES

Latest News