ಯುಗಾದಿ ಹಬ್ಬವು ಹಿಂದೂ ಧರ್ಮಿಯರಿಗೆ ಹೊಸ ವರ್ಷದ ಆಗಮನವನ್ನು ಸೂಚಿಸುತ್ತದೆ. ಈ ದಿನ ಎಣ್ಣೆ ಸ್ನಾನ ಮಾಡುವುದು, ಬೇವು – ಬೆಲ್ಲ ತಿನ್ನುವುದು, ಹೊಸ ಬಟ್ಟೆಯನ್ನು ಧರಿಸುವುದು ವಿಶೇಷವಾಗಿರುತ್ತದೆ. ಯುಗಾದಿ ಹಬ್ಬವೂ ಶತಶತಮಾನಗಳಿಂದಲೂ ಆಚರಣೆಯಲ್ಲಿರುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ.
ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ. ಏಕೆಂದರೆ ಬ್ರಹಾಂಡದ ಸೃಷ್ಟಿಕರ್ತನಾದ ಬ್ರಹನು ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ. ಎಲ್ಲರ ಮನೆಯಲ್ಲೂ ಯುಗಾದಿಯ ಸಂಭ್ರಮ ಜೋರಾಗಿರುತ್ತದೆ. ಮನೆ ಸ್ವಚ್ಛಗೊಳಿಸಿ, ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬೇವು ಬೆಲ್ಲ ಹಂಚಿ, ಹಬ್ಬವನ್ನ ಸೆಲೆಬ್ರೇಟ್ ಮಾಡ್ತಾರೆ. ಹಾಗಾದ್ರೆ ನಮ ಸೆಲೆಬ್ರೆಟಿಗಳ ಯುಗಾದಿ ಹೇಗಿರುತ್ತೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಯುಗಾದಿ ಹಬ್ಬ ಹಿಂದೂಗಳ ಮೊದಲ ಹಬ್ಬವಾಗಿರುವ ಕಾರಣ ಎಲ್ಲರೂ ಅದ್ಧೂರಿಯಾಗಿಯೇ ಸೆಲೆಬ್ರೇಟ್ ಮಾಡುತ್ತಾರೆ. ನಮ ಕನ್ನಡದ ಹೆಮೆಯ ಕಲಾವಿದ, ಸಾಹಸಸಿಂಹ, ವಿಷ್ಣುವರ್ಧನ್ ಅವರ ಮನೆಯಲ್ಲೂ ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡುತ್ತಾರೆ.
ವಿಷ್ಣುದಾದ ಅಳಿಯ ಅನಿರುದ್‌್ಧ ಹಬ್ಬದ ಬಗ್ಗೆ ಹೇಳಿದ್ದು ಹೀಗೆ, ಹಬ್ಬ ಅಂದ್ರೇನೆ ಎಲ್ಲರೂ ಜೊತೆಗೆ ಇರ್ತೀವಿ ಅನ್ನೋ ಖುಷಿ. ಬಿಕಾಸ್ ಎಲ್ಲರೂ ಅವರದ್ದೇ ಆದ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಆದರೆ ಹಬ್ಬ ಅಂತ ಬಂದಾಗ ಎಲ್ಲರೂ ಬಿಡುವು ಮಾಡಿಕೊಂಡು ಹಬ್ಬ ಸೆಲೆಬ್ರೇಟ್ ಮಾಡ್ತೀವಿ. ವಿಶೇಷವಾಗಿ ಪೂಜೆ ಮಾಡ್ತೀವಿ, ಸಿಹಿ ತಿನಿಸುಗಳನ್ನು ಮಾಡ್ತೀವಿ. ಒಟ್ಟಿಗೆ ಕೂತು ಊಟ ಮಾಡ್ತೀವಿ. ನಮ ಅಪ್ಪಾಜಿ ಇದ್ದಾಗಂತು ಮನೆಗೆ ಸಾಕಷ್ಟು ಸ್ನೇಹಿತರು ಬರ್ತಾ ಇದ್ರು. ಕೂತು ಮಾತಾಡ್ತಾ ಇದ್ರು. ಸಂಭ್ರಮಿಸ್ತಾ ಇದ್ದರು.
ಎಲ್ಲರೂ ಮನೆಗೆ ಬರೋದೆ ಒಂದು ದೊಡ್ಡ ಹಬ್ಬದ ವಾತಾವರಣವನ್ನ ನಿರ್ಮಾಣ ಮಾಡ್ತಾ ಇತ್ತು. ಸ್ನೇಹಿತರೇನಾದ್ರೂ ಬೇಗ ಮನೆಗೆ ಹೋಗ್ತೀನಿ ಅಂದ್ರೆ, ಅಪ್ಪಾಜಿ ಹೇಳೋರು ಬರುವಾಗ ಮಾತ್ರ ನಿಮಿಷ್ಟಕ್ಕೆ ಗೇಟ್ ತೆಗೆದಿರುತ್ತೆ, ಹೋಗುವಾಗ ನಾನೇಳಿದಾಗ ತೆಗೆಯುತ್ತೆ ಅಂತ. ಯುಗಾದಿ ಹಬ್ಬದಲ್ಲಿ ಎಲ್ಲರೂ ನಕ್ಕು ನಲಿಯುತ್ತಿದ್ದ ದಿನಗಳು ಅವು. ಈಗ ಅಮ, ನಾವೂ, ಮಕ್ಕಳೆಲ್ಲ ಸೇರಿ ಹಬ್ಬವನ್ನ ಸೆಲೆಬ್ರೇಟ್ ಮಾಡ್ತೀವಿ. ಇದು ಬೇವು ಬೆಲ್ಲ ಹಂಚುವ ಹಬ್ಬ. ಎಲ್ಲರ ಜೀವನದಲ್ಲೂ ಯುಗಾದಿ ಒಳ್ಳೆಯ ದಿನಗಳನ್ನ ತರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಮನೆಯಲ್ಲಿ ಯುಗಾದಿ ಸಡಗರ :
ಲವ್ಲಿ ಸ್ಟಾರ್ ಪ್ರೇಮ್ ಸದಾ ಕಾಲದ ಚಿರ ಯುವಕ. ತನ್ನ ಇಬ್ಬರು ಮಕ್ಕಳು ಇಂಡಸ್ಟ್ರಿಯಲ್ಲಿ ಆಲ್‌ರೆಡಿ ಗುರುತಿಸಿಕೊಂಡಿದ್ದಾರೆ. ಆದರೂ ಹ್ಯಾಂಡ್ಸಮ್ ಹೀರೋ ಆಗಿನೆ ಹೆಂಗೆಳೆಯರ ಮನಸ್ಸು ಕದಿಯುತ್ತಿರುವವರು ಲವ್ಲಿ ಸ್ಟಾರ್ ಪ್ರೇಮ್.
ಇವರ ಪುತ್ರಿ ಟಗರು ಪಲ್ಯ ಸಿನಿಮಾ ಮೂಲಕ ನಟಿಯಾಗಿ ಖ್ಯಾತಿ ಪಡೆದಿದ್ದಾರೆ. ಅಮು ಎಂಬ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಗ ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಟ್ಟಾಗಿದೆ. ಲವ್ಲಿ ಸ್ಟಾರ್ ಪ್ರೇಮ್ ಮನೆಯಲ್ಲಿ ಯುಗಾದಿ ಹಬ್ಬವನ್ನ ಹೇಗೆ ಸೆಲೆಬ್ರೇಟ್ ಮಾಡ್ತಾರೆ ಅನ್ನೋದನ್ನ ಜ್ಯೋತಿ ಪ್ರೇಮ್ ಹೇಳಿದ್ದು ಹೀಗೆ, ನಮ ಮನೆಯಲ್ಲಿ ಹಬ್ಬದ ಹಿಂದಿನ ದಿನವೇ ಪೂಜೆ ಮಾಡ್ತೀವಿ. ಹಬ್ಬದ ಅಡುಗೆಯೆಲ್ಲ ಮಾಡಿ, ಹಿರಿಯರಿಗೆ ಅಂದು ಪೂಜೆ ಮಾಡ್ತೀವಿ. ನಮ ಅತ್ತೆಯ ಮನೆಯಲ್ಲಿ ಮೊದಲಿನಿಂದಾನೂ ನಡೆದುಕೊಂಡು ಬಂದ ಸಂಪ್ರದಾಯ ಇದು.
ಹಬ್ವದ ಹಿಂದಿನ ದಿನ ಗ್ರ್ಯಾಂಡ್ ಆಗಿ ಮಾಡ್ತೀವಿ.
ಹಬ್ಬದ ದಿನವೂ ದೇವರಿಗೆ ಪೂಜೆ ಮಾಡಿ, ಹಬ್ಬದ ಅಡುಗೆಯನ್ನ ಮಾಡ್ತೀವಿ. ಮಕ್ಕಳಿಬ್ವರು ಹಬ್ಬವನ್ನ ಎಂಜಾಯ್ ಮಾಡ್ತಾರೆ. ಅವರ ಖುಷಿಯೇ ನಮಗೂ ಖುಷಿ. ಸಿಹಿಮಾಡಿ, ಎಲ್ಲರೂ ಒಟ್ಟಿಗೆ ಕೂತು ತಿಂದು, ಹಬ್ಬ ಸೆಲೆಬ್ರೇಟ್ ಮಾಡ್ತೀವಿ. ಅಮೃತಾ, ಪ್ರೇಮ್ ಶೂಟಿಂಗ್ ಬ್ಯುಸಿ ಇದ್ರು ಹಬ್ಬದ ದಿನ ಬಿಡುವು ಮಾಡಿಕೊಳ್ತಾರೆ. ಹೊಸ ವರ್ಷವಿದ್ದಂತೆ ಯುಗಾದಿ ಹಬ್ಬ. ಹೀಗಾಗಿ ಬೇವು ಬೆಲ್ಲ ತಿಂದು, ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸುತ್ತೇನೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನ ತಿಳಿಸ್ತೇನೆ ಎಂದು ಹಬ್ಬದ ಹಾರೈಕೆಯನ್ನು ತಿಳಿಸಿದ್ದಾರೆ.
ಮಗಳ ಜೊತೆಗೆ ಹರ್ಷಿಕಾ ಯುಗಾದಿ
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿಗೆ ಈ ಯುಗಾದಿ ಹಬ್ಬ ವಿಶೇಷ ಅಂತಾನೇ ಹೇಳಬಹುದು. ಮಗಳು ಮನೆಗೆ ಬಂದಾಗಿನಿಂದ ಎಲ್ಲಾ ಹಬ್ಬಗಳು ಅವರಿಗೆ ಸ್ಪೆಷಲ್. ಕೂರ್ಗ್ ಕಡೆಗೆ ಯುಗಾದಿ ಹಬ್ಬವನ್ನ ಅದ್ಧೂರಿಯಾಗಿ ಮಾಡದೆ ಹೋದರೂ, ಹಬ್ಬದ ವಾತಾವರಣವಂತು ಇರುತ್ತದೆ. ಹರ್ಷಿಕಾ ಪೂಣಚ್ಚ ಮಗಳು ಬಂದ ಮೇಲೆ ಯುಗಾದಿ ಎಷ್ಟು ವಿಶೇಷ ಅನ್ನೋದನ್ನ ಹೇಳಿದ್ದಾರೆ. ನಮನೆಯಲ್ಲಿ ಪುಟ್ಟ ಗೌರಿ ಇರೋದ್ರಿಂದ ಎಲ್ಲಾ ಹಬ್ಬಗಳು ವಿಶೇಷ ಅಂಡ್ ಗ್ರ್ಯಾಂಡ್ ಆಗಿನೆ ಇರುತ್ತವೆ. ಯುಗಾದಿ ಹಬ್ಬ ಎಂದಾಕ್ಷಣ ಬೇವು, ಬೆಲ್ಲ ವಿಶೇಷತೆ ಪಡೆದುಕೊಳ್ಳುತ್ತದೆ. ಎಲ್ಲರ ಬಾಳಲ್ಲೂ ಸಿಹಿ ಕಹಿ ಸಮಾನವಾಗಿರುತ್ತದೆ.
ಆದರೆ ಯುಗಾದಿಯಂದು ಕಹಿ ಘಟನೆಗಳು ದೂರಾಗಿ, ಸಿಹಿ ಬದುಕು ಹತ್ತಿರವಾಗಲಿ ಎಂದೇ ಎಲ್ಲರಿಗೂ ಹಾರೈಸುತ್ತೇವೆ. ಈ ಯುಗದ ಹಾದಿ, ಹೊಸ ವರ್ಷದ ಹೊಸ್ತಿಲಲ್ಲಿ ಇದ್ದೀವಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾನು ಕೇಳಿ ಕೊಳ್ತೇನೆ. ಕೊರೋನಾದಂತ ಸಮಯದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನ ನೋಡಿದ್ದೀವಿ. ಈಗ ಎಲ್ಲವೂ ನಾರ್ಮಲ್ ಆಗ್ತಾ ಇದೆ. ಎಲ್ಲರಿಗೂ ಒಳಿತಾಗಲಿ ಎಂದು ಕೇಳಿಕೊಳ್ತೇನೆ. ನಮ ಕೊಡವ ಸಂಪ್ರದಾಯದಲ್ಲಿ ಬಹಳ ಗ್ರ್ಯಾಂಡ್ ಆಗಿ ಮೂರೇ ಹಬ್ಬಗಳನ್ನ ಮಾಡೋದು. ಆದರೆ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡ್ತೀವಿ. ಈಗ ಯುಗಾದಿಯನ್ನು ಅಷ್ಟೇ ಸಿಹಿ ಮಾಡಿ, ದೇವರಿಗೆ ಮಾಡಿ, ಮಗಳನ್ನ ವಿಶೇಷವಾಗಿ ರೆಡಿ ಮಾಡಿ ಹಬ್ಬವನ್ನ ಆಚರಣೆ ಮಾಡ್ತೇವೆ ಎಂದಿದ್ದಾರೆ.