Tuesday, April 1, 2025
Homeಬೆಂಗಳೂರುಯುಗಾದಿ ಸಂಭ್ರಮ : ಬೆಲೆ ಏರಿಕೆ ನಡುವೆಯೇ ಹಬ್ಬಕ್ಕೆ ಖರೀದಿ ಭರಾಟೆ ಜೋರು

ಯುಗಾದಿ ಸಂಭ್ರಮ : ಬೆಲೆ ಏರಿಕೆ ನಡುವೆಯೇ ಹಬ್ಬಕ್ಕೆ ಖರೀದಿ ಭರಾಟೆ ಜೋರು

Ugadi celebrations: Shopping spree in full swing amid price hike

ಬೆಂಗಳೂರು, ಮಾ.29- ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ನಾಳೆ ಯುಗಾದಿ ಹಬ್ಬ ಬಂದು ಹೊಸ್ತಿಲಲ್ಲಿ ನಿಲ್ಲಲಿದೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯನ್ನು ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಜನತೆ ಹಬ್ಬದ ಸಡಗರಕ್ಕೆ ಸಜ್ಜಾಗುತ್ತಿದ್ದಾರೆ.

ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗುಳಿಯಿಂದ ಕೂಡಿರುತ್ತದೆ. ಅಂತೆಯೇ ಈ ವರ್ಷ ಖರೀದಿ ಭರಾಟೆ ಜೋರಾಗಿದೆ. ತೀವ್ರ ಬಿಸಿಲಿನ ತಾಪದ ನಡುವೆಯೂ ಹೆದರದ ಜನರು ಮಾರುಕಟ್ಟೆಗಳಿಗೆ ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.

ಈ ವಹಿವಾಟಿಗೆ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ ಹಣ, ಉಚಿತ ಸಾರಿಗೆ ವ್ಯವಸ್ಥೆ ಹಿನ್ನೆಲೆಯಲ್ಲಿ ಮಹಿಳೆಯರು ನಗರಗಳಿಗೆ ತೆರಳಿ ಹೊಸ ಬಟ್ಟೆ ಸೇರಿದಂತೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿ ನಡೆಸಿದ್ದಾರೆ. ಈ ವರ್ಷ ಹಣ್ಣು, ತರಕಾರಿ ಬೆಳೆ ಕಡಿಮೆಯಾಗಿದೆ. ಆದರೆ ಹಬ್ಬದ ಕಾರಣ ಹೂವು, ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೆ ಏರಿದೆ.

ಹೂ: ಮಲ್ಲಿಗೆ ಕೆಜಿ 1800-2000, ಸೇವಂತಿಗೆ ಕೆಜಿ 200-250, ಗುಲಾಬಿ 180-200, ಚೆಂಡು 50-80 ಕಾಕಡ 600, ಕನಕಾಂಬರ 800-1000, ಸುಗಂದರಾಜ 250, ತುಳಸಿ 1 ಮಾರ್‌ಗೆ 100, ಬೇವು 1 ಕಟ್‌ಗೆ 25, ಮಾವಿನ ಎಲೆ 25 ರೂ ಕಂಡುಬಂದಿದೆ.

ತರಕಾರಿ: ಬೀನ್ಸ್‌ ಬೆಲೆ 120 ರೂ.ಗೆ ಏರಿಕೆಯಾಗಿದೆ, ಕ್ಯಾರೆಟ್ 40 ರೂ. ಕ್ಕೆ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಾದ ಕ್ಯಾಪ್ತಿಕಂ 60, ಬದನೆ 50, ಆಲೂಗೆಡ್ಡೆ 50, ಟೊಮ್ಯಾಟೋ ಕೆಜಿಗೆ 10ರೂ.ಗೆ ಮಾರಾಟವಾಗುತ್ತಿದೆ.

ದಿನಸಿ: ತೊಗರಿ ಕೆಜಿ 140ರೂ. ಬೆಲ್ಲ ಕೆಜಿ 55-65 ರೂ ಮಾರಾಟವಾಗುತ್ತಿದೆ.

RELATED ARTICLES

Latest News