ಬೆಂಗಳೂರು, ಸೆಪ್ಟೆಂಬರ್ 17, 2024: ಭಾರತದ ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ ಆಗಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಉಜ್ಜೀವನ್), ತನ್ನ ಹೊಸ ಬ್ರ್ಯಾಂಡ್ ಪ್ರಚಾರ ಅಭಿಯಾನ- ‘ಬ್ಯಾಂಕಿಂಗ್ ಜೈಸೆ ಮೇರಿ ಮರ್ಜಿ, ಉಜ್ಜೀವನ್ ಮೇಕ್ಸ್ ಇಟ್ ಈಸಿ ಈಸಿ (ನಿಮ್ಮಿಷ್ಟದಂತೆ ಬ್ಯಾಂಕಿಂಗ್ ಸೇವೆಯನ್ನು ಉಜ್ಜೀವನ್ ಸುಲಭಗೊಳಿಸಿದೆ)-ಗೆ ಪ್ರಚಾರ ಚಾಲನೆ ನೀಡಿದೆ. ಸುರಕ್ಷಿತ ಹಾಗೂ ಅಡೆತಡೆರಹಿತ ರೀತಿಯಲ್ಲಿ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬ್ಯಾಂಕಿಂಗ್ ಸೇವೆ ಪಡೆಯುವ ಸ್ವಾತಂತ್ರ್ಯ ಒದಗಿಸಲಿರುವ ಬ್ಯಾಂಕ್‌ನ ಬದ್ಧತೆಗೆ ಈ ಪ್ರಚಾರ ಅಭಿಯಾನವು ಒತ್ತು ನೀಡಲಿದೆ.
ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ. ಭೌತಿಕ ಮತ್ತು ಡಿಜಿಟಲ್ ವೇದಿಕೆಗಳಾದ್ಯಂತ ಉಜ್ಜೀವನ್ ಜೊತೆಗೆ ಬ್ಯಾಂಕಿಂಗ್ ಸೇವೆಯು ಶ್ರಮರಹಿತ ಮತ್ತು ಆನಂದದಾಯಕವಾಗಿರಲಿದೆ ಎಂಬುದನ್ನು ಈ ಜಾಹೀರಾತು ಸುಂದರವಾಗಿ ವಿವರಿಸುತ್ತದೆ. ಉಜ್ಜೀವನ್ ತನ್ನ ಗ್ರಾಹಕರ ವಿವಿಧ ಅಗತ್ಯಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಪೂರೈಸುತ್ತದೆ. ದುಡಿಯುವ ವ್ಯಕ್ತಿಗೆ ಬ್ಯಾಂಕಿಂಗ್ ಸೇವೆಯ ಲಭ್ಯತೆ, ಅನುಕೂಲತೆ ಮತ್ತು ವೈಯಕ್ತಿಕ ಅಗತ್ಯಗಳನ್ನು ಈಡೇರಿಸುವಿಕೆ ಅಥವಾ ಸಾಂಪ್ರದಾಯಿಕ ಬ್ಯಾಂಕಿಂಗ್‌ನಲ್ಲಿ ಸರಳತೆ ಮತ್ತು ನಂಬಿಕೆ ಬಯಸುವ ಹಿರಿಯ ನಾಗರಿಕರ ಅಗತ್ಯಗಳನ್ನೆಲ್ಲ ಪೂರೈಸಲಿದೆ.
7 ವಾರಗಳ ಈ ಬ್ರ್ಯಾಂಡ್ ಪ್ರಚಾರ ಅಭಿಯಾನವು 2024ರ ಸೆಪ್ಟೆಂಬರ್ 2 ರಿಂದ ಹನ್ನೊಂದು ಪ್ರಾದೇಶಿಕ ಭಾಷೆಗಳಲ್ಲಿ ಪ್ರಾರಂಭವಾಗಿದೆ. ಇದನ್ನು ಅಂತರ್ಜಾಲ ತಾಣ, ಒಟಿಟಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಾದ್ಯಂತ ಜನಪ್ರಿಯರಾಗಿರುವ ಪ್ರಭಾವಿಗಳ ಜೊತೆಗಿನ ಒಡನಾಟ ಮತ್ತು ಉಜ್ಜೀವನ್ ಶಾಖೆಗಳ ಮೂಲಕ ಈ ಜಾಹೀರಾತನ್ನು ಪ್ರದರ್ಶಿಸಲಾಗುತ್ತಿದೆ.
ಉಜ್ಜೀವನ್ ಕಾರ್ಯನಿರ್ವಾಹಕ ನಿರ್ದೇಶಕಿ ಕರೋಲ್ ಫುರ್ಟಾಡೊ ಅವರು ಮಾತನಾಡಿ, “ಜವಾಬ್ದಾರಿಯುತ ಸಮೂಹ ಮಾರುಕಟ್ಟೆಯ ಬ್ಯಾಂಕ್ ಆಗಿರುವ ಉಜ್ಜೀವನ್, ನಮ್ಮ ಗ್ರಾಹಕರ ಪಾಲಿಗೆ ಹಣಕಾಸಿನ ಮತ್ತು ಡಿಜಿಟಲ್ ಒಳಗೊಳ್ಳುವಿಕೆಯ ಭವಿಷ್ಯ ರೂಪಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಈ ಹೊಸ ಪ್ರಚಾರ ಅಭಿಯಾನವು ಬ್ಯಾಂಕಿಂಗ್ ಸೇವೆಯನ್ನು ಸುಲಭವಾಗಿ ದೊರೆಯುವಂತೆ ಮಾಡುವ ಭರವಸೆಯಾಗಿದೆ. ಭೌತಿಕ ಮತ್ತು ಡಿಜಿಟಲ್ ಚಾನಲ್‌ಗಳಾದ್ಯಂತ ಯಾವುದೇ ಸಮಯದಲ್ಲಿ ಬ್ಯಾಂಕಿಂಗ್ ಸೇವೆಯು ಸುರಕ್ಷಿತ ರೀತಿಯಲ್ಲಿ ಸುಲಭವಾಗಿ ದೊರೆಯಲಿರುವುದನ್ನು ಇದು ಖಚಿತಪಡಿಸಲಿದೆ. ನಮ್ಮ ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳು ನಮ್ಮನ್ನು ಸುಲಭ ಮತ್ತು ಅನುಕೂಲಕರ ಬ್ಯಾಂಕಿಂಗ್ ಪಾಲುದಾರರನ್ನಾಗಿ ಮಾಡುವ ಗುರಿ ಹೊಂದಿವೆʼ ಎಂದು ಹೇಳಿದ್ದಾರೆ.
ಉಜ್ಜೀವನ್ ಮುಖ್ಯ ಮಾರಾಟ ಅಧಿಕಾರಿ ಲಕ್ಷ್ಮಣ್ ವೇಲಾಯುಧಮ್ ಅವರು ಪ್ರತಿಕ್ರಿಯಿಸಿ, ʼಗ್ರಾಹಕರು ಬ್ಯಾಂಕಿಂಗ್ ಸೇವೆಯನ್ನು ಅಗತ್ಯವಾದ ಸಮಯ ತೆಗೆದುಕೊಳ್ಳುವ ಕೆಲಸವೆಂದು ಗ್ರಹಿಸುತ್ತಾರೆ. ನಮ್ಮ ಈ ಹೊಸ ಪ್ರಚಾರ ಅಭಿಯಾನವು ಉಜ್ಜೀವನ್ ಜೊತೆಗಿನ ಬ್ಯಾಂಕಿಂಗ್ ಸೇವೆಯು ಈಗ ಹೆಚ್ಚೆಚ್ಚು ಸುಲಭವಾಗಿರುವುದನ್ನು ಒತ್ತಿಹೇಳುತ್ತದೆ. ನಮ್ಮ ಡಿಜಿಟಲ್ ಸ್ಥಳೀಯ ಗ್ರಾಹಕರು ಈ ರಾಗ ಹಾಗೂ ಲಯಬದ್ಧ ರೀತಿಯಲ್ಲಿ ಹೆಜ್ಜೆ ಹಾಕುವುದಕ್ಕೆ ಪ್ರೇರಣೆ ನೀಡಿದ್ದಾರೆ. ಈ ಜಾಹೀರಾತನ್ನು ಬ್ಯಾಂಕ್‌ನ ಗ್ರಾಹಕರು ಗುನುಗುನಿಸುವಂತೆ ಮಾಡಲಿದೆ. ಗ್ರಾಹಕರು ಉತ್ತಮ ಬದುಕು ಕಟ್ಟಿಕೊಳ್ಳಲು ಹಾಗೂ ಬ್ಯಾಂಕಿಂಗ್ ಸೇವೆಗಳಿಗೆ ಸುಲಭ ಮಾರ್ಗ ಕಂಡುಕೊಳ್ಳಲಿರುವುದರ ಬಗ್ಗೆ ನಮಗೆ ದೃಢ ವಿಶ್ವಾಸ ಇದೆʼ ಎಂದು ಹೇಳಿದ್ದಾರೆ.
ಪ್ಲ್ಯಾನ್ ಬಿ ಅಡ್ವರಟೈಸಿಂಗ್, ಈ ಪ್ರಚಾರ ಅಭಿಯಾನದ ಪರಿಕಲ್ಪನೆ ರೂಪಿಸಿ ನಿರ್ಮಿಸಿದೆ. ಈ ಪ್ರಚಾರ ಅಭಿಯಾನದ ಕುರಿತು ಮಾತನಾಡಿರುವ ಪ್ಲ್ಯಾನ್ ಬಿ ಅಡ್ವರ್‌ಟೈಸಿಂಗ್ ಬೆಂಗಳೂರು- ಸಿಇಒ ಸುನೀಲ್ ಪೆನುಗೊಂಡ ಅವರು, “ಗ್ರಾಹಕರ ಪಾಲಿಗೆ ಹಲವಾರು ಬ್ಯಾಂಕ್‌ಗಳಿವೆ. ಆದರೆ, ಉಜ್ಜೀವನ್‌ನಂತಹ ಬ್ಯಾಂಕ್ ಅನ್ನು ನೀವು ವಿರಳವಾಗಿ ಕಾಣುವಿರಿ. ಗ್ರಾಹಕರ ಒಳಿತೇ ಮುಖ್ಯ ಧ್ಯೇಯವಾಗಿರುವುದಕ್ಕೆ ಈ ಬ್ಯಾಂಕ್ ಬದ್ಧವಾಗಿದೆ. ಗ್ರಾಹಕರ ಸೇವೆಯು ಸೌಲಭ್ಯಗಳಿಗಿಂತ ಹೆಚ್ಚಾಗಿ ಸಂಸ್ಕೃತಿಯ ಭಾಗವಾಗಿರುವ ಬ್ಯಾಂಕ್ ಅನ್ನು ನಾವು ಇದೇ ಮೊದಲ ಬಾರಿಗೆ ಇಲ್ಲಿ ನೋಡಿದ್ದೇವೆ. ಸುಲಭ ಮತ್ತು ಅನುಕೂಲಕರ ಚಿತ್ರವನ್ನು ಸೆರೆಹಿಡಿಯಲು ಈ ಜಾಹೀರಾತು ಪ್ರಯತ್ನಿಸಿದೆ. ಸುಲಭ ಬ್ಯಾಂಕಿಂಗ್ ಸೇವೆಯ ಈ ಪ್ರತಿಪಾದನೆಯು ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಗೊಳ್ಳಲಿದೆ ಎಂಬುದು ನಮ್ಮ ದೃಢ ನಂಬಿಕೆಯಾಗಿದೆ. ಸರಳ, ನೇರ ಮತ್ತು ಸ್ಮರಣೀಯವಾದ ರಾಗಕ್ಕೆ ನಾವು ಧನ್ಯವಾದ ಹೇಳುತ್ತೇವೆʼ ಎಂದು ಹೇಳಿದ್ದಾರೆ.
ಈ ಪ್ರಚಾರ ಅಭಿಯಾನದ ಕುರಿತು ಮಾತನಾಡಿರುವ ಪ್ಲ್ಯಾನ್ ಬಿ ಕ್ರಿಯೇಟಿವ್ ಡೈರೆಕ್ಟರ್ ಕಾರ್ತಿಕ್ ವೆಂಕಟರಾಮನ್ ಅವರು “ಸಮೃದ್ಧ ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ಅವುಗಳ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸಲು ನಾವು ಅವುಗಳನ್ನು ಸಂತಸದ, ಸುಮಧುರ ರಾಗದ ನೆರವಿನಿಂದ ಪ್ರಸ್ತುತಪಡಿಸಿದ್ದೇವೆ. ನಾವು ಅದನ್ನು ಕೆಲವು ಮೋಜಿನ ದೃಶ್ಯಗಳು ಮತ್ತು ಹೊಸ ಯುಗದ ಲಯಬದ್ಧ ರೀತಿಯಲ್ಲಿ ಕಾಲು ಕುಣಿಸುವ ರೀತಿಯಲ್ಲಿ ಸಂಯೋಜಿಸಿದ್ದೇವೆ. ಸುಲಭ ಮತ್ತು ಅನನ್ಯ ರೀತಿಯಲ್ಲಿ ನೃತ್ಯ ಸಂಯೋಜನೆ ಮಾಡಿದ್ದೇವೆ. ಇವೆಲ್ಲವು ಒಟ್ಟಾಗಿ ನಮ್ಮ ಕೊಡುಗೆಗಳನ್ನು ಸ್ಮರಣೀಯ ಹಾಗೂ ಸಹಜ ರೀತಿಯಲ್ಲಿ ಪ್ರಸ್ತುತಪಡಿಸಿವೆʼ ಎಂದು ಹೇಳಿದ್ದಾರೆ.