ಲಂಡನ್ ,ಜ.16- ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಲಿ ಕೊಡೆ ಹಿಡಿದ ಅನ್ನೊದು ಗಾದೆ ಮಾತು. ಆದರೆ ಇಲ್ಲಿನ ವ್ಯಕ್ತಿಯೊಬ್ಬರಿಗೆ 80 ಕೋಟಿ ರೂ.ಗಳ ಲಾಟರಿ ಹೊಡೆದರು ಮರುದಿನವೇ ಕಾಯಕವೇ ಕೈಲಾಸ ಎಂಬಂತೆ ತಾನು ಮಾಡುವ ಚರಂಡಿ ಶುಚಿಗೊಳಿಸುವ ಕಾರ್ಯಕ್ಕೆ ಮರಳಿ ಗಮನ ಸೆಳೆದಿದ್ದಾರೆ.
ಕಾರ್ಲಿಸ್ಲೆಯ 20 ವರ್ಷದ ಟ್ರೈನಿ ಗ್ಯಾಸ್ ಇಂಜಿನಿಯರ್ ಜೇಮ್ಸೌ ಕ್ಲಾರ್ಕ್‌ಸನ್ ಅವರಿಗೆ 7.5 ಮಿಲಿಯನ್ ಪೌಂಡ್ಸ್ (ರೂ. 79.58 ಕೋಟಿ) ಲೊಟ್ಟೊ ಜಾಕ್‌ಪಾಟ್ ಗೆದಿದ್ದಾರೆ. ಕ್ರಿಸ್‌ಮಸ್ ಸಂದರ್ಭದಲ್ಲಿ ರಾಷ್ಟ್ರೀಯ ಲಾಟರಿಯಲ್ಲಿ 120 ಪೌಂಡ್ ಹೂಡಿಕೆ ಮಾಡಿ 12,676 ಪೌಂಡ್ ಗೆದ್ದಿದ್ದ ಆತ ಅದೇ ಹಣವನ್ನು ಲೊಟ್ಟೋ ಜಾಕ್‌ಪಾಟ್‌ನಲ್ಲಿ ಹೂಡಿಕೆ ಮಾಡಿ ಇದೀಗ 80 ಕೋಟಿ ರೂ. ಗೆದ್ದಿದ್ದಾರೆ ಎಂದು ದಿ ಮೆಟ್ರೋ ತಿಳಿಸಿದೆ.
ಇಷ್ಟೆಲ್ಲಾ ಸಂಪತ್ತು ಬಂದರೂ ಆತ ಎಂದಿನಂತೆ ಕೆಲಸಕ್ಕೆ ತೆರಳಿ ಚರಂಡಿ ಮುಚ್ಚುವ ಕಾರ್ಯದಲ್ಲಿ ನಿರತರಾಗಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ. ಆತನ ಈ ಅನಿರೀಕ್ಷಿತ ಯಶಸ್ಸು ಅವನ ಆರ್ಥಿಕ ಭವಿಷ್ಯವನ್ನು ಬದಲಿಸಿದ್ದು ಮಾತ್ರವಲ್ಲದೆ ಅವನ ತಳಹದಿಯ ಮನೋಭಾವವನ್ನು ಎತ್ತಿ ತೋರಿಸುತ್ತದೆ, ಏಕೆಂದರೆ ಅವನು ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದರೂ ಕೆಲಸ ಮಾಡುವುದನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿರುವುದನ್ನು ಸಾಕಷ್ಟು ಮಂದಿ ಸ್ವಾಗತಿಸಿದ್ದಾರೆ.
ನಾನು ನನ್ನ ಗೆಳತಿಯ ಮನೆಯಲ್ದೆ ಮತ್ತು ರಾಷ್ಟ್ರೀಯ ಲಾಟರಿ ಅಪ್ಲಿಕೇಶನ್‌ನಲ್ಲಿ ನಾನು ಗೆದ್ದಿದ್ದೇನೆ ಎಂಬ ಸಂದೇಶವನ್ನು ನೋಡಿದಾಗ ಗಾಬರಿಗೊಂಡೆ ನಾನು ಅದನ್ನು ನಂಬಲಿಲ್ಲ; ನಾನು ಕನಸು ಕಾಣುತ್ತಿದ್ದೇನೆ ಎಂದು ನಾನು ಭಾವಿಸಿದೆ. ಅದು ಕೇವಲ 7:30 ರ ಸಮಯ ಆದ್ದರಿಂದ ಎಲ್ಲರೂ ಮಲಗಿದ್ದರು, ನನಗೆ ಖಚಿತವಾಗಿಲ್ಲ, ಆದ್ದರಿಂದ ನಾನು ನನ್ನ ತಂದೆಗೆ ಕರೆ ಮಾಡಿದೆ, ಅವರು ಎಚ್ಚರವಾಗಿರುತ್ತಾರೆ ಎಂದು ನನಗೆ ತಿಳಿದಿತ್ತು. ಅವರು ಶಾಂತವಾಗಿ. ಮನೆಗೆ ಬರಲು ಹೇಳಿದರು ಹೋಗಿ ನೋಡಿದಾಗ ಲಾಟರಿ ಹೊಡೆದಿರುವುದು ಖಚಿತವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.