ಬೆಂಗಳೂರು,ಮೇ 5- ತನ್ನ ತಂದೆಯ ಕೊಲೆಗೆ ಪ್ರತೀಕಾರವಾಗಿ ಮಾವನನ್ನೇ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಟಿನ್ ಫ್ಯಾಕ್ಟರಿ ಸಮೀಪದ ನಿವಾಸಿ ಸಿರಾಜುದ್ದೀನ್ (32) ಕೊಲೆಯಾದವರು. ಕೊಲೆ ಆರೋಪಿಯು ಸಿರಾಜುದ್ದೀನ್‌ನ ಅಕ್ಕನ ಮಗ.
ಈ ಹಿಂದೆ ಸಿರಾಜುದ್ದೀನ್ ಅವರು ಗೋವಿಂದಪುರದಲ್ಲಿ ವಾಸವಾಗಿದ್ದರು. ಮೂರ್ನಾಲ್ಕು ವರ್ಷಗಳಿಂದ ಟಿನ್ ್ಯಾಕ್ಟರಿ ಬಳಿ ಬಂದು ವಾಸವಾಗಿದ್ದರು. ಆರೋಪಿಯ ತಂದೆಯನ್ನು ಸಿರಾಜುದ್ದೀನ್ ಕೊಲೆ ಮಾಡಿದ್ದನು.ಅಂದಿನಿಂದ ಪ್ರತೀಕಾರಕ್ಕಾಗಿ ಆರೋಪಿ ಹೊಂಚು ಹಾಕುತ್ತಿದ್ದನು.
ನಿನ್ನೆ ರಾತ್ರಿ 7.30 ರ ಸುಮಾರಿನಲ್ಲಿ ಸಿರಾಜುದ್ದೀನ್ ಟಿನ್ ಫ್ಯಾಕ್ಟರಿ ಬಳಿ ನಡೆದು ಹೋಗುತ್ತಿದ್ದಾಗ ಆರೋಪಿಯು ಏಕಾಏಕಿ ಅಡ್ಡಗಟ್ಟಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಸಿರಾಜುದ್ದೀನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.ರಾಮಮೂರ್ತಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.