Wednesday, December 18, 2024
Homeರಾಜ್ಯಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಅನಾರೋಗ್ಯದಿಂದ ಸಾವು..!

ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಅನಾರೋಗ್ಯದಿಂದ ಸಾವು..!

Underworld gangster Bannanje Raja's close aide dies of illness..!

ಬೆಳಗಾವಿ,ಡಿ.8- ಭೂಗತ ಪಾತಕಿ ಬನ್ನಂಜೆರಾಜನ ಆಪ್ತನೆಂದು ಗುರುತಿಸಿಕೊಳ್ಳಲಾದ ಕೆ.ಎಂ.ಇಸಾಯಿಲ್ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಅಂಕೋಲದ ಉದ್ಯಮಿ ಆರ್.ಎನ್.ನಾಯಕ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೆ.ಎಂ.ಇಸಾಯಿಲ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಬಂಧಿಖೈದಿಯಾಗಿದ್ದ.

ಹೃದ್ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಆತ ಜೈಲಿನಲ್ಲೇ ಅಸ್ವಸ್ಥಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಆರ್.ಎನ್.ನಾಯಕ್ ಅವರನ್ನು 2013 ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ರಾಜೇಂದ್ರಕುಮಾರ್ ಅಲಿಯಾಸ್ ಬನ್ನಂಜೆರಾಜ ಮತ್ತು ಆತನ ಇತರ 8 ಸಹಚರರಿಗೆ ಬೆಳಗಾವಿಯ ಜಿಲ್ಲಾ ನ್ಯಾಯಾಲಯ 2022 ರ ಏಪ್ರಿಲ್ 5 ರಂದು ಜೀವಾವಧಿ ಶಿಕ್ಷೆ ಘೋಷಿಸಿತ್ತು.

ಸುಲಿಗೆ, ಕೊಲೆ, ಬೆದರಿಕೆ ಸೇರಿದಂತೆ ಹಲವು ಅಪರಾಧಗಳಲ್ಲಿ ಬನ್ನಂಜೆರಾಜ ಆರೋಪಿಯಾಗಿದ್ದು, ಕೆ.ಎಂ.ಇಸಾಯಿಲ್ ಆತನ ಸಹಚರನಾಗಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ.ಆರ್.ಎನ್.ನಾಯಕ್ ಅವರ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತಲ್ಲದೆ, ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

RELATED ARTICLES

Latest News