Sunday, September 8, 2024
Homeರಾಷ್ಟ್ರೀಯ | NationalUnion Budget 2024 Live Updates : ಕೇಂದ್ರ ಬಜೆಟ್ ಹೈಲೆಟ್ಸ್

Union Budget 2024 Live Updates : ಕೇಂದ್ರ ಬಜೆಟ್ ಹೈಲೆಟ್ಸ್

ನವದೆಹಲಿ,ಜು.23- ವಿಕಸಿತ ಭಾರತದ ಸಹಕಾರಕ್ಕಾಗಿ ಸುಸ್ಥಿರ ಪ್ರಯತ್ನದ 9 ಆದ್ಯತಾ ವಲಯಗಳಲ್ಲಿ ಗುರುತಿಸುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದರು. ಮುಂಗಾರು ಅಧಿವೇಶನದ ಆರಂಭದ ಮೊದಲ ದಿನವಾದ ಇಂದು ಸತತವಾದ ತಮ್ಮ 7ನೇ ಬಜೆಟ್ ಅನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ಬಹಳಷ್ಟು ಅವಕಾಶಗಳ ಸೃಷ್ಟಿಗಾಗಿ 9 ಆದ್ಯತಾ ವಲಯಗಳನ್ನು ಗುರುತಿಸಿದ್ದಾರೆ.

  • ಪಿಎಂ ಗರೀಬ್ ಕಲ್ಯಾಣ್ ಯೋಜನೆ 5 ವರ್ಷಗಳವರೆಗೆ ವಿಸ್ತರಣೆ, 80 ಕೋಟಿ ಜನರಿಗೆ ಪ್ರಯೋಜನ:
  • ಉದ್ಯೋಗ, ಕೌಶಲ್ಯ ಮತ್ತು ಮಧ್ಯಮ ವರ್ಗದ ಮೇಲೆ ಕೇಂದ್ರೀಕೃತ ಬಜೆಟ್
  • ಶಿಕ್ಷಣ ಮತ್ತು ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂಪಾಯಿ
  • ಉತ್ಪಾದಕತೆ, ಉದ್ಯೋಗಗಳು, ಸಾಮಾಜಿಕ ನ್ಯಾಯ, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ ಮತ್ತು ಸುಧಾರಣೆಗಳಿಗೆ ಆಧ್ಯತೆ
  • ಒಂದು ಕೋಟಿ ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗುತ್ತಾರೆ
  • ಉತ್ಪಾದನೆಯನ್ನು ಹೆಚ್ಚಿಸಲು ದೊಡ್ಡ ಪ್ರಮಾಣದ ತರಕಾರಿ ಉತ್ಪಾದನಾ ಕ್ಲಸ್ಟರ್‍ಗಳ ಸ್ಥಾಪನೆ
  • ರಾಜ್ಯಗಳ ಸಹಭಾಗಿತ್ವದಲ್ಲಿ ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಉತ್ತೇಜನ
  • ಒಟ್ಟಾರೆ ಅಭಿವೃದ್ಧಿಗಾಗಿ ಸರ್ಕಾರ ರಾಷ್ಟ್ರೀಯ ಸಹಕಾರ ನೀತಿ ಜಾರಿ
  • ಬೇಳೆಕಾಳುಗಳ ಉತ್ಪಾದನೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಬಲಪಡಿಸಲು ನಿರ್ಧಾರ
  • ಗ್ರಾಮೀಣ ಆರ್ಥಿಕತೆಯ ವೇಗದ ಬೆಳವಣಿಗೆ ಮತ್ತು ಉದ್ಯೋಗಾವಕಾಶ ನೀತಿ
  • ಸೀಗಡಿ ಸಾಕಾಣಿಕೆ ಮತ್ತು ಮಾರುಕಟ್ಟೆಗೆ ಸರ್ಕಾರ ಹಣಕಾಸು
  • ಐದು ರಾಜ್ಯಗಳಲ್ಲಿ ಜನ್ ಸಮರ್ಥ್ ಆಧಾರಿತ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯ
  • ಉದ್ಯೋಗ ಸಂಬಂಧಿತ ಮೂರು ಯೋಜನೆಗಳನ್ನು ಪ್ರಾರಂಭ
  • ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ 1 ತಿಂಗಳ PM ಕೊಡುಗೆ
  • ಹವಾಮಾನ-ಸ್ಥಿತಿಸ್ಥಾಪಕ ಬೀಜಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ವಲಯ, ಡೊಮೇನ್ ತಜ್ಞರು ಮತ್ತು ಇತರರಿಗೆ ಹಣ ಒದಗಿಸಲು ತೀರ್ಮಾನ
  • ಕೆಲಸ ಮಾಡುವ ಮಹಿಳಾ ಹಾಸ್ಟೆಲ್‍ಗಳ ಸ್ಥಾಪನೆ
  • 32 ಕ್ಷೇತ್ರ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೊಸ 109 ಅಧಿಕ ಇಳುವರಿ, ಹವಾಮಾನ ಸ್ಥಿತಿಸ್ಥಾಪಕ ಬೀಜಗಳ ಬಿಡುಗಡೆ
  • ಕೌಶಲ್ಯ ಕೇಂದ್ರಗಳ ಮೂಲಕ ಐದು ವರ್ಷಗಳಲ್ಲಿ 20 ಲಕ್ಷ ಯುವಕರಿಗೆ ತರಬೇತಿ
  • 7.5 ಲಕ್ಷದವರೆಗಿನ ಸಾಲವನ್ನು ಸುಗಮಗೊಳಿಸಲು ಮಾದರಿ ಕೌಶಲ್ಯ ಸಾಲ ಯೋಜನೆ
  • ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 1,000 ಐಟಿಐಗಳನ್ನು ಮೇಲ್ದರ್ಜೆಗೆ
  • ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲಕ್ಕೆ ಸರ್ಕಾರ ಆರ್ಥಿಕ ನೆರವು
  • 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್ ಮೂಲಕ ಸಾಲದ ಮೊತ್ತದ ಶೇ.3 ರ ಬಡ್ಡಿ ರಿಯಾಯಿತಿ
  • ಬಿಹಾರ, ಜಾರ್ಖಂಡï, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಪೂರ್ವೋದಯ ಯೋಜನೆ
  • ಪೂರ್ವ ಪ್ರದೇಶದ ಅಭಿವೃದ್ಧಿಗಾಗಿ ನಾವು ಕೈಗಾರಿಕಾ ಕಾರಿಡಾರ್ ಸ್ಥಾಪನೆ
  • ಬಿಹಾರದ ವಿವಿಧ ರಸ್ತೆ ಯೋಜನೆಗಳಿಗೆ 26,000 ಕೋಟಿ ರೂ.ಗಳ ನೆರವು
  • ಆಂಧ್ರಪ್ರದೇಶದ 3 ಜಿ¯್ಲÉಗಳಿಗೆ ಹಿಂದುಳಿದ ಪ್ರದೇಶದ ಅನುದಾನ
  • ಮಹಿಳೆಯರು, ಬಾಲಕಿಯರಿಗೆ ಯೋಜನೆಗಳಿಗೆ 3 ಲಕ್ಷ ಕೋಟಿ ರೂ.ಮೀಸಲು
  • ಆಂಧ್ರಪ್ರದೇಶದ ರಾಜಧಾನಿಯ ಅಭಿವೃದ್ಧಿಗೆ 15 ಸಾವಿರ ಕೋಟಿ ವಿಶೇಷ ಹಣಕಾಸಿನ ನೆರವು
  • ಈಶಾನ್ಯದಲ್ಲಿ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್‍ನ 100 ಶಾಖೆಗಳ ಸ್ಥಾಪನೆ
  • ಬಜೆಟ್‍ನಲ್ಲಿ ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ಅನುದಾನ
  • ಬಿಹಾರದಲ್ಲಿ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಗಳ ಸ್ಥಾಪನೆ
  • ಮುದ್ರಾ ಸಾಲ ಯೋಜನೆಯಡಿ ಸಾಲದ ಮಿತಿಯನ್ನು 20 ಲಕ್ಷಕ್ಕೆ ದ್ವಿಗುಣ
  • ಎಸ್‍ಐಡಿಬಿಐ 24 ಹೊಸ ಶಾಖೆಗಳನ್ನು ತೆರೆಯಲು ಎಂಎಸ್‍ಎಂಇಗಳ ಕ್ಲಸ್ಟರ್‍ಗಳ ಪೂರೈಕೆ
  • ಟಿ ರೇಡ್ಸ್ ಪ್ಲಾಟ್ ಫಾರ್ಮ್ ವಹಿವಾಟಿನ ಮಿತಿ 500 ಕೋಟಿಯಿಂದ ರೂ 250 ಕೋಟಿಗೆ ಇಳಿಕೆ
  • 5 ವರ್ಷಗಳಲ್ಲಿ 500 ಉನ್ನತ ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‍ಶಿಪ್ ಅವಕಾಶ
  • ಬಿಹಾರದಲ್ಲಿ ಹೆದ್ದಾರಿಗಳಿಗೆ 20,000 ಕೋಟಿ ರೂಪಾಯಿ ಮೀಸಲು
  • 100 ನಗರಗಳಲ್ಲಿ ಹೂಡಿಕೆಗೆ ಸಿದ್ಧವಾಗಿರುವ ಕೈಗಾರಿಕಾ ಪಾರ್ಕ್‍ಗಳ ನಿರ್ಮಾಣ
  • ಮೊದಲ ಕಡಲಾಚೆಯ ಗಣಿಗಾರಿಕೆ ಬ್ಲಾಕ್‍ಗಳ ಹರಾಜು ಪ್ರಾರಂಭ
  • ವಿದೇಶದಲ್ಲಿ ಆಸ್ತಿ ಸ್ವಾಧಿನಕ್ಕೆ ಕ್ರಿಟಿಕಲ್ ಮಿನರಲ್ ಮಿಷನ್ ಸ್ಥಾಪನೆ
  • ಹೆಚ್ಚುವರಿ ಸಾಲ ವಸೂಲಾತಿ ನ್ಯಾಯಮಂಡಳಿ ಸ್ಥಾಪನೆ
  • ಐಬಿಸಿಗೆ ಸೂಕ್ತ ಬದಲಾವಣೆ
  • 30 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ನಗರಗಳಿಗೆ ಸಾರಿಗೆ-ಆಧಾರಿತ ಅಭಿವೃದ್ಧಿ ಯೋಜನೆ
  • ನಗರ ವಸತಿಗಾಗಿ ಕೈಗೆಟುಕುವ ದರದಲ್ಲಿ ಬಡ್ಡಿ ಸಬ್ಸಿಡಿ ಯೋಜನೆ
  • 5 ವರ್ಷಗಳಲ್ಲಿ 100 ಸಾಪ್ತಾಹಿಕ ಹಾಟ್‍ಗಳ ಅಭಿವೃದ್ಧಿಗೆ ಬೆಂಬಲ
  • ಮುಂದಿನ ಐದು ವರ್ಷಗಳಲ್ಲಿ ನಗರ ವಸತಿಗಾಗಿ 2.2 ಲಕ್ಷ ಕೋಟಿ ರೂಪಾಯಿಗಳ ಸಹಾಯ
  • 24 ಗಂಟೆಯ ಶಕ್ತಿಯನ್ನು ಒದಗಿಸಲು ಪಂಪ್ ಸ್ಟೋರೇಜ್ ಯೋಜನೆ ಬೆಂಬಲಿಸುವ ನೀತಿ
  • ಬಿಹಾರದ ಪಿರ್ಪೈಂಟಿಯಲ್ಲಿ ಹೊಸ 2400 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ಸ್ಥಾಪನೆಗೆ 21,400 ಕೋಟಿ ರೂ.
  • ಜನಸಂಖ್ಯೆಯ ಹೆಚ್ಚಳದಿಂದಾಗಿ ಅರ್ಹತೆ ಪಡೆದಿರುವ 25 ಗ್ರಾಮೀಣ ವಸತಿಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಲ್ಕನೆ ಹಂತ ಆರಂಭ
  • ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯಗಳನ್ನು ಬೆಂಬಲಿಸಲು ಹಣಕಾಸು ಸಚಿವರು ರೂ 1.5 ಲಕ್ಷ ಕೋಟಿ ದೀರ್ಘಾವಧಿ ಬಡ್ಡಿ ರಹಿತ ಸಾಲ ಪ್ರಸ್ತಾಪ
  • ಪ್ರವಾಹ ನಿರ್ವಹಣೆ ಮತ್ತು ಸಂಬಂಧಿತ ಯೋಜನೆಗಳಿಗೆ ಅಸ್ಸಾಂಗೆ ನೆರವು
  • ಆಯ್ದ ನಗರಗಳಲ್ಲಿ ಸ್ಟ್ರೀಟ್ – ಹಬ್ ಸ್ಥಾಪನೆ
  • ಪ್ರವಾಹ ತಗ್ಗಿಸಲು ಬಿಹಾರಕ್ಕೆ 11,500 ಕೋಟಿ ರೂ.ನೆರವು
  • ಪ್ರವಾಸೋದ್ಯಮ ಅಭಿವೃದ್ಧಿಗೆ ಒಡಿಶಾಗೆ ನೆರವು
  • ಅನುಸಂಧಾನ ರಾಷ್ಟ್ರೀಯ ಸಂಶೋಧನಾ ನಿಧಿ ಕಾರ್ಯಗತ
  • ಬಿಹಾರದ ನಳಂದಾವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ
  • ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಆರ್ಥಿಕ ನೀತಿ ಚೌಕಟ್ಟು ಜಾರಿ
  • ವಿಷ್ಣುಪಾದ್ ಮತ್ತು ಮಹಾಬೋಧಿ ದೇವಾಲಯದಲ್ಲಿ ಕಾರಿಡಾರ್‍ಗಳ ಅಭಿವೃದ್ಧಿ
  • 11,500 ಕೋಟಿ ರೂ.ಗಳಲ್ಲಿ ವೇಗವರ್ಧಿತ ನೀರಾವರಿ ಕಾರ್ಯಕ್ರಮಕ್ಕೆ ಬೆಂಬಲ
  • ಹಿಮಾಚಲ, ಉತ್ತರಾಖಂಡ, ಸಿಕ್ಕಿಂಗೆ ಸರ್ಕಾರಗಳಿಗೆ ಪ್ರವಾಹ ನೆರವು
  • ಭೂಸುಧಾರಣೆಗಳ ಕುರಿತು ರಾಜ್ಯಗಳೊಂದಿಗೆ ಸಮಾಲೋಚನೆ
  • ಭೂ ಆಡಳಿತ ಮತ್ತು ಯೋಜನೆ ಮತ್ತು ಕಟ್ಟಡ ಬೈಲಾಗಳ ರಚನೆ
  • ನಗರ ಪ್ರದೇಶಗಳಲ್ಲಿನ ಭೂ ದಾಖಲೆಯನ್ನು ಡಿಜಿಟಲೀಕರಣ
  • ನಗರ ಸಂಸ್ಥೆಗಳ ಹಣಕಾಸು ಸುಧಾರಿಸಲು ಸಹಾಯ
  • ಆಂಧ್ರಪ್ರದೇಶದ ಮೂಲಸೌಕರ್ಯಗಳಿಗೆ ಹಣದ ನೆರವು
  • ಶ್ರಮ ಸುವಿಧಾ ಪೆಪೋರ್ಟಲ್ ಅನ್ನು ನವೀಕರಣ
  • ಹವಾಮಾನ ಹಣಕಾಸುಗಾಗಿ ಟ್ಯಾಕ್ಸಾನಮಿ ಅಭಿವೃದ್ಧಿ
  • ಸಾಗರೋತ್ತರ ಹೂಡಿಕೆಯ ನಿಯಮಗಳ ಸರಳೀಕರಣ
  • ಆರ್ಥಿಕ ಅಗತ್ಯಗಳನ್ನು ಪೂರೈಸಲು ಐದು ವರ್ಷಗಳ ವಿಷನ್ ಡಾಕ್ಯುಮೆಂಟ್
  • ಪೋಷಕರಿಗೆ ಪಿಂಚಣಿ ಕೊಡುಗೆ ನೀಡಲು ಎನ್‍ಪಿಎಸ್ ವಾತ್ಸಲ್ಯ ಯೋಜನೆ ಆರಂಭ
RELATED ARTICLES

Latest News