Sunday, September 8, 2024
Homeರಾಷ್ಟ್ರೀಯ | Nationalನಾಳೆ ಕೇಂದ್ರ ಬಜೆಟ್ : ಈ ಬಾರಿ ಕರ್ನಾಟಕಕ್ಕೆ ಹಲವು ನಿರೀಕ್ಷೆ

ನಾಳೆ ಕೇಂದ್ರ ಬಜೆಟ್ : ಈ ಬಾರಿ ಕರ್ನಾಟಕಕ್ಕೆ ಹಲವು ನಿರೀಕ್ಷೆ

ನವದೆಹಲಿ,ಜು.22- ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಮೊದಲ ಬಜೆಟ್‍ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಮಂಡನೆ ಮಾಡಲಿದ್ದು, ಜನರಲ್ಲಿ ನಿರೀಕ್ಷೆಗಳು ಹೆಚ್ಚಿವೆ.

ಕೇಂದ್ರ ಸರಕಾರವು 2024- 25ನೇ ಸಾಲಿನ ಬಜೆಟ್ ಮಂಡನೆ ಮಾಡಲಿದೆ. ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಉದ್ಯೋಗಿಗಳು, ಮಕ್ಕಳ ಶಿಕ್ಷಣ, ಗೃಹ ಸಾಲ, ಆರೋಗ್ಯ ವಿಮೆ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗುವ ನಿರೀಕ್ಷೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಆದಾಯ ತೆರಿಗೆ ಸ್ಪ್ಯಾಬ್ಗಳು ಏರಿಕೆಯಾಗಬಹುದು ಎನ್ನುವ ನಿರೀಕ್ಷೆ ಬಲವಾಗಿದೆ.

ಕಳೆದ ಬಜೆಟ್‍ನಲ್ಲಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿತ್ತು ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಿತ್ತು. ಈ ಮೂಲಕ ಸಂಬಳ ಪಡೆಯುವ ವರ್ಗಕ್ಕೆ ಕೆಲವು ಬದಲಾವಣೆಗಳನ್ನು ತಂದಿತ್ತು. ಆದರೆ, ಇದರಿಂದ ಸಂಬಳ ಪಡೆಯುವ ಆದಾಯ ತೆರಿಗೆ ಪಾವತಿದಾರರಿಗೆ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಈ ಬಜೆಟ್‍ಲ್ಲಿ ಆದಾಯ ತೆರಿಗೆದಾರರು ಹೊಂದಿರುವ ಪ್ರಮುಖ ನಿರೀಕ್ಷೆಗಳು ಹೀಗಿವೆ.

ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ:
ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಆದಾಯ ತೆರಿಗೆಯ ವಾರ್ಷಿಕ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬುದು ಉದ್ಯೋಗಿಗಳೂ ಸೇರಿದಂತೆ ಸಾಮಾನ್ಯ ಜನರ ಪ್ರಮುಖ ಬೇಡಿಕೆಯಾಗಿದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೈಯಕ್ತಿಕ ತೆರಿಗೆದಾರರಿಗೆ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಚಾಲ್ತಿಯಲ್ಲಿರುವ 2.5 ಲಕ್ಷ ರೂ. ಆದಾಯ ತೆರಿಗೆ ವಾರ್ಷಿಕ ವಿನಾಯಿತಿ ಮಿತಿಯಲ್ಲಿ 2014-15 ರಿಂದಲೂ ಯಾವುದೇ ಬದಲಾವಣೆ ಮಾಡಿಲ್ಲ. ಬಜೆಟ್‍ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಮರುಪರಿಶೀಲಿಸಬಹುದು.

ಸ್ಟ್ಯಾಂಡರ್ಡ್ ಡಿಡಕ್ಷನ್ ಯೋಜನೆ:
ಈ ಯೋಜನೆಯನ್ನು ಪರಿಚಯಿಸುವ ಮೂಲಕ 2018-19ನೇ ಹಣಕಾಸು ವರ್ಷದಿಂದ ತೆರಿಗೆ-ಮುಕ್ತ ವೈದ್ಯಕೀಯ ಮರುಪಾವತಿ ಮತ್ತು ಪ್ರಯಾಣ ಭತ್ಯೆ ವಿನಾಯಿತಿಯನ್ನು ಹಿಂಪಡೆಯಲಾಗಿದೆ. ಅಂದಿನಿಂದ ಕಡಿತದ ಮೊತ್ತವು ಸ್ಥಿರವಾಗಿದೆ. ಆದರೆ, ವೈದ್ಯಕೀಯ ವೆಚ್ಚ ಮತ್ತು ಇಂಧನದ ವೆಚ್ಚವು ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ 50,000 ರೂ.ನಿಂದ 1 ಲಕ್ಷ ರೂ.ಗೆ ಹೆಚ್ಚಿಸಲು ಸರಕಾರವು ಮುಂದಾಗಬೇಕು ಎನ್ನುವ ಒತ್ತಾಯಗಳಿವೆ.

ಹೊಸ ಪರ್ಯಾಯ ತೆರಿಗೆ ಪದ್ಧತಿಯಡಿ ತೆರಿಗೆಯನ್ನು ಆಯ್ಕೆ ಮಾಡುವ ಮಂದಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಯೋಜನ ಒದಗಿಸಲು ಸರಕಾರ ಮುಂದಾಗಬಹುದು. ವಿಮೆ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ವಿನಾಯಿತಿಪ್ರಸ್ತುತ ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳನ್ನು ಒಳಗೊಂಡ ಆರೋಗ್ಯ ವಿಮಾ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಮಿತಿಯು 25,000 ರೂಪಾಯಿಯಷ್ಟಿದೆ. ಇದಲ್ಲದೇ, ಪೆÇೀಷಕರಿಗೆ 50,000 ರೂ.ಗಳ ಮಿತಿ ಇದೆ. ಅವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿರಬೇಕು. ಆಸ್ಪತ್ರೆಯ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿರುವುದನ್ನು ಪರಿಗಣಿಸಿ, ಈ ಮಿತಿಗಳನ್ನು ಕ್ರಮವಾಗಿ 50,000 ರೂ. ಮತ್ತು 1 ಲಕ್ಷ ರೂಪಾಯಿಗೆ ಹೆಚ್ಚಿಸಬಹುದು.

ಶಿಕ್ಷಣ ವೆಚ್ಚದ ತೆರಿಗೆ ವಿನಾಯಿತಿ ಮಿತಿ ಹೆಚ್ಚಳಮಕ್ಕಳ ಶಿಕ್ಷಣ ಭತ್ಯೆ ಅಡಿಯಲ್ಲಿ ಪ್ರಸ್ತುತ ಗರಿಷ್ಠ ಎರಡು ಮಕ್ಕಳ ಶಿಕ್ಷಣ ಮತ್ತು ಹಾಸ್ಟೆಲ್ ವೆಚ್ಚಗಳಿಗೆ ಪ್ರತಿ ಮಗುವಿಗೆ ತಿಂಗಳಿಗೆ 400 ರೂ. (ಶಿಕ್ಷಣ ವೆಚ್ಚ 100 ರೂ. ಮತ್ತು ಹಾಸ್ಟೆಲ್ ವೆಚ್ಚ 300 ರೂ.) ವರೆಗೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಿದೆ.

ಈ ವಿನಾಯಿತಿ ಮಿತಿಗಳನ್ನು ಸುಮಾರು ಎರಡು ದಶಕಗಳ ಹಿಂದೆ ನಿಗದಿಪಡಿಸಲಾಗಿತ್ತು. ಈ ವಿನಾಯಿತಿ ಮಿತಿಗಳನ್ನು ಪ್ರತಿ ಮಗುವಿಗೆ ಅನುಕ್ರಮವಾಗಿ ಕನಿಷ್ಠ 1,000 ಮತ್ತು 3,000 ರೂ.ಗಳಿಗೆ ಹೆಚ್ಚಿಸಬಹುದು. ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಏರಿಕೆಹೋಮ್ ಲೋನ್ ಮೇಲಿನ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಪ್ರಸ್ತುತ 2 ಲಕ್ಷ ರೂ. ಇದೆ. ಆದರೆ ಕಳೆದ ಒಂದು ವರ್ಷದಲ್ಲಿ ಬಡ್ಡಿದರಗಳು ವಿಪರೀತ ಏರಿಕೆ ಆಗಿವೆ. ವಸತಿ ಬೆಲೆಯೂ ಏರಿಕೆಯಾಗಿದೆ.

ಹೀಗಾಗಿ ಬಡ್ಡಿ ವೆಚ್ಚದ ಮೇಲಿನ ತೆರಿಗೆ ಕಡಿತದ ಮಿತಿಯನ್ನು ಪ್ರಸ್ತುತ ಇರುವ 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಬಹುದು.ರಾಜ್ಯದ ನಿರೀಕ್ಷೆಗಳು ಈ ಬಾರಿ ಬಜೆಟ್ ನಲ್ಲಿ ಕರ್ನಾಟಕ ಹಲವು ನಿರೀಕ್ಷೆಗಳನ್ನ ಹೊಂದಿದೆ. ಬೆಂಗಳೂರಿನ ಸಬ್ ಅರ್ಬನ್ ರೈಲಿಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ. ರಾಯಚೂರಿಗೆ ಏಮ್ಸ್ ಆಸ್ಪತ್ರೆ ಮಂಜೂರು, ಇನ್ನು 15ನೇ ಹಣಕಾಸು ಆಯೋಗದ ಶಿಫರಸ್ಸಿನಂತೆ ರಾಜ್ಯಕ್ಕೆ 5495 ಕೋಟಿ ವಿಶೇಷ ಅನುದಾನದ ನಿರೀಕ್ಷೆಗಳಿವೆ. ಭದ್ರ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡುವ ನಿರೀಕ್ಷೆಗಳಿವೆ.

ಮೇಕೆದಾಟು, ಎತ್ತಿನಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ.ಇನ್ನು ಹೊಸ ಹೆದ್ದಾರಿ ಯೋಜನೆಗಳ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಇದೆ. ಇನ್ನ ಶಿರಡಿಘಾಟ್ನಲ್ಲಿ ಸುರಂಗ ಮಾರ್ಗದ ಬಗ್ಗೆಯೂ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

RELATED ARTICLES

Latest News