ಬೆಂಗಳೂರು,ಅ.19- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ( ಮುಡಾ)ದಲ್ಲಿ ಆಕ್ರಮ ನಿವೇಶನ ಹಂಚಿಕೆ ಸಂಬಂಧ ಸಚಿವ ಭೈರತಿ ಸುರೇಶ್ ಅವರು ಮೂಲ ದಾಖಲೆಗಳನ್ನು ಕಾರಿನಲ್ಲಿ ಕದ್ದು ತಂದು ಅವುಗಳನ್ನು ಸುಟ್ಟು ಹಾಕಿರುವುದರಿಂದ ಇ.ಡಿ ಅಧಿಕಾರಿಗಳು ಮೊದಲು ಅವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಪ್ರಕರಣದ ಚಕ್ರವ್ಯೂಹ ಬಯಲಾಗುತ್ತೆದೆ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಒತ್ತಾಯಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಮಗೆ ಸಿಕ್ಕಿರುವ ಅಧಿಕಾರಿಗಳ ಮಾಹಿತಿ ಇದನ್ನು ನಿಜ ಎಂದು ಹೇಳಿದೆ. ಮುಡಾ ದಾಖಲೆಗಳನ್ನು ಸಚಿವ ಭೈರತಿ ಸುರೇಶ್ ಸರ್ಕಾರಿ ಕಾರಿನಲ್ಲಿ ತಂದಿರುವುದು ದಿಟ. ಅವರು ಹೆಲಿಕಾಪ್ಟರ್ನಲ್ಲಿ ಹೋಗಿ ತೆಗೆದುಕೊಂಡು ಬಳಿಕ ಕಾರಲ್ಲಿ ತೆಗೆದುಕೊಂಡು ಹೋಗಿ ನಂತರ ಸುಟ್ಟು ಹಾಕಿದ್ದಾರೆ. ಹೀಗಾಗಿ ಸಚಿವ ಸುರೇಶ್ರನ್ನು ಮೊದಲು ತನಿಖೆಗೆ ಒಳಪಡಿಸಬೇಕು. ಬಳಿಕ ಆರೋಪ ಮುಕ್ತರಾಗಲಿ ಎಂದು ಆಗ್ರಹಿಸಿದರು.
ಮುಡಾದಲ್ಲಿ ಹಗರಣ ನಡೆದಿದೆ ಎಂಬುದನ್ನು ಎಲ್ಲಾ ಸರ್ಕಾರಿ ತನಿಖಾ ಸಂಸ್ಥೆಗಳೂ ಸಾಬೀತು ಪಡಿಸಿವೆ. ಮುಡಾ ಕಾರ್ಯದರ್ಶಿ ಮೇಲೆ ಒತ್ತಡ ಹೇರಿ, 2000ನೇ ಇಸವಿಯಲ್ಲಾದ ಕಾನೂನನ್ನು 2023ರಲ್ಲಿ ಬದಲಾಯಿಸಿ ಫಲಾನುಭವಿ ಆಗಿದ್ದಾರೆ. ಅವರಿಗೆ ಜಮೀನು ನೀಡಿದ ದೇವರಾಜು ನಿಜವಾದ ಓನರ್ ಅಲ್ಲ. ದಲಿತರ ಜಮೀನನ್ನು ನೀವು ಲಪಟಾಯಿಸಿದ್ದೀರಾ ಎಂದು ಆರೋಪ ಮಾಡಿದರು.
ಮುಡಾದಲ್ಲಿ ನಿವೇಶನ ಪಡೆದಾಗ ನಿನ ಪುತ್ರ ಯತೀಂದ್ರ ಶಾಸಕ ಹಾಗೂ ಮುಡಾ ಸದಸ್ಯರಾಗಿದ್ದರು. ಪ್ರಭಾವ ಬೀರಿ ನೀವು ಹಾಗೂ ನಿಮ ಮಗ ಇಬ್ಬರೂ ಒತ್ತಡ ಹಾಕಿ ಸೈಟು ಪಡೆದಿದ್ದೀರಿ. ಈಗ ಅಕ್ರಮದ ಆರೋಪ ಆದ ಮೇಲೆ ಸೈಟು ವಾಪಾಸ್ ನೀಡಿದ್ದಾರೆ. ಇದೇ ನಿವು ಮಾಡಿದ ತಪ್ಪಿಗೆ ಮೊದಲ ಸಾಕ್ಷಿ ಎಂದು ಟೀಕಿಸಿದರು.
ನೀವು ತಪ್ಪು ಮಾಡಿಲ್ಲ ಎಂದಾದರೆ, ಮುಡಾ ಅಧ್ಯಕ್ಷ ಮರಿಗೌಡರ ರಾಜೀನಾಮೆಯನ್ನು ಏಕೆ ಪಡೆದರು?, ಮುಡಾ ಕಾರ್ಯದರ್ಶಿಯವರನ್ನು ಅಮಾನತು ಮಾಡಿದ್ದು ಏಕೆ?, ಭ್ರಷ್ಟಾಚಾರ ಮಾಡದ ಸಿಎಂ ಇಷ್ಟೆಲ್ಲ ಮಾಡಿದ್ದು ಹೇಗೆ ಎಂದು ನಿಮ ಮೇಲಿನ ಆರೋಪ ಮುಚ್ಚಿ ಹಾಕುವ ಸಲುವಾಗಿ ಲೋಕಾಯುಕ್ತವನ್ನೇ ಮುಚ್ಚಿದವರು ನೀವು ಎಂದು ಸಿಎಂ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.
ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ ಸಿಎಂ ತಕ್ಷಣವೇ ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇ.ಡಿ ಅಧಿಕಾರಿಗಳು ಸಿಎಂ ಕುಟುಂಬವನ್ನು ತನಿಖೆಗೊಳಪಡಿಸಬೇಕು. ಮುಡಾದಲ್ಲಿ ದೊಡ್ಡದೊಡ್ಡ ತಿಮಿಂಗಿಲಗಳಿವೆ. ಮರಿಗೌಡ ಸಣ್ಣ ಮೀನು. ದೊಡ್ಡವು ವಿಧಾನಸೌಧದಲ್ಲಿವೆ ಅವುಗಳನ್ನೂ ಹಿಡಿಯಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಪರವಾಗಿ ಯೋಚನೆ ಮಾಡುತ್ತ ಶಾಂತಿಯುತ ರಾಜ್ಯವಾಗಿ ಕರ್ನಾಟಕ ಕಾಣಿಸಿಕೊಂಡಿತ್ತು. ಬೇರೆ ರಾಜ್ಯದ ಜನ ಇಲ್ಲಿ ಬಂದು ನೆಲೆಸಲು ಇಷ್ಟ ಪಡುತ್ತಿದ್ದರು. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಬಂದ ಮಳೆ ಇಡೀ ನಗರವನ್ನೇ ಅಲ್ಲೋಲಕಲ್ಲೋಕಗೊಳಿಸಿದೆ. ಸರ್ಕಾರದ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ಇದೆ. ಇದು ಹಣ ಮಾಡುವುದೇ ಒಂದು ಕೆಲಸ ಎನ್ನುವಂತೆ ಆಗಿದೆ ಟೀಕಾ ಪ್ರಹಾರ ನಡೆಸಿದರು.
ಸಿದ್ದರಾಮಯ್ಯ ಸಿಎಂ ಆಗಿ ಹಣಕಾಸು ಸಚಿವರಾಗಿರುವುದು ಭ್ರಷ್ಟಾಚಾರ ಮಾಡಲು ಎನ್ನುವಂತಾಗಿದೆ. ವಾಲೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಕಾಂಗ್ರೆಸ್ ಚುನಾವಣೆ ಸಲುವಾಗಿಯೇ ಆಗಿದೆ. ಪರಿಶಿಷ್ಟ ವರ್ಗಕ್ಕೆ ಖರ್ಚಾಗಬೇಕಿದ್ದ ಹಣ ಪಕ್ಷದ ಕಾರ್ಯಕ್ಕೆ ಬಳಕೆಯಾಗಿದೆ. ಪರಿಶುದ್ದ ರಾಜಕಾರಣಿ ನಾನು ಎನ್ನುವ ಸಿಎಂ ಅವರ ಹೇಳಿಕೆ, ಬಣ್ಣನೆ ಹಲವು ಹಗರಣಗಳ ಮೂಲಕ ಅದಕ್ಕೆ ವಿರುದ್ಧ ಎನ್ನುವುದನ್ನು ತೋರಿಸಿದೆ ಎಂದು ಶೋಭಾಕರಂದ್ಲಾಜೆ ಸಿಎಂ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.