Friday, November 22, 2024
Homeರಾಜಕೀಯ | Politics"ಹಿಟ್ಲರ್‌ ಸಿದ್ದರಾಮಯ್ಯ ಆಡಳಿತದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ" : ಶೋಭಾ ಕರಂದ್ಲಾಜೆ ಕೆಂಡ

“ಹಿಟ್ಲರ್‌ ಸಿದ್ದರಾಮಯ್ಯ ಆಡಳಿತದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ” : ಶೋಭಾ ಕರಂದ್ಲಾಜೆ ಕೆಂಡ

Union Minister Shobha Karandlaje Criticizes Karnataka CM Siddaramaiah Over Mandya Clashes

ಬೆಂಗಳೂರು, ಸೆ.19- ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಹಿಟ್ಲರ್‌ ಆಗಿದ್ದು, ಕರ್ನಾಟಕ ರಾಜ್ಯದಲ್ಲಿ ಒಂದು ರೀತಿಯ ಆಘೋಷಿತ ತುರ್ತು ಪರಿಸ್ಥಿತಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಹರೀಶ್‌ ಪುಂಜಾ,

ಬಸನಗೌಡ ಪಾಟೀಲ್‌ ಯತ್ನಾಳ್‌, ಭರತ್‌ ಶೆಟ್ಟಿ ಸೇರಿದಂತೆ ಹಲವರ ಮೇಲೆ ಎ್‌‍ಐಆರ್‌ ದಾಖಲಾಗುತ್ತಿದೆ. ಕರ್ನಾಟಕದಲ್ಲಿ ಒಂದು ರೀತಿಯ ಅಘೋಷಿತ ತುರ್ತುಪರಿಸ್ಥಿತಿ ಎಂದು ಟೀಕಾ ಪ್ರಹಾರ ನಡೆಸಿದರು. ಬಿಜೆಪಿಯ ಶಾಸಕರು, ಸಂಸದರ ಮೇಲೆ ಎ್‌‍ಐಆರ್‌ ದಾಖಲಿಸುವ ಮೂಲಕ ನಮನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ.

ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ಅವರು ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಅಂದರೂ ಮಂಗಳೂರಿನಲ್ಲಿ ಅವರ ವಿರುದ್ಧ ಎ್‌‍ಐಆರ್‌ ದಾಖಲಾಗಲಿಲ್ಲ. ಸಬ್‌ ಇ್ಸ್‌‍ಪೆಕ್ಟರ್‌ ಪರಶು ರಾಂ ಅವರು ಆತಹತ್ಯೆ ಮಾಡಿಕೊಂಡರೂ ಶಾಸಕ ಚನ್ನರೆಡ್ಡಿ ಹಾಗೂ ಅವರ ಮಗ ಕಿರುಕುಳ ಕೊಡುತ್ತಿದ್ದಾರೆ ಎಂದು ಹೇಳಿದರೂ ಅವರ ವಿರುದ್ಧ ದೂರು ದಾಖಲಾಗಿಲ್ಲ. ಇಂತಹ ತಾರತಮ್ಯ ಏಕೆ ಎಂದು ಸಿಎಂ ಸಿದ್ಧರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು.

ಮಾಜಿ ಸಚಿವ ಬಿ. ನಾಗೇಂದ್ರ ಅವರು ವಾಲೀಕಿ ನಿಗಮದಲ್ಲಿ ಕೋಟ್ಯಾಂತರ ರೂ. ಗುಳುಂ ಮಾಡಿದರೂ ಎ್‌‍ಐಆರ್‌ನಲ್ಲಿ ಅವರ ಹೆಸರೇ ಇಲ್ಲ. ಎಸ್‌‍ಐಟಿಯಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ? ಎಂದು ಕಿಡಿಕಾರಿದರು.

ಈ ತನಕ ಗಣೇಶನ ಮೂರ್ತಿಯನ್ನು ಪೊಲೀಸ್‌‍ ವ್ಯಾನ್‌ನಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದ್ದಾರೆ. ನಾಗಮಂಗಲಕ್ಕೆ ಬಂದವರು ಕೇರಳದವರು ಎಂದು ಸ್ಥಳೀಯರೇ ಹೇಳಿದ್ದಾರೆ. ಕೇರಳದವರು ಇಲ್ಲಿಗೆ ಹೇಗೆ ಬಂದರು..? ಇದೊಂದು ಚಿಕ್ಕ ಘಟನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳುತ್ತಾರೆ. ಯಾವುದು ಚಿಕ್ಕ ಘಟನೆ ಸಿದ್ಧರಾಮಯ್ಯನವರೇ? ಬೆಳಗಾವಿಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಮೂವರಿಗೆ ಚಾಕು ಇರಿತವಾಗಿದೆ ಎಂದು ಆರೋಪಗಳ ಸುರಿಮಳೆಗೈದರು.

ರಾಜ್ಯದಲ್ಲಿ ಮೊದಲ ಬಾರಿಗೆ ಪ್ಯಾಲೆಸ್ತೀನ್ ಧ್ವಜ ಹಾರಿಸಲಾಗಿದೆ. ಬೆಂಗಳೂರಿನಲ್ಲಿ ತ್ರಿವರ್ಣ ಧ್ವಜ ತೆಗೆದು ಉರ್ದುವಿನಲ್ಲಿ ಬರೆಯಲಾಗಿದೆ.ಇದು ರಾಜಧಾನಿಯಲ್ಲಿ ಆಗಿದೆ. ಇಷ್ಟು ಧೈರ್ಯ ಹೇಗೆ ಬಂದಿದೆ? ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯಿತು.ನಿಮ ಅಽ ಕಾರ ಇತ್ತು. ಆಗ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದರು.

ಎ್‌‍ಎಸ್‌‍ಎಲ್‌ ವರದಿ ಬಳಿಕ FIR ದಾಖಲಿಸಿಕೊಳ್ಳಲಾಯಿತು. ಚಿಕ್ಕಪೇಟೆಯಲ್ಲಿ ಹನುಮಾನ್‌ ಚಾಲೀಸ್‌‍ ಹಾಕ್ಕಿದ್ದಕ್ಕೆ ಗಲಾಟೆ ಮಾಡಿ ಹಲ್ಲೆ ನಡೆಸಿದರು. ಇಂದು ನನ್ನ ಹಾಗೂ ಆರ್‌. ಅಶೋಕ್‌ ಅವರ FIR ಹಾಕಿದ್ದೀರಿ. ಇದು ಯಾವ ಕಾರಣಕ್ಕೆ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ನೀವು ಓಲೈಕೆ ರಾಜಕಾರಣ ಮಾಡುವುದಕ್ಕೆ ಬಹುಸಂಖ್ಯಾತರನ್ನು ಕಡೆಗಣಿಸುತ್ತಿದ್ದೀರಿ.

ನೀವು ಗಲಭೆ ನಡೆದ ಸ್ಥಳಕ್ಕೆ ಹೋಗಿದ್ದೀರಾ? ನಿಮ ರಾಷ್ಟ್ರೀಯ ನಾಯಕರು ಪಾರ್ಲಿಮೆಂಟ್‌ನಲ್ಲಿ ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆ. ಅವರು ಬರಲು ಆಗದೇ ಹೋಗಬಹುದು. ನೀವು ಏಕೆ ಹೋಗಿಲ್ಲ. ನಾಗಮಂಗಲ ನಿಮಗೆ ಎಷ್ಟು ದೂರವಿದೆ?
ಅಲ್ಪಸಂಖ್ಯಾತರು ಇಷ್ಟು ಮಾಡಲು ಇಂದು ನೀವು ಕೊಟ್ಟಿರುವ ಸಲುಗೆ ಕಾರಣ. ಕರ್ನಾಟಕ ರಾಜ್ಯದಲ್ಲಿ ನಿಮಿಂದ ಗಲಭೆಗಳು ನಡೆಯುತ್ತಿವೆ. ಎಲ್ಲೆಂದರಲ್ಲಿ ಧ್ವಜ ಹಾರಿಸುತ್ತಿದ್ದಾರೆ. ಅದಕ್ಕೆ ಕ್ರಮ ಏನು? ದೇಶದ ಬಾವುಟ ಬದಲಾವಣೆ ಮಾಡಿದ್ದಾರೆ. ಇವರ ಮೇಲೆ ಹಾಕಿದ ದೂರು ವಾಪಸ್‌‍ ತೆಗೆದುಕೊಂಡಿದ್ದೀರಿ. ಇಂತಹವರನ್ನು ನೀವು ಹೊರಗೆ ಬಿಟ್ಟ ಕಾರಣ, ಇದೆಲ್ಲಾ ನಡೆಯುತ್ತಿದೆ. ಸಿದ್ಧರಾಮಯ್ಯ ಒಂದು ರೀತಿ ಹಿಟ್ಲರ್‌ ರಾಜಕಾರಣಿ ಎಂದು ಟೀಕಾ ಪ್ರಹಾರ ಮಾಡಿದರು.

ಪೊಲೀಸ್‌‍ ಠಾಣೆಯಲ್ಲಿ ಒಂದು ಪಕ್ಷದ ಎ್‌‍ಐಆರ್‌ ತೆಗೆದುಕೊಳ್ಳುತ್ತಾರೆ. ಆದರೆ, ಮತ್ತೊಂದು ಪಕ್ಷದ ಎ್‌‍ಐಆರ್‌ ತೆಗೆದುಕೊಳ್ಳುತ್ತಿಲ್ಲ.ನಾವು ಯಾವ ಎ್‌‍ಐಆರ್‌ಗೂ ಹೆದರುವುದಿಲ್ಲ. ಗಣೇಶನನ್ನು ಪೊಲೀಸ್‌‍ ವ್ಯಾನ್‌ನಲ್ಲಿ ಕೂರಿಸುತ್ತೇನೆ ಅಂದರೆ ಏನು ನಡೆಯುತ್ತಿದೆ? ದ್ವೇಷದ ರಾಜಕಾರಣ ಮಾಡುತ್ತಿರುವವರು ಕಾಂಗ್ರೆಸ್‌‍ನವರು ಎಂದರು.

ಒಕ್ಕಲಿಗ ಹೆಣ್ಣುಮಕ್ಕಳ ವಿರುದ್ಧ ಶಾಸಕ ಮುನಿರತ್ನ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶೋಭಾ ಕರದ್ಲಾಂಜೆ, ಎ್‌‍ಎಸ್‌‍ಎಲ್ ವರದಿ ಬರಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಎಂದು ಆಕ್ಷೇಪಿಸಿದರು.
ತಮ ವಿರುದ್ದ ಪೊಲೀಸರು ಎ್‌‍ಐಆರ್‌ ದಾಖಲು ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಹೋರಾಟದಿಂದಲೇ ಮೇಲೆ ಬಂದವಳು.

ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ನಾನು ಸುಳ್ಯ, ಪುತ್ತೂರು, ಮಂಗಳೂರು, ಕಲ್ಲಡ್ಕದಲ್ಲಿ ಹೋರಾಟ ಮಾಡಿ ಬಂದವಳು. ಅವರು ನಮ ವಿರುದ್ಧ ದಾಖಲಾಗಿರುವ ಎ್‌‍ಐಆರ್‌ ಮೇಲೆ ಬಂಧನಕ್ಕೆ ಬರಬಹುದು. ನಾವು ಬಂಧನಕ್ಕೆ ಒಳಗಾಗುತ್ತೇವೆ. ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.

RELATED ARTICLES

Latest News