ಬೆಂಗಳೂರು,ಡಿ.13- ಕ್ರಿಸ್‌ಮಸ್, ಹೊಸ ವರ್ಷವೆಂದರೆ ನಗರದಲ್ಲಿರುವವರ ಮನಸ್ಸಿನಲ್ಲಿ ಮೂಡುವ ಚಿತ್ರ ವಾರ್ಷಿಕ ಕೇಕ್ ಉತ್ಸವ, ಅರಮನೆ ಮೈದಾನ ತ್ರಿಪುರ ವಾಸಿನಿಯಲ್ಲಿ ಇಂದಿನಿಂದ ಜನವರಿ 1ರವರೆಗೆ 50ನೇ ವರ್ಷದ ಕೇಕ್ ಶೋ ಆಯೋಜಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಪ್ರದರ್ಶನವಿರುತ್ತದೆ.
ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸೃಜನಶೀಲತೆ ಮತ್ತು ಕರಕುಶಲತೆಯ ವಿಸಯಕಾರಿ ಪ್ರತಿರೂಪವಾಗಿ ಬೆಳೆದಿರುವ ಈ ಕೇಕ್ ಉತ್ಸವ ಈಗ ಮತ್ತೆ ನಗರಕ್ಕೆ ಕೇಕ್ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.
ಇನ್ಸಿಟ್ಯೂಟ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್‌್ಸ ಹಾಗೂ ಮೈ ಬೇಕ್ ಮಾರ್ಟ್ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿರುವ ಈ ಉತ್ಸವ ಅನುಭವಿ ಕೇಕ್ ತರಬೇತುದಾರರು, ಈ ಕಲೆಗಾಗಿ ತಮ ಜೀವನ ಮುಡಿಪಾಗಿಟ್ಟಿರುವ ವಿದ್ಯಾರ್ಥಿಗಳು ಮತ್ತು ನುರಿತ ಸಕ್ಕರೆ ಕಲಾವಿದರ ಅಸಾಧಾರಣ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.
ಎ ಸೆಲೆಬ್ರೇಷನ್ ಆಫ್ ಆರ್ಟ್: ಸುವರ್ಣ ಮಹೋತ್ಸವ ಈ ವರ್ಷದಲ್ಲಿ , ಕೇಕ ಶೋ 50 ವರ್ಷಗಳ 50 ಸಿಹಿಯ ಕನಸನ್ನು ಪ್ರಸುತ್ತಪಡಿಸುತ್ತದೆ. ವೈವಿಧ್ಯಮಯ ವಿನ್ಯಾಸಗಳು ಮತ್ತು ಸಂಸ್ಕೃತಿಗಳಾದ್ಯಂತ ಕಲಾತಕ ಅಭಿವ್ಯಕ್ತಿಯನ್ನು ಆಚರಿಸುವ ಥೀಮ ಈ ಬಾರಿಯದ್ದು. ಈ ಪ್ರದರ್ಶನವು 20 ಕೇಕ್ ಕಲಾ ಕೃತಿಗಳಿರುತ್ತವೆ. ಪ್ರತಿಯೊಂದು ಕೂಡಾ ಅನನ್ಯವಾಗಿದ್ದು, ನೋಡುಗರನ್ನು ಕಲಾ ಲೋಕಕ್ಕೆ ಕೊಂಡೊಯ್ಯಲಿದೆ.
ರಾಮ ಮಂದಿರ: ಭಕ್ತಿಯ ಸಮರ್ಪಣೆ. ಖಾದ್ಯಾಯುತ, ಸಕ್ಕರೆ ಪಾಕದಿಂದ ರೂಪಿಸಲಾದ ಸಿಂಹಗಳು, ಆನೆಗಳು ಮತ್ತು ಹನುಮಾನ್ ಒಳಗೊಂಡ ಸಂಕೀರ್ಣವಾದ ದೇವಾಲಯದ ವಾಸ್ತುಶಿಲ್ಪವನ್ನು ಪ್ರತಿಫಲಿಸುವ 850-ಕಿಲೋ ಮೇರುಕೃತಿ ಈ ರಾಮ ಮಂದಿರ.
ಸಕ್ಕರೆಯಿಂ ನಿರ್ಮಿಸಲಾದ ಗಾಜಿನ ಮನೆಯ ಉದ್ಯಾನದಿಂದ ಹಿಡಿದು ಬೆಂಗಳೂರಿನ ಸಂಸ್ಥಾಪಕರನ್ನು ಕೊಂಡಾಡುವ ಕೆಂಪೇಗೌಡ ಪರಂಪರೆ ವರೆಗೆ ಈ ಎಲ್ಲಾ ಕೇಕ್‌ಗಳು ಶಂತನು, ಮಹೇಶ್, ಪೂರ್ವ ಮತ್ತು ನರ್ಮತೆಯಂತಹ ಪ್ರಸಿದ್ಧ ಪ್ರತಿಭಾವಂತ ಕಲಾವಿದರ ತಂಡಗಳ ಪ್ರತಿಭೆ, ಕರಕುಶಲತೆಯನ್ನು ಪ್ರತಿಬಿಂಬಿಸುತ್ತದೆ.