Thursday, July 4, 2024
Homeಕ್ರೀಡಾ ಸುದ್ದಿಟ್ವೆಂಟಿ-20 ವಿಶ್ವಕಪ್‌ : ಅಮೆರಿಕಾ ವಿರುದ್ದ ವೆಸ್ಟ್‌ಇಂಡೀಸ್‌‍ ಭರ್ಜರಿ ಜಯ

ಟ್ವೆಂಟಿ-20 ವಿಶ್ವಕಪ್‌ : ಅಮೆರಿಕಾ ವಿರುದ್ದ ವೆಸ್ಟ್‌ಇಂಡೀಸ್‌‍ ಭರ್ಜರಿ ಜಯ

ಬ್ರಿಡ್ಜ್ ಟೌನ್ (ಬಾರ್ಬಡೋಸ್‌‍), ಜೂನ್‌ 22 -ಟಿ-20 ವಿಶ್ವಕಪ್‌ನಲ್ಲಿ ಇಂದು ವೆಸ್ಟ್‌ ಇಂಡೀಸ್‌‍ ಅಮೋಘ ಜಯ ಸಾಧಿಸಿದೆ. ಗ್ರೂಪ್‌ 2 ವಿಭಾಗದ ಸೂಪರ್‌-8 ಪಂದ್ಯದಲ್ಲಿ ಅಮೆರಿಕ ಹೀನಾಯ ಸೋಲು ಕಂಡಿದ್ದು ,ಅನುಭವ ಕೊರತೆಯಿಂದ ಮುಗ್ಗರಿಸಿದೆ.ಮೊದಲು ಬ್ಯಾಟಿಂಗ್‌ ಮಾಡಿದ ಅಮೆರಿಕ ಆಟಗಾರರು ರನ್‌ ಗಳಿಸಲು ಪರಿತಪಿಸಿದರು.

ಅಮೆರಿಕ ತಂಡದ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು ಮಧ್ಯಮ ಕ್ರಮಾಂಕದಲ್ಲಿ ಆಂಡ್ರೀಸ್‌‍ ಗೌಸ್‌‍ (29) ಮತ್ತು ನಿತೀಶ್‌ ಕುಮಾರ್‌ (20) ಬಿಟ್ಟರೇ ಬೇರೆ ಯಾರು ಎರಡಂಕಿ ಮುಟ್ಟಲಿಲ್ಲ .ವೇಗಿಗಳ ದಾಳಿಗೆ ತತ್ತರಿಸಿ ಯುಎಸ್‌‍ಎ 19.5 ಓವರ್‌ಗಳಲ್ಲಿ 128 ರನ್‌ಗೆ ಆಲೌಟ್‌ ಆಯಿತು ಆಂಡ್ರೆ ರಸೆಲ್‌ (3/31) ಮತ್ತು ರೋಸ್ಟನ್‌ ಚೇಸ್‍ (3/19)ಮಾರಕ ದಾಳಿ ಎದುರಾಳಿಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಯಿತು.

ಸುಲಭ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್‌ಇಂಡೀಸ್‌‍ ಆರಂಭಿಕ ಜಾನ್ಸನ್‌ ಚಾರ್ಲ್ಸ್‌ (14) ವಿಕೆಟ್‌ ಬೇಗನೆ ಕಳೆದುಕೊಂಡರೂ ಅನಂತರ ಬಂದ ನಿಕೋಲಸ್‌‍ ಪೂರನ್‌ ಮತ್ತು ಹೋಪ್‌ (82) ಜೋಡಿ ಬೌಂಡರಿ,ಸಿಕ್ಸರ್‌ ಸುರಿಮಳೆ ಸುರಿಸಿ ಘರ್ಜಿಸಿದರು.ಅಮೆರಿಕ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು ಇದರ ಪರಿಣಾಮ ವೆಸ್ಟ್‌ ಇಂಡೀಸ್‌‍ ಕೇವಲ 10.5 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿ ಸಂಭ್ರಮಿಸಿದರು.

ಹೋಪ್‌ ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳೊಂದಿಗೆ ಕೇವಲ 39 ಎಸೆತಗಳಲ್ಲಿ ಔಟಾಗದೆ 82 ರನ್‌ ಗಳಿಸಿದರೆ , ಪೂರನ್‌ 13 ಎಸೆತಗಳಲ್ಲಿ ಮೂರು ಸಿಕ್ಸರ್‌ ಮತ್ತು ಒಂದು ಬೌಂಡರಿಯೊಂದಿಗೆ 27 ರನ್‌ ಗಳಿಸಿ ಅಜೇಯರಾಗಿ ಉಳಿದರು

ಈ ಗೆಲುವಿನೊಂದಿಗೆ ವೆಸ್ಟ್‌ಇಂಡೀಸ್‌‍ ತಂಡ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಬುಧವಾರ ಇಂಗ್ಲೆಂಡ್‌ನಿಂದ ಎಂಟು ವಿಕೆಟ್‌ಗಳ ಸೋಲು ಅನುಭವಿಸಿದ ಕೆರಿಬಿಯನ್‌ ತಂಡವು ಈಗ ಎರಡು ಅಂಕದ ಜೊತೆ ರನ್‌ ರೇಟ್‌ (1.814)ನಲ್ಲಿ ಎರಡನೇ ಸ್ಥಾನದಲ್ಲಿದೆ.

ಇಂಗ್ಲೆಂಡ್‌ ವಿರುದ್ಧ ಎಂಟು ವಿಕೆಟ್‌ಗಳ ಸೋಲು ಕೆರಿಬಿಯನ್‌ ತಂಡ ಮರೆತಿದೆ.ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ ದಕ್ಷಿಣ ಆಫ್ರಿಕಾ 9 ರನ್‌ಗಳ ರೋಚಕ ಜಯ ಸಾಧಿಸಿದೆ.ಒಟ್ಟಾರೆ ಗ್ರೂಪ್‌ ಬಿ ವಿಭಾಗದಲ್ಲಿ ಸಮೀಫೈನಲ್‌ಗೆ ಎಂಟ್ರಿ ಕೊಡಲು ತಂಡಗಳ ಜಿದ್ದಾ ಜಿದ್ದಿ ಕಾಳಗ ನಡೆಯುತ್ತಿದೆ.

ಸಂಕ್ಷಿಪ್ತ ಸ್ಕೋರ್‌ಗಳು:
ಯುಎಸ್‌‍ಎ 19.5 ಓವರ್‌ಗಳಲ್ಲಿ 128 (ಆಂಡ್ರೀಸ್‌‍ ಗೌಸ್‌‍ 29, ನಿತೀಶ್‌ ಕುಮಾರ್‌ 20; ಆಂಡ್ರೆ ರಸೆಲ್‌ 3/31, ರೋಸ್ಟನ್‌ ಚೇಸ್ 3/19)

ವೆಸ್ಟ್‌ಇಂಡೀಸ್‌‍ :
10.5 ಓವರ್‌ಗಳಲ್ಲಿ 130/1 (ಶಾಯಿ ಹೋಪ್‌ 82, ನಿಕೋಲಸ್‌‍ ಪೂರನ್‌ 27; ಹರ್ಮೀತ್‌ ಸಿಂಗ್ 1/18)
ಫಲಿತಾಂಶ : ವೆಸ್ಟ್‌ಇಂಡೀಸ್‌‍ಗೆ 9 ವಿಕೆಟ್ಗಳ ಜಯ

RELATED ARTICLES

Latest News