Saturday, July 26, 2025
Homeರಾಜ್ಯಧರ್ಮಸ್ಥಳದ ಸುತ್ತ ಅಸಹಜ ಸಾವುಗಳ ಪ್ರಕರಣ : ಕಾರ್ಯಾಚರಣೆಗಿಳಿದ ಎಸ್‌ಐಟಿ ತಂಡ

ಧರ್ಮಸ್ಥಳದ ಸುತ್ತ ಅಸಹಜ ಸಾವುಗಳ ಪ್ರಕರಣ : ಕಾರ್ಯಾಚರಣೆಗಿಳಿದ ಎಸ್‌ಐಟಿ ತಂಡ

Unnatural deaths around Dharmasthala: SIT team in action

ಬೆಂಗಳೂರು,ಜು.24- ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿರುವ ಶ್ರೀ ಕ್ಷೇತ್ರದ ಸುತ್ತಮುತ್ತ ನಡೆದಿದೆ ಎನ್ನಲಾದ ಸಾಮೂಹಿಕ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿರುವ ಎಸ್‌‍ಐಟಿ ತಂಡ ಇಂದು ಧರ್ಮಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದೆ. ವ್ಯಾಪಕ ಸಾರ್ವಜನಿಕ ಆಕೋಶಕ್ಕೆ ಕಾರಣವಾಗಿರುವ ಗೊಂದಲದ ಆರೋಪಗಳ ಬಗ್ಗೆ ಈ ತಂಡವು ಸಮಗ್ರ ಮಾಹಿತಿಗಳನ್ನು ಕಲೆಹಾಕಲಿವೆ.

ಎಸ್‌‍ಐಟಿ ರಚನೆಯಾದ ಬೆನ್ನಲ್ಲೆ ಡಿಜಿಪಿ ಪ್ರಣವ್‌ ಮೊಹಂತಿ ಅವರು ಎಸ್‌‍ಐಟಿ ತಂಡದ ಅಧಿಕಾರಿಗಳ ಜೊತೆ ಸಭೆ ನಡೆಸಿದರು.ಈ ನಡುವೆ ಡಿಐಜಿ ಎಂ.ಎನ್‌ ಅನುಚೇತ್‌ ಅವರು ಕಾರ್ಯಸೂಚಿ ಸಿದ್ದಪಡಿಸಿ, ಡಿವೈಎಸ್‌‍ಪಿ ನೇತೃತ್ವದ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ.

ಡಿವೈಎಸ್‌‍ಪಿ ನೇತೃತ್ವದಲ್ಲಿ ಪ್ರಕರಣ ಸಂಬಂಧ ತುರ್ತು ಕೈಗೊಳ್ಳಬೇಕಾದ ಕಾರ್ಯಗಳ ವಿವರಣೆ ಹಾಗೂ ನ್ಯಾಯಾಲಯದಿಂದ ಅನುಮತಿ ಪಡೆಯುವ ಬಗ್ಗೆ ಚರ್ಚಿಸಲಾಯಿತು.ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾಗಿರುವ ಅಸಹಜ ಸಾವುಗಳ ಕುರಿತಾಗಿ ಕೇಳಿ ಬಂದ ಆರೋಪಗಳಿಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿ ನೀಡಿರುವ ದೂರಿನನ್ವಯ ಆತನನ್ನು ಕರೆ ತಂದು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ಪಡೆಯುವ ಸಾಧ್ಯತೆ ಇದೆ.

ಅನಾಮಧೇಯ ವ್ಯಕ್ತಿ ಶವಗಳನ್ನು ಹೂಳಿರುವ ಜಾಗಗಳಲ್ಲಿ ತನಿಖಾ ತಂಡ ಶೋಧ ನಡೆಸಿ, ಪರಿಶೀಲಿಸಿ, ವಿಡಿಯೋ ಚಿತ್ರೀಕರಣ ಸೇರಿದಂತೆ ಪ್ರಾಥಮಿಕ ಹಂತದ ಕಾರ್ಯಾಚರಣೆಗಳ ಬಗ್ಗೆ ಡಿಐಜಿ ಅನುಚೇತ್‌ ಅವರು ತನಿಖಾ ತಂಡದ ಜೊತೆ ಸರಣೆ ಸಭೆಗಳನ್ನು ನಡೆಸುತ್ತಿದ್ದಾರೆ. ಸಿಬ್ಬಂದಿಗಳು ನಿರ್ವಹಿಸಬೇಕಾದ ಕೆಲಸ ಕಾರ್ಯಗಳನ್ನು ಅನುಚೇತ್‌ ಅವರು ಹಂಚಿಕೆ ಮಾಡಿ ಇಂಚಿಂಚು ಮಾಹಿತಿಗಳನ್ನು ಸಂಗ್ರಹಿಸುವಂತೆ ಸೂಚಿಸಿದ್ದಾರೆ.ಒಟ್ಟಾರೆ ಈ ಪ್ರಕರಣದ ತನಿಖೆ ಮುಗಿಯುವಷ್ಟರಲ್ಲಿ ಯಾವ ಹಂತಕ್ಕೆ ಬಂದು ನಿಲ್ಲುತ್ತದೋ ಕಾದು ನೋಡಬೇಕಿದೆ.

RELATED ARTICLES

Latest News