ಅಲಿಘರ್ (ಯುಪಿ), ಫೆ.27-ನಿಗೂಢವಾಗಿ ನಾಪತ್ತೆಯಾಗಿದ್ದ ಪೊಲೀಸ್ ಪೇದೆಯೊಬ್ಬರನ್ನು ಕೊಂದ ಇಬ್ಬರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಚರಂಡಿಯಿಂದ ತಡರಾತ್ರಿ ಕಾನ್‌ಸ್ಟೆಬಲ್ ಅಮಿತ್ ಕುಮಾರ್ ಶವವನ್ನು ಪತ್ತೆಯಾಗಿತ್ತು.ಬುಲಂದ್‌ಶರ್ಹ ಜಿಲ್ಲೆಯಲ್ಲಿ ಆತನ ಕುಟುಂಬ ಸ್ಥಳಕ್ಕೆ ಆಗಮಿಸಿ ಗುರುತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಇಬ್ಬರನ್ನು ಗುರುತಿಸಲಾಗಿದ್ದು, ಕಾನ್‌ಸ್ಟೆಬಲ್‌ನನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ, ಅಮಿತ್ ಕುಮಾರ್ ಅವರನ್ನು ಅಲಿಘರ್‌ನಲ್ಲಿ ಸಶಸ್ತ್ರ ಪೊಲೀಸ್ ಪಡೆ(ಪಿಎಸಿ)ಯ 38 ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.ಕಳೆದ ಫೆ.18 ರಂದು ತಮ್ಮ ಊರಿಗೆ ತೆರಳಿ ಕರ್ತವ್ಯಕ್ಕೆ ಹಿಂತಿರುಗುವಾಗ ಅವರು ನಾಪತ್ತೆಯಾಗಿದ್ದರು.
ಸಿಸಿಟಿವಿ ದೃಶ್ಯಾವಳಿಯಲ್ಲಿ ಕುಮಾರ್ ಇಬ್ಬರು ಆರೋಪಿಗಳೊಂದಿಗೆ ಬಸ್‌ನಿಂದ ಇಳಿದು ಮದ್ಯದ ಅಂಗಡಿಗೆ ಹೋಗುವುದನ್ನು ತೋರಿಸಿದೆ, ಅಲ್ಲಿ ಮೂವರು ಮದ್ಯ ಸೇವಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ನಂತರ ಆರೋಪಿಯು ಕಾನ್‌ಸ್ಟೆಬಲ್‌ನನ್ನು ಸಮೀಪದ ಚರಂಡಿಗೆ ತಳ್ಳಿದ್ದು, ನಂತರ ಅವರ ವಸ್ತುಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.