Sunday, September 8, 2024
Homeರಾಷ್ಟ್ರೀಯ | Nationalಮೊಹರಂ ಗಲಾಟೆ: 15 ಜನರ ಬಂಧನ

ಮೊಹರಂ ಗಲಾಟೆ: 15 ಜನರ ಬಂಧನ

ಬಹ್ರೈಚ್ (ಯುಪಿ), ಜು.20 (ಪಿಟಿಐ) ಮೊಹರಂನಲ್ಲಿ ನಿಷೇಧಿತ ಪ್ರದೇಶಗಳಲ್ಲಿ ಧಾರ್ಮಿಕ ಮೆರವಣಿಗೆಗಳನ್ನು ನಡೆಸುವುದು, ಹರಿತವಾದ ಆಯುಧಗಳನ್ನು ಝಳಪಿಸಿರುವುದು ಮತ್ತು ಕೋಮು ಶಾಂತಿ ಕದಡುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಇಲ್ಲಿಯವರೆಗೆ 15 ಜನರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಹರಂ ದಿನದಂದು, ಪಯಾಗ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೈದಾನದಲ್ಲಿ ಹಾದುಹೋಗದಂತೆ ತಡೆಯುವ ಗುಂಪಿನ ಮೇಲೆ ತಾಜಿಯಾವನ್ನು ಹೊತ್ತಿದ್ದ ಕೆಲವರು ದಾಳಿ ಮಾಡಿಪೊರೆ ಎಂದು ವರದಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವೃಂದಾ ಶುಕ್ಲಾ ತಿಳಿಸಿದ್ದಾರೆ. ಈ ಸಂಬಂಧ FIR ದಾಖಲಿಸಲಾಗಿದ್ದು, ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ನಿಷೇಧಿತ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆ ನಡೆಸಲು ಯತ್ನಿಸಿದ ಕೆಲವರ ವಿರುದ್ಧ ನನ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು FIR ದಾಖಲಾಗಿದೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

ಕೆಲವರು ಬಹಿರಂಗವಾಗಿ ಹರಿತವಾದ ಕತ್ತಿಗಳನ್ನು ಝಳಪಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು FIR ದಾಖಲಾಗಿದ್ದು, ಈ ಪ್ರಕರಣದಲ್ಲಿ ಅಬು ತಾಲಿಬ್ ಎಂಬ ಒಬ್ಬ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

RELATED ARTICLES

Latest News