Monday, September 1, 2025
Homeರಾಷ್ಟ್ರೀಯ | Nationalಹಣೆಗೆ ತಿಲಕ ಧರಿಸಿ ತರಗತಿಗೆ ಬರದಂತೆ ಪ್ರಾಶುಂಪಾಲ ಸುತ್ತೋಲೆ : ಪೋಷಕರಿಂದ ಪ್ರತಿಭಟನೆ

ಹಣೆಗೆ ತಿಲಕ ಧರಿಸಿ ತರಗತಿಗೆ ಬರದಂತೆ ಪ್ರಾಶುಂಪಾಲ ಸುತ್ತೋಲೆ : ಪೋಷಕರಿಂದ ಪ್ರತಿಭಟನೆ

UP school row: Principal asks students to remove ‘tilak, kalawa’

ಲಖ್ನೋ,ಸೆ.1- ವಿದ್ಯಾರ್ಥಿಗಳು ಹಣೆಗೆ ತಿಲಕ ಹಾಕಿಕೊಂಡು ತರಗತಿಗೆ ಬರಬಾರದೆಂದು ಸುತ್ತೋಲೆ ಹೊರಡಿಸಿದ ಶಾಲೆಯ ಪ್ರಾಶುಂಪಾಲರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪೋಷಕರು ಮತ್ತು ಬಲಪಂಥೀಯ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ ನಡೆಸಲಾಗಿದೆ.

ತರಗತಿ ಕೋಣೆಗಳಿಗೆ ಪ್ರವೇಶಿಸುವ ಮೊದಲು ತಿಲಕ ಮತ್ತು ಕಲವಾವನ್ನು ತೆಗೆದುಹಾಕುವಂತೆ ಸೂಚಿಸಿರುವುದನ್ನು ಮಕ್ಕಳು ಪೋಷಕರಿಗೆ ತಿಳಿಸಿದಾಗ ವಿಷಯವು ಹಿಂದೂಪರ ಸಂಘಟನೆಗಳಿಗೆ ತಲುಪಿದೆ.

ಹಿಂದೂ ಜಾಗರಣ್‌ ಮಂಚ್‌ನ ಕಾರ್ಯಕರ್ತರೊಂದಿಗೆ ಆಗಮಿಸಿದ ಹಲವಾರು ಪೋಷಕರು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಸಂಘಟನೆಯ ಸ್ಥಳೀಯ ಸಂಯೋಜಕ ರವೀಂದರ್‌ ಶರ್ಮಾ, ವಿದ್ಯಾರ್ಥಿಗಳನ್ನು ಧಾರ್ಮಿಕ ಚಿಹ್ನೆಗಳನ್ನು ತೆಗೆದುಹಾಕಲು ಒತ್ತಾಯಿಸಲಾಗಿದೆ ಎಂದು ಆರೋಪಿಸಿದ್ದು, ಇದು ಪೋಷಕರನ್ನು ಅಸಮಾಧಾನಗೊಳಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ತಾರಕಕ್ಕೇರುತ್ತಿರುವಮತೆ ಪ್ರಾಂಶುಪಾಲರು ತಮ ತಪ್ಪನ್ನು ಒಪ್ಪಿಕೊಂಡು ಮತ್ತು ಕ್ಷಮೆಯಾಚಿಸಿದ್ದು, ಇದು ಮತ್ತೆ ಸಂಭವಿಸುವುದಿಲ್ಲ ಎಂದು ನಮಗೆ ಭರವಸೆ ನೀಡಿದ್ದಾರೆ. ಆದಾಗ್ಯೂ ಇಂಥ ಸಂದರ್ಭಗಳಲ್ಲಿ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

RELATED ARTICLES

Latest News