ಲಕ್ನೋ,ಮಾ.25- ಮದುವೆಯಾದ ಕೇವಲ 15 ದಿನದಲ್ಲೇ ಪತಿಯ ಕೊಲೆಗೆ ಪತ್ನಿ ಸುಫಾರಿ ನೀಡ ಕೊಲ್ಲಿಸಿದ ಘಟನೆ ಔರೈಯ ಜಿಲ್ಲೆಯಲ್ಲಿ ನಡೆದಿದೆ. ದಿಲೀಪ್ ಯಾದವ್ (24) ಕೊಲೆಯಾದ ವ್ಯಕ್ತಿಯಾಗಿದ್ದು ಪೊಲೀಸರು ಈಗ ಪ್ರಗತಿ ಯಾದವ್ (22), ಆಕೆಯ ಪ್ರಿಯಕರ ಅನುರಾಗ್ ಅಲಿಯಾಸ್ ಮನೋಜ್ ಮತ್ತು ಗುತ್ತಿಗೆ ಹಂತಕ ರಾಮ್‌ಜಿ ಚೌಧರಿಯನ್ನು ಬಂಧಿಸಲಾಗಿದೆ.
ಕಳೆದ ಮಾರ್ಚ್ 19 ರಂದು ಮೀರಟ್‌ನ ರಸ್ತೆ ಪಕ್ಕದ ಹೊಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ದಿಲೀಪ್‌ನನ್ನು ನೋಡಿದ ಜನರು ಪೊಲೀಸರಿಗೆ ವಿಷಯ ತಿಳಿಸಿದರು ನಂತರ ಆತನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ನಂತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ದಿಲೀಪ್ ಕುಟುಂಬದವರು ಮಧ್ಯ ಪ್ರದೇಶದ ಗ್ವಾಲಿಯರ್ ಮತ್ತು ನಂತರ ಆಗ್ರಾಕ್ಕೆ ಕರೆದೊಯ್ಯಲಾಯಿತು.ಆದರೂ ಮಾರ್ಚ್ 21 ರ ರಾತ್ರಿ ಮೃತಪಟ್ಟಿದ್ದರು. ಪೊಲೀಸರು ಆತನ ದೇಹದ ಮೇಲಿನ ಗಾಯವನ್ನು ನೋಡಿದಾಗ ಕೊಲೆಗೆ ಯತ್ನಿಸಿರುವುದು ತಿಳಿದು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಯಿತು.
ನಂತರ ಹಂತಕ ರಾಮ್‌ಜಿ ಚೌಧರಿಯನ್ನು ಬಂಧಿಸಿದಾಗ ಕೊಲೆಗೆ ಪ್ರಗತಿ ಮತ್ತು ಅನುರಾಗ್ 2 ಲಕ್ಷ ರೂ ಸುಫಾರಿ. ನೀಡಿರುವುದು ಹೊತ್ತಾಗಿದೆ. ಹಲವೆಡೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.