Sunday, December 22, 2024
Homeಅಂತಾರಾಷ್ಟ್ರೀಯ | Internationalಚಿಡೋ ಚಂಡಮಾರುತಕ್ಕೆ ಫ್ರಾನ್ಸ್‌ನಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಬಲಿ

ಚಿಡೋ ಚಂಡಮಾರುತಕ್ಕೆ ಫ್ರಾನ್ಸ್‌ನಲ್ಲಿ 1 ಸಾವಿರಕ್ಕೂ ಹೆಚ್ಚು ಮಂದಿ ಬಲಿ

Up to 1,000 feared dead as Cyclone Chido devastates Mayotte

ಮಾಯೋಟ್‌,ಡಿ.16- ಚಂಡಿಯಾಗಿರುವ ಚಿಡೋ ಚಂಡಮಾರುತಕ್ಕೆ ಮಾಯೋಟ್‌ ಫ್ರಾನ್ಸ್ ನಲ್ಲಿ ತತ್ತರಿಸಿಹೋಗಿದೆ. ಈಗಾಗಲೇ ಮಾರುತದ ಅಬ್ಬರಕ್ಕೆ ಒಂದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಆಫ್ರಿಕಾದ ಕರಾವಳಿಯ ಆಗ್ನೇಯ ಹಿಂದೂ ಮಹಾಸಾಗರದಲ್ಲಿರುವ ಮಾಯೋಟ್‌ ಫ್ರಾನ್ಸ್ ಮತ್ತು ಯುರೋಪಿಯನ್‌ ಒಕ್ಕೂಟದ ಬಡ ಪ್ರದೇಶವಾಗಿದೆ. ಇದು 90 ವರ್ಷಗಳಲ್ಲಿ ಮಾಯೋಟ್‌‍ಗೆ ಅಪ್ಪಳಿಸಿರುವ ಅತ್ಯಂತ ಕೆಟ್ಟ ಚಂಡಮಾರುತ ಎಂದು ಬಿಂಬಿಸಲಾಗುತ್ತಿದೆ.

ಚಿಡೋ ಚಂಡಮಾರುತ ಇದೀಗ ಆಫ್ರಿಕಾದ ಪೂರ್ವ ಕರಾವಳಿಯನ್ನು ತಲುಪಿದೆ.ಕೊಳೆಗೇರಿಗಳಲ್ಲಿ ವಾಸಿಸುವ ಅನೇಕ ಜನರು ಗಂಭೀರ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿಡೋ ಗಂಟೆಗೆ 220 ಕಿಲೋಮೀಟರ್‌ಗಿಂತಲೂ ಹೆಚ್ಚು ಗಾಳಿಯ ರಭಸವನ್ನು ಉಂಟು ಮಾಡಿತ್ತು. ಇದರಿಂದ ಹಲವಾರು ಮನೆಗಳು ಹಾನಿಗೊಳಗಾಗಿವೆ. ಮಾಯೋಟ್‌‍ನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವಾಸವಿದ್ದಾರೆ.

ಇದು ಆಫ್ರಿಕಾದ ಪೂರ್ವ ಕರಾವಳಿಯಿಂದ ಸುಮಾರು 800 ಕಿಲೋಮೀಟರ್‌ ದೂರದಲ್ಲಿರುವ ಎರಡು ಪ್ರಮುಖ ದ್ವೀಪಗಳಲ್ಲಿ ಹರಡಿದೆ. ಕೆಲವೆಡೆ ಇಡೀ ಪ್ರದೇಶವೇ ನಾಶವಾಗಿದೆ. ಹಲವು ಮರಗಳು ಧರೆಗುರುಳಿದ್ದು, ದೋಣಿಗಳು ಉರುಳಿ ಬಿದ್ದಿವೆ ಅಥವಾ ಮುಳುಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಫ್ರೆಂಚ್‌ ಅಧ್ಯಕ್ಷ ಎವ್ಯಾನುಯೆಲ್‌ ವ್ಯಾಕ್ರನ್‌ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

RELATED ARTICLES

Latest News